ಗೃಹ ಇಲಾಖೆಯ ದೇಹ-ಮಿದುಳು ಮತ್ತಷ್ಟು ಬಲಶಾಲಿ

ಬೆಂಗಳೂರು: ಶಾಂತಿ-ಸಹನೆ ಹಾಗೂ ಸಹಬಾಳ್ವೆಗೆ ಹೆಸರಾದ ಕರ್ನಾಟಕದ 6.5 ಕೋಟಿ ಜನರ ಸುರಕ್ಷತೆಗೆ ಗೃಹ ಇಲಾಖೆಯ 80 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಕಟಿಬದ್ಧರಾಗಿದ್ದಾರೆ. ಕಳೆದ ಆರು ತಿಂಗಳಿನಿಂದ ಕಾನೂನು ಮತ್ತು ಸುವ್ಯವಸ್ಥೆಯನ್ನು ಯಶಸ್ವಿಯಾಗಿ ನಿಭಾಯಿಸುತ್ತ ಬಂದಿರುವ ಉಪ ಮುಖ್ಯಮಂತ್ರಿಗಳೂ ಆದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಇಲಾಖೆಯ ಸುಧಾರಣೆಯತ್ತ ಮಹತ್ವದ ಹೆಜ್ಜೆ ಇರಿಸಿದ್ದಾರೆ.

ರಾಜ್ಯ ಪೊಲೀಸ್ ವ್ಯವಸ್ಥೆಯ ಕೇಂದ್ರ ಸ್ಥಾನವಾಗಿರುವ ರಾಜಧಾನಿ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯನ್ನು ಕಾಲಕ್ಕೆ ತಕ್ಕಂತೆ ಆಧುನೀಕರಣ ಹಾಗೂ ಅತ್ಯಾಧುನಿಕಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಯೋಜನೆ ರೂಪಿಸಿದೆ. ಸದ್ಯದ ಹಳೆಯ ಕಟ್ಟಡ ತೆರವುಗೊಳಿಸಿ, 169 ಕೋಟಿ ರೂ. ವೆಚ್ಚದಲ್ಲಿ 9 ಮಹಡಿಗಳ ಹೊಸ ಡಿಜಿಪಿ ಕಚೇರಿ ನಿರ್ವಣಕ್ಕೆ ಸರ್ಕಾರ ಮುಂದಾಗಿದೆ. ಈ ನೂತನ ಕಟ್ಟಡ ಡಿಜಿಪಿ ಕಚೇರಿ ಮಾತ್ರವಲ್ಲದೇ ಪೊಲೀಸ್ ಇಲಾಖೆಯ ಕಾರ್ಯಕ್ಷಮತೆ-ದಕ್ಷತೆ ಹೆಚ್ಚಿಸುವಂಥ ಹಲವು ಬಗೆಯ ತರಬೇತಿ ಕೇಂದ್ರಗಳನ್ನೂ ಒಳಗೊಳ್ಳಲಿದೆ.

ಇನ್ನು ರಾಜ್ಯದ ಜನಸಂಖ್ಯೆಗೆ ತಕ್ಕಂತೆ ಪೊಲೀಸ್ ಸಿಬ್ಬಂದಿ ಇರಬೇಕು ಎಂಬ ವಿಶ್ವಸಂಸ್ಥೆಯ ನಿಯಮಾನುಸಾರ ರಾಜ್ಯದ ಪೊಲೀಸ್ ಬಲವನ್ನು ಹೆಚ್ಚಿಸುವ ಕಾರ್ಯ ಸದ್ದಿಲ್ಲದೆ ನಡೆದಿದೆ. ಈಗಾಗಲೇ ಇರುವ ಸರಿಸುಮಾರು 82 ಸಾವಿರ ಸಿಬ್ಬಂದಿ ಜತೆಗೆ ಹೊಸದಾಗಿ 517 ಕೆಎಸ್​ಆರ್​ಪಿ ಪೇದೆಗಳು, 2,113 ಸಿವಿಲ್ ಪೊಲೀಸ್ ಪೇದೆಗಳು, 164 ಸಬ್ ಇನ್ಸ್​ಪೆಕ್ಟರ್​ಗಳು, 45 ಕೈಗಾರಿಕಾ ಭದ್ರತಾ ಪಡೆಯ ಸಬ್ ಇನ್ಸ್​ಪೆಕ್ಟರ್​ಗಳು, 395 ಕೈಗಾರಿಕಾ ಭದ್ರತಾ ಪಡೆ ಪೇದೆಗಳು, 668 ಸಶಸ್ತ್ರ ಮೀಸಲು ಭದ್ರತಾ ಪಡೆ ಪೇದೆಗಳು, 849 ವಿಶೇಷ ಮೀಸಲು ಪೊಲೀಸ್ ಪಡೆ ಪೇದೆಗಳ ನೇಮಕಾತಿ ಪ್ರಕ್ರಿಯೆ ವಿವಿಧ ಹಂತಗಳಲ್ಲಿ ನಡೆಯುತ್ತಿದೆ.

ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಹೊಸದಾಗಿ ತಿಲಕನಗರ ಪೊಲೀಸ್ ಠಾಣೆ ನಿರ್ವಿುಸಲಾಗಿದ್ದು, ಹೊಸದಾಗಿ ನೇಮಕಗೊಂಡ ಸಿಬ್ಬಂದಿಯನ್ನು ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಿಗೆ ನಿಯೋಜಿಸಲಾಗುತ್ತಿದೆ. ಕಾನೂನು-ಸುವ್ಯವಸ್ಥೆ, ಅಪರಾಧ ನಿಯಂತ್ರಣ, ಸಂಚಾರ ನಿರ್ವಹಣೆ ಹೀಗೆ ವಿವಿಧ ಆಯಾಮಗಳಲ್ಲಿ ಪೊಲೀಸ್ ಇಲಾಖೆಯನ್ನು ಬಲಪಡಿಸಲಾಗುತ್ತಿದೆ.

ಕೆಲಸಕ್ಕೆ ತಕ್ಕಂತೆ ಪೊಲೀಸ್ ಸಿಬ್ಬಂದಿಗೆ ವೇತನ ಮತ್ತು ಸೌಲಭ್ಯಗಳು ದಕ್ಕಬೇಕು ಎಂಬ ನಿಟ್ಟಿನಲ್ಲಿ ಈಗಾಗಲೇ ರಾಘವೇಂದ್ರ ಔರಾದ್ಕರ್ ವರದಿಯ ಶಿಫಾರಸುಗಳಂತೆ ಪೊಲೀಸರಿಗೆ ಸೌಲಭ್ಯ ಒದಗಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಜತೆಗೆ ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಬಿಡಿಎ ನಿರ್ವಣದ ಅಪಾರ್ಟ್​ವೆುಂಟ್​ಗಳಲ್ಲಿ 2 ಸಾವಿರ ಮನೆಗಳನ್ನು ಗೃಹ ಇಲಾಖೆ ಖರೀದಿಸಿ ಅವುಗಳನ್ನು ಬೆಂಗಳೂರು ನಗರದ ಪೊಲೀಸ್ ಪೇದೆಗಳಿಗೆ ವಸತಿ ಗೃಹಗಳನ್ನಾಗಿ ಒದಗಿಸಲು ತೀರ್ವನಿಸಲಾಗಿದೆ. ರಾಜ್ಯದಲ್ಲಿ ಒಟ್ಟು 11 ಸಾವಿರ ಪೊಲೀಸ್ ವಸತಿಗಳ ನಿರ್ವಣಕ್ಕೆ ಮೂರು ಹಂತಗಳ ಯೋಜನೆ ರೂಪಿಸಲಾಗಿದ್ದು, ಮುಂದಿನ 1.5 ವರ್ಷದಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ.

ಸೈಬರ್ ಲ್ಯಾಬ್ ಮೂಲಕ ಆಧುನಿಕತೆಯ ಸ್ಪರ್ಶ: ಜಗತ್ತು ಬದಲಾದಂತೆ ಅಪರಾಧದ ಸ್ವರೂಪ ಕೂಡ ಬದಲಾಗುತ್ತಿದೆ. ಪೊಲೀಸ್ ಇಲಾಖೆ ಅಪರಾಧ ಪತ್ತೆಗಾಗಿ ಅತ್ಯಾಧುನಿಕ ತಂತ್ರಜ್ಞಾನ ಮೈಗೂಡಿಸಿಕೊಳ್ಳುವುದು ಅನಿವಾರ್ಯ ಮತ್ತು ಅಗತ್ಯ. ಹೀಗಾಗಿ ಸೈಬರ್ ಕ್ರೖೆಮ್ಲ್ಲಿ ಅಪರಾಧ ಪತ್ತೆಗೆ ಇನ್ಪೋಸಿಸ್ ಪ್ರತಿಷ್ಠಾನದ ನೆರವಿನಿಂದ ರಾಜ್ಯ ಸರ್ಕಾರ ಸುಮಾರು 22 ಕೋಟಿ ರೂ. ವೆಚ್ಚದಲ್ಲಿ ಹೊಸ ತಂತ್ರಜ್ಞಾನದ ಸೈಬರ್ ಲ್ಯಾಬ್ ಸ್ಥಾಪನೆಯ ಒಪ್ಪಂದಕ್ಕೆ ಸಹಿ ಹಾಕಿದೆ. ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಪತ್ತೆ ಹಚ್ಚಲು ಅಗತ್ಯವಿರುವ ಲ್ಯಾಬ್ ನಿರ್ವಣಕ್ಕೆ ಇನ್ಪೋಸಿಸ್ ಸಹಯೋಗ ನೀಡುತ್ತಿದೆ.

ಸೈಬರ್ ಲ್ಯಾಬ್ ಹಾರ್ಡ್​ವೇರ್-ಸಾಫ್ಟ್​ವೇರ್​ಗಳ ಸ್ಥಾಪನೆಗೆ ಬಂಡವಾಳ ಹೂಡಲಾಗಿದ್ದು, ತರಬೇತಿ ಕಾರ್ಯಕ್ರಮಗಳ ಆಯೋಜನೆ, ಕಾನ್ಪರೆನ್ಸ್ ಹಾಗೂ ಡಿಜಿಟಲ್ ಫೊರೆನ್ಸಿಕ್ ವಿಶ್ಲೇಷಣಾ ಕಾರ್ಯಕ್ರಮಗಳನ್ನೂ ಯೋಜನೆ ಒಳಗೊಂಡಿದೆ. ಮುಂದಿನ 5 ವರ್ಷಗಳಲ್ಲಿ ಪ್ರಸ್ತುತ ಇರುವ ಸೈಬರ್ ಲ್ಯಾಬ್​ಗಳನ್ನು ಉನ್ನತೀಕರಿಸಿ, ಸೈಬರ್ ಹಾಗೂ ಫೊರೆನ್ಸಿಕ್ ಅಪರಾಧಗಳ ತನಿಖೆಗೆ ಅತ್ಯಂತ ಉತ್ಕೃ್ಠವಾದ ಸೌಲಭ್ಯಗಳನ್ನು ಸೃಷ್ಟಿಸುವುದು ಯೋಜನೆಯ ಉದ್ದೇಶ.

ಸಮಾಜದ ಸ್ವಾಸ್ಥ್ಯ ಕೆಡಿಸುವ ಮಾದಕ ವಸ್ತುಗಳ ನಿಗ್ರಹಕ್ಕೆ ನಮ್ಮ ಸರ್ಕಾರ ರಾಜ್ಯದ ಪ್ರತಿ ಪ್ರಜೆಯಲ್ಲಿ ಅರಿವು ಮೂಡಿಸಲು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಅಪರಾಧ ನಿಯಂತ್ರಣ ಒಂದು ಜವಾಬ್ದಾರಿಯಾದರೆ, ಅಪರಾಧ ನಡೆಯದಂತೆ ಜನರನ್ನು ಅದರಲ್ಲೂ ಹೊಸ ಪೀಳಿಗೆಯನ್ನು ಸರಿದಾರಿಯಲ್ಲಿ ನಡೆಯುವಂತೆ ಮಾಡುವುದು ಕೂಡ ಗೃಹ ಇಲಾಖೆಯ ಬದ್ಧತೆ. ಇದೇ ವೇಳೆ ಸೈಬರ್ ಲ್ಯಾಬ್ ಸ್ಥಾಪನೆ ಮೂಲಕ ಹೈಟೆಕ್ ಅಪರಾಧಗಳ ಪತ್ತೆಯಲ್ಲಿ ಸರ್ಕಾರ ಮಹತ್ವದ ಸಾಧನೆ ಮಾಡಿದೆ. ಇಲಾಖೆಯ ಮೂಲಸೌಕರ್ಯ ಅಭಿವೃದ್ಧಿಯಲ್ಲೂ ಹೊಸ ಶಕೆ ಆರಂಭಗೊಂಡಿದೆ.

| ಡಾ.ಜಿ.ಪರಮೇಶ್ವರ್ ಉಪ ಮುಖ್ಯಮಂತ್ರಿ, ಗೃಹ ಸಚಿವ

ಸಮಾಜದ ಸ್ವಾಸ್ಥ್ಯ ಆದ್ಯತೆ

ಒಂದು ಸಮಾಜ ಸರಿದಾರಿಯಲ್ಲಿ ಮುನ್ನಡೆಯಬೇಕಾದರೆ ಅಲ್ಲಿನ ಮಕ್ಕಳಿಗೆ ಉತ್ತಮ ಪರಿಸರ ಒದಗಿಸುವುದು ಸರ್ಕಾರದ ಕರ್ತವ್ಯ. ಹೀಗಾಗಿ ರಾಜ್ಯದ ಎಲ್ಲ ಸರ್ಕಾರಿ ಹಾಗೂ ಖಾಸಗಿ ವಲಯದ ಶಾಲಾ-ಕಾಲೇಜುಗಳಲ್ಲಿ ಮಾದಕವಸ್ತುಗಳ ಸೇವನೆ ಮೇಲೆ ಸಂಪೂರ್ಣ ನಿಷೇಧ ಹೇರುವ ನಿಟ್ಟಿನಲ್ಲಿ ಗೃಹ ಇಲಾಖೆ ಕ್ರಾಂತಿಕಾರಕ ನಿರ್ಧಾರವನ್ನೇ ತೆಗೆದುಕೊಂಡಿದೆ. ರಾಜ್ಯದ ಎಲ್ಲ ಶಾಲಾ-ಕಾಲೇಜುಗಳಲ್ಲಿ ಡ್ರಗ್ಸ್ ನಿಯಂತ್ರಣಕ್ಕೆ ಸಮಿತಿ ರಚಿಸಲಾಗಿದ್ದು, ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಅನುಷ್ಠಾನಗೊಳಿಸಿದೆ.


ಕಾಂಪಿಟ್ ವಿಥ್ ಚೀನಾ…!

ಬೆಂಗಳೂರು: ಜಾಗತಿಕ ಕೈಗಾರಿಕಾ ರಂಗದಲ್ಲಿ ದೊಡ್ಡಣ್ಣನಂತೆ ಬೆಳೆಯುತ್ತಿರುವ ಚೀನಾದ ನಾಗಾಲೋಟಕ್ಕೆ ಸೆಡ್ಡು ಹೊಡೆಯಲು ಸಜ್ಜಾಗಿರುವ ರಾಜ್ಯ ಸರ್ಕಾರ, ಕಾಂಪಿಟ್ ವಿಥ್ ಚೀನಾ (ಚೀನಾದೊಂದಿಗೆ ಸ್ಪರ್ಧೆ) ಯೋಜನೆ ಮೂಲಕ ಮಹತ್ವದ ಹೆಜ್ಜೆಯನ್ನಿರಿಸಿದೆ.

ಚೀನಾ ಉತ್ಪನ್ನಗಳಿಗೆ ಪ್ರತಿಯಾಗಿ ಸಣ್ಣ ಕೈಗಾರಿಕೆಗಳ ಮೂಲಕ ಸ್ಥಳೀಯವಾಗಿಯೇ ತನ್ನ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಕೈಗಾರಿಕೆ ಹಾಗೂ ವಾಣಿಜ್ಯ ಇಲಾಖೆ ಕಾರ್ಯಪ್ರವೃತ್ತವಾಗಿದೆ. ರಾಜ್ಯದಲ್ಲಿ ಈ ವರ್ಷ 9 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಈ ಯೋಜನೆಯದಾಗಿದೆ. 45 ಸಾವಿರ ಕೋಟಿ ರೂ. ಹೂಡಿಕೆ ನಿರೀಕ್ಷಿಸಲಾಗಿದೆ. ಕೈಗಾರಿಕಾ ಕ್ಲಸ್ಟರ್​ಗಳ ರಚನೆಗಾಗಿ ರೂಪಿಸಿದ ಯೋಜನೆಗೆ ಪ್ರತಿ ಕ್ಲಸ್ಟರ್​ಗೆ ತಲಾ 3 ಸಾವಿರ ಕೋಟಿ ರೂ. ಖಾಸಗಿ ವಲಯದಿಂದ ಬರಲಿದೆ ಎಂದು ಅಂದಾಜಿಸಲಾಗಿದೆ. ಈ ನಿಟ್ಟಿನಲ್ಲಿ ಕೌಶಲ ಅಭಿವೃದ್ಧಿಗಾಗಿ ಪ್ರತಿ ಜಿಲ್ಲೆಯಲ್ಲಿ ತರಬೇತಿಗೆಂದೇ ಒಟ್ಟು 500 ಕೋಟಿ ರೂ. ತೆಗೆದಿರಿಸಲಾಗಿದೆ.

ಒಂದೆಡೆ ಕೈಗಾರಿಕೆಗಳು ಸ್ಥಾಪನೆಗೊಂಡರೆ ಮಾತ್ರ ಮತ್ತೊಂದೆಡೆ ನಿರುದ್ಯೋಗ ತನ್ನಿಂದ ತಾನೇ ದೂರವಾಗುತ್ತದೆ ಎಂಬ ಕಾರಣಕ್ಕಾಗಿ ಸಣ್ಣ ಕೈಗಾರಿಕೆಗಳಿಗೆ ಮಾನವ ಸಂಪನ್ಮೂಲ ಸೃಷ್ಟಿಗೆ ಸರ್ಕಾರ ಆದ್ಯತೆ ನೀಡಿದೆ. ಗ್ರಾಮೀಣ ಪ್ರದೇಶದಲ್ಲಿ ಬಿಡಿಭಾಗಗಳ ಉತ್ಪಾದನೆ, ಜಿಲ್ಲಾ ಮಟ್ಟದಲ್ಲಿ ಅವುಗಳ ಮಾರುಕಟ್ಟೆ ಸೃಷ್ಟಿಗೆ ಸರ್ಕಾರ ಮುಂದಾಗಿದೆ. ಚೀನಾದಿಂದ ಅತಿ ದೊಡ್ಡ ಪ್ರಮಾಣದಲ್ಲಿ ರಾಜ್ಯದ ಮಾರುಕಟ್ಟೆ ಆಕ್ರಮಿಸಿಕೊಳ್ಳುತ್ತಿರುವ ಪ್ರಮುಖ ಒಂಬತ್ತು ವಲಯಗಳನ್ನು ಗುರುತಿಸಿ, ಆ ವಲಯಗಳ ಮೇಲೆ ರಾಜ್ಯ ಸರ್ಕಾರ ಗಮನ ಹರಿಸಿದೆ.

ಸೋಲಾರ್ ಉಪಕರಣ, ಎಲ್​ಇಡಿ ಬಲ್ಬ್​ಗಳು, ಮಕ್ಕಳ ಆಟಿಕೆ ವಸ್ತುಗಳು, ಸ್ನಾನಗೃಹದ ಉಪಕರಣಗಳು, ಐಸಿಬಿ ಚಿಪ್​ಗಳು, ಫಿಟ್​ನೆಸ್ ಮತ್ತು ಕ್ರೀಡಾ ಸಾಮಗ್ರಿಗಳು, ಜವಳಿ ಉತ್ಪನ್ನಗಳು, ಮೊಬೈಲ್ ಬಿಡಿಭಾಗಗಳು ಮತ್ತು ಕೃಷಿ ಉಪಕರಣಗಳ ತಯಾರಿಕೆಗೆ ರಾಜ್ಯದ ವಿವಿಧೆಡೆ ಕಚ್ಚಾ ಸಂಪನ್ಮೂಲ ಲಭ್ಯತೆ ಆಧರಿಸಿ, ಕೈಗಾರಿಕಾ ಕ್ಲಸ್ಟರ್​ಗಳ ಸ್ಥಾಪನೆಗೆ ಚಾಲನೆ ನೀಡಿದೆ.

ಕಲಬುರಗಿಯಲ್ಲಿ ಸೋಲಾರ್ ಕ್ಲಸ್ಟರ್: ಉತ್ತರ ಕರ್ನಾಟಕದ ಕಲಬುರಗಿಯಲ್ಲಿ ಅಲ್ಲಿನ ವಾತಾವರಣ ಆಧರಿಸಿ, ಸೋಲಾರ್ ಉಪಕರಣಗಳ ಉತ್ಪಾದನಾ ಕ್ಲಸ್ಟರ್ ಸ್ಥಾಪನೆಗೆ ರಾಜ್ಯ ಸರ್ಕಾರ ದಾಪುಗಾಲು ಇರಿಸಿದೆ. ಭಾರತದ ಸೌರಶಕ್ತಿ ಜಿಲ್ಲೆಯನ್ನಾಗಿ ಕಲಬುರಗಿಯನ್ನು ಪರಿವರ್ತಿಸುವ ನಿಟ್ಟಿನಲ್ಲಿ ಸೋಲಾರ್ ಕ್ಲಸ್ಟರ್ ಮಹತ್ವದ ಹೆಜ್ಜೆಯಾಗಿದ್ದು, ಇದರಿಂದ ಸ್ಥಳೀಯ ಯುವಕರಿಗೆ ಉದ್ಯೋಗ ಸೃಜನೆ ಕೂಡ ಕಾರ್ಯಸಾಧುವಾಗಿದೆ.

ತುಮಕೂರು ಇನ್ನು ಫಿಟ್ ಆಂಡ್ ಫೈನ್: ರಾಜಧಾನಿ ಬೆಂಗಳೂರಿನ ಎಲ್ಲ ಅಭಿವೃದ್ಧಿ ಮತ್ತು ಬೆಳವಣಿಗೆಗೆ ನೆರಳಿನಂತೆ ಇರುವ ತುಮಕೂರು ಭವಿಷ್ಯದ ಕೈಗಾರಿಕಾ ತವರೂರು ಎಂದೇ ಹೇಳಲಾಗುತ್ತಿದೆ. ಹೀಗಾಗಿ ಫಿಟ್​ನೆಟ್ ಮತ್ತು ಕ್ರೀಡಾ ಸಾಮಗ್ರಿಗಳ ತಯಾರಿಕೆಗೆ ವಿಶೇಷ ಕ್ಲಸ್ಟರ್ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ವರ್ತಮಾನದ ಬದುಕಿನಲ್ಲಿ ಕ್ರೀಡೆ ಮತ್ತು ಫಿಟ್​ನೆಸ್ ಸಂಬಂಧಿ ಸಾಮಗ್ರಿಗಳಿಗೆ ಬಹುದೊಡ್ಡ ಮಾರುಕಟ್ಟೆ ನಿರ್ವಣವಾಗಿರುವುದರಿಂದ ದೇಶೀಯವಾಗಿ ಇಂತಹ ವಸ್ತುಗಳ ಉತ್ಪಾದನೆಗೆ ದೊಡ್ಡ ಪ್ರೋತ್ಸಾಹ ದಕ್ಕುತ್ತಿದೆ. ಅದರ ಲಾಭ ಪಡೆಯಲು ಸರ್ಕಾರ ಮುಂದಾಗಿದೆ.

ಹಾಸನದಲ್ಲಿ ಟೈಲ್ಸ್ ಕ್ಲಸ್ಟರ್: ಕಲ್ಲು ಗಣಿಗಾರಿಕೆಗೆ ಹೆಸರಾದ ಹಾಸನ ಜಿಲ್ಲೆಯಲ್ಲಿ ಟೈಲ್ಸ್ ಸೇರಿ ಸ್ನಾನಗೃಹದ ಉಪಕರಣಗಳನ್ನು ತಯಾರಿಸುವ ಕ್ಲಸ್ಟರ್ ಸ್ಥಾಪನೆಗೊಳ್ಳಲಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಸ್ಯಾನಿಟರಿ ಉಪಕರಣಗಳ ತಯಾರಿಕಾ ಘಟಕಗಳು ಇಲ್ಲಿ ಇರುವುದರಿಂದ ಅದಕ್ಕೂ ಸರ್ಕಾರ ಹೆಚ್ಚು ಆದ್ಯತೆ ನೀಡುತ್ತಿದೆ. ಇದರಿಂದ ಸ್ಥಳೀಯ ಕಾರ್ವಿುಕರಿಗೆ ಹೆಚ್ಚು ಉದ್ಯೋಗ ದೊರಕಲಿದೆ.

ಚಿಕ್ಕಬಳ್ಳಾಪುರದಲ್ಲಿ ಮೊಬೈಲ್ ಬಿಡಿಭಾಗಗಳ ಕ್ಲಸ್ಟರ್: ಮಾಹಿತಿ ತಂತ್ರಜ್ಞಾನ ನಗರಿ ಬೆಂಗಳೂರಿನ ಅಂಚಿನಲ್ಲೇ ನಾಗಾಲೋಟದಿಂದ ಅಭಿವೃದ್ಧಿ ಹೊಂದುತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೊಬೈಲ್ ಹಾಗೂ ಮೊಬೈಲ್ ಸಂಬಂಧಿ ಬಿಡಿಭಾಗಗಳ ಉತ್ಪಾದನಾ ಘಟಕ ಸ್ಥಾಪನೆಯಿಂದ ಐಟಿ ಪೂರಕ ವಾತಾವರಣ ಅಭಿವೃದ್ಧಿ ಹೊಂದಲಿದೆ. ಹೀಗಾಗಿಯೇ ಈಗಾಗಲೇ ಈ ಮಹತ್ವದ ಯೋಜನೆಗೆ ಚಾಲನೆ ಸಿಕ್ಕಿದ್ದು, ಉದ್ಯೋಗ ಸೃಜನೆಗೂ ದಾರಿಯಾಗಲಿದೆ.

ಬದಲಾಗಲಿದೆ ಬೀದರ್ ಚಿತ್ರಣ: ಕೈಗಾರಿಕಾ ರಂಗದ ಮುಖ್ಯ ವಾಹಿನಿಯಿಂದ ದೂರವೇ ಉಳಿದಿದ್ದ ಬೀದರ್ ಜಿಲ್ಲೆಯಲ್ಲಿ ಗುಣಾತ್ಮಕ ಬದಲಾವಣೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಜಿಲ್ಲೆಯ ಕೌಶಲ ಹೊಂದಿದ ಯುವ ಸಮೂಹ ದೂರದ ಪುಣೆ, ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರಿನತ್ತ ಮುಖ ಮಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಬೀದರ್ ಜಿಲ್ಲೆಯಲ್ಲಿ ಕೃಷಿ ಉಪಕರಣ ಉತ್ಪಾದನಾ ಕ್ಲಸ್ಟರ್ ಸ್ಥಾಪನೆಗೆ ನಿರ್ಧರಿಸಿದೆ.

ಚಿತ್ರದುರ್ಗದಲ್ಲಿ ಎಲ್​ಇಡಿ ಕ್ಲಸ್ಟರ್: ಚಿತ್ರದುರ್ಗದಲ್ಲಿ ಎಲ್​ಇಡಿ ಬಲ್ಬ್​ಗಳನ್ನು ಸಿದ್ಧಪಡಿಸುವ ಘಟಕ ಸ್ಥಾಪನೆಯಾಗುತ್ತಿದೆ. ಪವನ ಮತ್ತು ಸೌರಶಕ್ತಿಯ ಕೇಂದ್ರಸ್ಥಾನವಾಗಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಖಾಸಗಿ ವಲಯದಿಂದ ಸಾರ್ವಜನಿಕ ವಲಯದ ಕೈಗಾರಿಕಾ ಘಟಕಗಳ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಎಲ್​ಇಡಿಬಲ್ಬ್ ತಯಾರಿಕೆಗೆ ಬೇಕಾದ ಪೂರಕ ವಸ್ತುಗಳು ಇಲ್ಲಿ ಹೇರಳವಾಗಿ ಸಿಗುತ್ತವೆ.

ಬಳ್ಳಾರಿ ಝುಗಮಗ

ಜೀನ್ಸ್ ಬಟ್ಟೆಗಳ ಉತ್ಪಾದನಾ ಕ್ಷೇತ್ರದಲ್ಲಿ ದಶಕಗಳಿಂದ ಹೆಸರು ಮಾಡಿರುವ ಬಳ್ಳಾರಿ ಜಿಲ್ಲೆಯಲ್ಲಿ ಈಚೆಗೆ ಉತ್ಪಾದನಾ ಪ್ರಮಾಣ ಕುಗ್ಗುತ್ತಿರುವುದು ಸುಳ್ಳಲ್ಲ. ಹೀಗಾಗಿಯೇ ಜೀನ್ಸ್ ಮತ್ತು ಸಿದ್ಧಬಟ್ಟೆಗಳ ಕ್ಷೇತ್ರವನ್ನು ಪುನರುಜ್ಜೀವನಗೊಳಿಸುವ ದೃಷ್ಟಿಯಿಂದ ಬಳ್ಳಾರಿಯಲ್ಲಿ ಜೀನ್ಸ್ ಕ್ಲಸ್ಟರ್ ನಿರ್ವಣಕ್ಕೆ ಚಾಲನೆ ನೀಡಲಾಗಿದ್ದು, ಇದರಿಂದ ಉದ್ಯೋಗ ಸೃಜನೆಯೂ ಸಾಧ್ಯವಾಗಲಿದೆ.

 


ಕಿನ್ನಾಳ ಕಲೆಗೆ ಪ್ರೋತ್ಸಾಹ

ವಿಶ್ವವಿಖ್ಯಾತ ಕಿನ್ನಾಳ ಕಲೆಯ ಕೇಂದ್ರವಾಗಿರುವ ಕೊಪ್ಪಳ ಜಿಲ್ಲೆಯಲ್ಲಿ ಮಕ್ಕಳ ಆಟಿಕೆಗಳ ಉತ್ಪಾದನಾ ಘಟಕ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಸೀರೆ ನೇಯ್ಗೆ, ಕೂದಲು ಉದ್ಯಮ, ನೇಕಾರಿಕೆ, ಕಿನ್ನಾಳ ಬೊಂಬೆಗಳ ತಯಾರಿಕೆಯಂತಹ ಹಲವು ಗುಡಿ ಕೈಗಾರಿಕೆಗಳ ಆಗರವಾಗಿರುವ ಕೊಪ್ಪಳ ಜಿಲ್ಲೆಯಲ್ಲಿ ಸ್ಥಳೀಯ ಗೊಂಬೆ ತಯಾರಿಕೆಯ ಕುಶಲಕರ್ವಿುಗಳನ್ನು ತೊಡಗಿಸಿಕೊಂಡು ಮಕ್ಕಳ ಆಟಿಕೆ ವಸ್ತುಗಳ ತಯಾರಿಕೆಗೆ ಸರ್ಕಾರ ಮುಂದಾಗಿದೆ. ಜಿಲ್ಲೆಯಲ್ಲಿ ತುಂಗಭದ್ರಾ ನದಿಯ ಜಲಸಂಪನ್ಮೂಲ ಬಳಸಿಕೊಂಡು ಹೇರಳ ಜಮೀನು ಕೂಡ ಸದುಪಯೋಗ ಮಾಡಿಕೊಳ್ಳುವುದು ಇದರ ಹಿಂದಿನ ಉದ್ದೇಶ.


ಸಿಲಿಕಾನ್ ವ್ಯಾಪ್ತಿಯ ವಿಸ್ತರಣೆ

ಜಾಗತಿಕ ನಕಾಶೆಯಲ್ಲಿ ಮಾಹಿತಿ ತಂತ್ರಜ್ಞಾನದ ಮೂಲಕವೇ ವಿಜೃಂಭಿಸುತ್ತಿರುವ ಬೆಂಗಳೂರು ನಗರವನ್ನೂ ಒಳಗೊಂಡು ಸಾಂಸ್ಕೃತಿಕ ನಗರಿ ಮೈಸೂರನ್ನೂ ಐಟಿ ಕ್ಷೇತ್ರದ ಕೇಂದ್ರವನ್ನಾಗಿ ಪರಿವರ್ತಿಸುವ ಮಹತ್ವದ ಯೋಜನೆಗೆ ಕೈಗಾರಿಕೆ ಇಲಾಖೆ ಮುಂದಾಗಿದೆ. ಐಸಿಬಿ ಚಿಪ್​ಗಳ ಉತ್ಪಾದನೆಗೆ ಹೊಸ ಕಾಲದ ಕೈಗಾರಿಕೆಯಲ್ಲಿ ಮುಂಚೂಣಿ ಸ್ಥಾನ ಇರುವುದರಿಂದ ಐಸಿಬಿ ಚಿಪ್ ಕ್ಲಸ್ಟರ್​ಗಳನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ಸ್ಥಾಪಿಸಲಾಗುತ್ತಿದೆ. ಇದರಿಂದ ಐಟಿ ತಂತ್ರಜ್ಞರಿಗೆ ಮತ್ತು ಸಂಶೋಧಕರಿಗೆ ಆತ್ಮವಿಶ್ವಾಸ ಹೆಚ್ಚಿದಂತಾಗಿದೆ.

 

ಬೆಂಗಳೂರು, ಮೈಸೂರು, ತುಮಕೂರು ಪ್ರದೇಶಗಳಲ್ಲಿ ಕೈಗಾರಿಕೆಗಳು ವಿಸ್ತಾರಗೊಳ್ಳುವ ಮಾದರಿಯಲ್ಲೇ ಬೀದರ್, ಕಲಬುರಗಿ, ಕೊಪ್ಪಳ ಜಿಲ್ಲೆಗಳಲ್ಲೂ ಹೊಸ ಕೈಗಾರಿಕಾ ಕ್ಲಸ್ಟರ್​ಗಳನ್ನು ಸ್ಥಾಪಿಸುವ ಮೂಲಕ ಉತ್ಪಾದನೆ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವುದು ಸರ್ಕಾರದ ದಿಟ್ಟ ನಿಲುವಾಗಿದೆ. ಚೀನಾದೊಂದಿಗೆ ಸ್ಪರ್ಧಿಸಬೇಕಾದರೆ ದಕ್ಷಿಣದಿಂದ ಉತ್ತರದವರೆಗೆ ಎಲ್ಲೆಡೆ ಕೈಗಾರಿಕಾ ಕ್ಲಸ್ಟರ್​ಗಳು ಹರಡಬೇಕು. ಹಾಗಾಗಿ ಆಯಾ ಪ್ರದೇಶಕ್ಕೆ ಅನುಗುಣವಾಗಿ 9 ಕೈಗಾರಿಕಾ ಕ್ಲಸ್ಟರ್​ಗಳ ಸ್ಥಾಪನೆಗೆ ಚಾಲನೆ ನೀಡಿದ್ದೇವೆ. ಇನ್ನು ಬೃಹತ್ ಉದ್ಯಮಗಳ ಕ್ಷೇತ್ರದಲ್ಲೂ ಹೂಡಿಕೆಗೆ ಪೂರಕ ವಾತಾವರಣ ನಿರ್ವಿುಸಿದ್ದೇವೆ.

| ಕೆ.ಜೆ.ಜಾರ್ಜ್ ಭಾರಿ ಹಾಗೂ ಮಧ್ಯಮ ಕೈಗಾರಿಕೆ ಸಚಿವ

ತುಮಕೂರಿಗೆ ಮಲ್ಟಿ‘ಸ್ಪೆಷಾಲಿಟಿ’

ತುಮಕೂರು ಜಿಲ್ಲೆಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಘೊಷಣೆ ಆಗಿದ್ದ ಹೈಟೆಕ್ ಮಲ್ಟಿಸ್ಪೆಷಾಲಿಟಿ ಪಶು ಆಸ್ಪತ್ರೆಯನ್ನು 20 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಲಾಗಿದ್ದು ಉದ್ಘಾಟನೆಗೆ ಸಮಯ ನಿರೀಕ್ಷಿಸಲಾಗಿದೆ. ಪೊಲೀಸ್ ತರಬೇತಿ ಶಾಲೆಗೆ ಕೊರಟಗೆರೆ ತಾಲೂಕು ಹೊಳವನಹಳ್ಳಿ ಬಳಿ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಅತ್ಯಾಧುನಿಕ ಕುರಿ ವಧಾಗಾರಕ್ಕೆ ಶಿರಾ ಬಳಿ ಶಂಕುಸ್ಥಾಪನೆ ಆಗಿದೆ. ಕ್ರೀಡಾ ವಿಶ್ವವಿದ್ಯಾಲಯ, ಸ್ಪೋರ್ಟ್ಸ್ ಮತ್ತು ಫಿಟ್ನೆಸ್ ಉಪಕರಣ ಉತ್ಪಾದಕ ಘಟಕ ಸ್ಥಾಪನೆಗೆ 2 ಸಾವಿರ ಕೋಟಿ ರೂ. ಬಂಪರ್ ಕೊಡುಗೆಯನ್ನು ಕುಮಾರಸ್ವಾಮಿ ಬಜೆಟ್​ನಲ್ಲಿ ಘೊಷಣೆ ಮಾಡಿದ್ದಾರೆ.

ರಾಮನಗರಕ್ಕೆ ಕಲಾತ್ಮಕ ಸ್ಪರ್ಶ

ಸಿಎಂ ಕುಮಾರಸ್ವಾಮಿ ಬಜೆಟ್​ನಲ್ಲಿ ಕನಕಪುರಕ್ಕೆ ಮೆಡಿಕಲ್ ಕಾಲೇಜು ಘೊಷಣೆ ಮಾಡಿದ್ದಾರೆ, ಕಣ್ವ ಜಲಾಶಯ ಬಳಿ ಆರ್ಟ್ ಕ್ರಾಫ್ಟ್ ಮತ್ತು ಚಿಲ್ಡ ್ರ್ ಪಾರ್ಕ್ ನಿರ್ವಣ, ಫಿಲ್ಮ್ ಯೂನಿರ್ವಸಿಟಿ ನಿರ್ವಣ, ಅನಿಮೇಷನ್, ಗ್ರಾಫಿಕ್ಸ್ ಸಿನಿಮಾ ಪೂರಕ ಸಂಸ್ಥೆ, ತಂತ್ರಜ್ಞರು ಮತ್ತು ಕಲಾವಿದರಿಗೆ ಬೇಕಾದ ಪೂರಕ ಸೌಲಭ್ಯ ಒದಗಿಸುವುದಕ್ಕೆ ಒಟ್ಟಾರೆ 90 ಕೋಟಿ ರೂ. ಅನುದಾನವನ್ನು ಬಜೆಟ್​ನಲ್ಲಿ ಮೀಸಲಿರಿಸಲಾಗಿದೆ. ಜತೆಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಸಿದ್ದಗೊಂಡಿದ್ದ ಮೇಕೆದಾಟು ಅಣೆಕಟ್ಟು ಯೋಜನೆಗೆ ಈಗ ಕೇಂದ್ರ ಸರ್ಕಾರ ಪ್ರಾಥಮಿಕ ಹಂತದ ಅನುಮತಿ ನೀಡಿದೆ. ಶಿಂಷಾದಿಂದ ಕಣ್ವಗೆ ನೀರು ಹರಿಸುವ, ಕಣ್ವದಿಂದ ಮಂಚನಬೆಲೆಗೆ ನೀರು ಹರಿಸಿ ರಾಮನಗರ ಮತ್ತು ಚನ್ನಪಟ್ಟಣದ ಕೃಷಿ ಭೂಮಿಗೆ ನೀರು ಹರಿಸುವ ಯೋಜನೆ, ಟಿ.ಕೆ.ಹಳ್ಳಿಯಿಂದ ರಾಮನಗರ-ಚನ್ನಪಟ್ಟಣ ನಗರಗಳಿಗೆ ಪ್ರತ್ಯೇಕವಾಗಿ ಕುಡಿಯುವ ನೀರು ಪೂರೈಕೆ ಯೋಜನೆ ಪ್ರಗತಿಯಲ್ಲಿದೆ.


ಆಶಾಕಿರಣವಾದ ಜನತಾದರ್ಶನ

ಬೆಂಗಳೂರು: ಮುಖ್ಯಮಂತ್ರಿ ಅವರ ಜನತಾದರ್ಶನಕ್ಕೆ ಸದಾ ನೂಕುನುಗ್ಗಲು. ನಾಡಿನ ಯಾವುದೇ ಜಿಲ್ಲೆಯಲ್ಲಿ ಜನತಾದರ್ಶನ ನಡೆದರೂ ಅಲ್ಲಿ ಸಮಸ್ಯೆಗಳನ್ನು ಹೊತ್ತ ಜನ ಸಾಲುಗಟ್ಟಿ ನಿಲ್ಲುತ್ತಾರೆ. ಬಡವರು, ನಿರ್ಗತಿಕರು, ಅಸಹಾಯಕರು, ಅಂಗವಿಕಲರು, ಉದ್ಯೋಗವನ್ನರಸಿಕೊಂಡು ಬಂದವರು, ಆರ್ಥಿಕ ನೆರವು ಕೋರುವವರು ಸೇರಿ ಹತ್ತು ಹಲವು ಸಮಸ್ಯೆಗಳನ್ನು ಜನ ಹೊತ್ತು ಬಂದರೂ ಸಮಾಧಾನದಿಂದ ಕೇಳಿ ಅದಕ್ಕೊಂದು ಪರಿಹಾರ ಸೂಚಿಸುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕಾರ್ಯ ವೈಖರಿ ಜನಮನ್ನಣೆ ಪಡೆದಿದೆ. ಗೃಹಕಚೇರಿ ಕೃಷ್ಣದಲ್ಲಿ ಬೆಳಗ್ಗೆಯಿಂದ ಮಧ್ಯರಾತ್ರಿವರೆಗೆ ಜನತಾದರ್ಶನ ನಡೆಸಿದ ಹೆಗ್ಗಳಿಕೆಯೂ ಅವರದು. ಬೆಳಗಾವಿಯ ಸುವರ್ಣಸೌಧ ದಲ್ಲಿಯೂ ಇಡೀ ದಿನ ಜನತಾದರ್ಶನ ನಡೆಸುವ ಮೂಲಕ ಉತ್ತರ ಕರ್ನಾಟಕ ಭಾಗದ ಜನ ಮನ ಗೆದ್ದಿದ್ದು ವಿಶೇಷ. ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ 9 ಜನತಾದರ್ಶನ ನಡೆಸಿರುವ ಸಿಎಂ, ಈ ತನಕ 23,849 ಅರ್ಜಿಗಳನ್ನು ಸ್ವೀಕರಿಸಿದ್ದು, ಅದರಲ್ಲಿ 11,937 ಅರ್ಜಿ ಇತ್ಯರ್ಥಗೊಂಡಿವೆ. 10,957 ಅರ್ಜಿಗಳು ಮಾತ್ರ ನಾನಾ ಹಂತದಲ್ಲಿ ಬಾಕಿ ಉಳಿದಿವೆ. 955 ಅರ್ಜಿಗಳನ್ನು ತಿರಸ್ಕಾರ ಮಾಡಲಾಗಿದೆ. ಸಿಎಂ ಕಚೇರಿಯಲ್ಲಿರಲಿ, ಮನೆಯಲ್ಲಿರಲಿ, ಪ್ರವಾಸದಲ್ಲಿರಲಿ ಎಲ್ಲಿಗೆ ಹೋದರೂ ಜನರು ಸಮಸ್ಯೆಗಳ ಪರಿಹಾರಕ್ಕಾಗಿ ಅರ್ಜಿ ಹಿಡಿದು ಬರುತ್ತಾರೆ. ಅವರನ್ನು ಅಷ್ಟೇ ಕಾಳಜಿಯಿಂದ ಮಾತನಾಡಿಸಿ, ಸಮಸ್ಯೆ ಪರಿಹರಿಸುವ ಕುಮಾರಸ್ವಾಮಿ ಅವರ ತಾಯ್ತನದ ಹೃದಯಕ್ಕೆ ನಾಡಿನ ಜನರ ಆಶೀರ್ವಾದವೂ ಇದೆ.


ದುರ್ಬಲ ವರ್ಗಕ್ಕೆ ಋಣಮುಕ್ತ

ಬೆಂಗಳೂರು: ರಾಜ್ಯ ಸರ್ಕಾರ ಕೈಗೊಂಡ ಎರಡು ಪ್ರಮುಖ ತೀರ್ವನದಿಂದ ಕೃಷಿಕರಲ್ಲದೆ, ಭೂರಹಿತ ಕೃಷಿ ಕಾರ್ವಿುಕರು ಹಾಗೂ ದುರ್ಬಲ ವರ್ಗದವರು ಮಾಡಿರುವ ಸಾಲವನ್ನು ಕಟ್ಟಬೇಕಿಲ್ಲ. ಈ ಎಲ್ಲ ಸಾಲವನ್ನು ಏಕಗಂಟಿನಲ್ಲಿ ಚುಕ್ತಾ ಮಾಡುವ ಕ್ರಾಂತಿಕಾರಕ ನಿರ್ಣಯವನ್ನು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಕೈಗೊಂಡಿದೆ. 1976ರಲ್ಲಿ ಅಂದಿನ ಸಿಎಂ ದೇವರಾಜ ಅರಸು ತಂದಿದ್ದ ಋಣ ಪರಿಹಾರ ಕಾಯ್ದೆ ಮಾದರಿಯ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ರಾಷ್ಟ್ರಪತಿಗಳ ಅನುಮೋದನೆ ನಂತರ ಇದನ್ನು ಜಾರಿಗೊಳಿಸಲಾಗುತ್ತದೆ. ರಾಷ್ಟ್ರಪತಿ ಸಹಿ ಆದೊಡನೆ ಆ ಕ್ರಾಂತಿಕಾರಕ ತೀರ್ವನದ ಅನುಷ್ಠಾನ ಆರಂಭವಾಗುತ್ತದೆ. ಚಕ್ರಬಡ್ಡಿ, ಮೀಟರ್ ಬಡ್ಡಿ ವಸೂಲಿ ಮಾಡುವವರಿಂದ ರೈತರು ಹಾಗೂ ಬಡವರನ್ನು ರಕ್ಷಿಸಲು ಸುಗ್ರೀವಾಜ್ಞೆ ಅನುಕೂಲ ಕಲ್ಪಿಸಲಿದೆ. ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಹಾಗೂ 1.25 ಲಕ್ಷ ರೂ.ಗಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವವರು ಕೈ ಸಾಲ ಅಥವಾ ಲೇವಾದೇವಿಗಾರರಿಂದ ಮಾಡಿರುವ ಸಾಲ ಕಟ್ಟಬೇಕಿಲ್ಲ. ಸ್ಥಿರ ಅಥವಾ ಚರಾಸ್ತಿಯನ್ನು ಅಡವಿಟ್ಟು ಪಡೆದ ಸಾಲವನ್ನೂ ಪಾವತಿಸಬೇಕಿಲ್ಲ. ಇಂಥ ಸಾಲಕ್ಕೆ ಸಂಬಂಧಿಸಿದಂತೆ ಲೇವಾದೇವಿಗಾರರು ನ್ಯಾಯಾಲಯದ ಮೆಟ್ಟಿಲೇರಲು ಸುಗ್ರೀವಾಜ್ಞೆ ನಿರ್ಬಂಧವಿರುತ್ತದೆ. ಕಾಯ್ದೆ ಉಲ್ಲಂಘನೆ ಮಾಡಿದವರಿಗೆ 1 ವರ್ಷ ಜೈಲು ಹಾಗೂ 1.25 ಲಕ್ಷ ರೂ. ವರೆಗೆ ದಂಡ ವಿಧಿಸಲು ಸುಗ್ರೀವಾಜ್ಞೆ ಅವಕಾಶ ಕಲ್ಪಿಸಲಿದೆ.


ರೈತರ ಸಲಹಾ ಸಮಿತಿ ರಚನೆ

ಬೆಂಗಳೂರು: ಕೃಷಿಕ ಕುಟುಂಬಗಳಿಗೆ ಆರ್ಥಿಕ ಸ್ವಾವಲಂಬನೆ ತರುವುದು ಜೆಡಿಎಸ್-ಕಾಂಗ್ರೆಸ್ ಸರ್ಕಾರದ ಪ್ರಮುಖ ಗುರಿ. ಆ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯ ಇಬ್ಬರು ಪ್ರಗತಿಪರ ಕೃಷಿಕರನ್ನು ಒಳಗೊಂಡ ‘ರಾಜ್ಯ ರೈತರ ಸಲಹಾ ಸಮಿತಿ’ ರಚಿಸಲಾಗಿದೆ. ಆ ಮೂಲಕ ರೈತರನ್ನು ಒಳಗೊಂಡ ನೀತಿ ನಿರೂಪಣೆಗೆ ಸರ್ಕಾರ ಅಡಿಪಾಯ ಹಾಕಿದೆ. ಸಿಎಂ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ರಾಜ್ಯ ರೈತರ ಸಲಹಾ ಸಮಿತಿಯ ಪ್ರಥಮ ಸಭೆ ನಡೆಸಲಾಯಿತು. ಪ್ರತಿ ಜಿಲ್ಲೆಯಿಂದ ಇಬ್ಬರು ಪ್ರಗತಿಪರ ರೈತರನ್ನು ಒಳಗೊಂಡ ಒಟ್ಟು 60 ರೈತ ಪ್ರತಿನಿಧಿಗಳ ಸಲಹಾ ಸಮಿತಿ ರಚಿಸಿದೆ. ಈ ಸಮಿತಿ ನೀಡಿರುವ ಸಲಹೆಗಳನ್ನು ಸರ್ಕಾರ ಅನುಷ್ಠಾನಗೊಳಿಸಲಿದೆ ಹಾಗೂ ಪ್ರತಿ ಎರಡು ತಿಂಗಳಿಗೊಮ್ಮೆ ಸಮಿತಿ ಸಭೆ ಏರ್ಪಡಿಸಿ, ಸಮಸ್ಯೆಗಳಿಗೆ ಸ್ಪಂದಿಸಲಿದೆ.


ಚಿಕ್ಕಬಳ್ಳಾಪುರಕ್ಕೆ ಭರಪೂರ ಯೋಜನೆ

ಬೆಂಗಳೂರು: ಚಿಕ್ಕಬಳ್ಳಾಪುರ ಮತ್ತು ಇತರ ಜಿಲ್ಲೆಗಳಿಗೆ 24 ಟಿಎಂಸಿ ನೀರು ಹರಿಸುವ 13 ಸಾವಿರ ಕೋಟಿ ರೂ. ವೆಚ್ಚದ ಎತ್ತಿನಹೊಳೆ ಯೋಜನೆ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 65 ಕೆರೆಗಳಿಗೆ ಬೆಂಗಳೂರಿನ ಹೆಬ್ಬಾಳ-ನಾಗವಾರ ತ್ಯಾಜ್ಯ ಸಂಸ್ಕರಿಸಿದ ನೀರು ಪೂರೈಸುವ 880 ಕೋಟಿ ರೂ. ವೆಚ್ಚದ ನೀರಾವರಿ ಯೋಜನೆ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. ಗೌರಿಬಿದನೂರು ತಾಲೂಕಿನ ಹೊಸೂರಿನಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ಅಂತಾರಾಷ್ಟ್ರೀಯ ವಿಜ್ಞಾನ ಕೇಂದ್ರ ಸ್ಥಾಪನೆ, ಚಿಕ್ಕಬಳ್ಳಾಪುರದಲ್ಲಿ ಮೊಬೈಲ್ ಬಿಡಿ ಭಾಗಗಳ ಉತ್ಪಾದನಾ ಘಟಕ ಸ್ಥಾಪನೆ ಘೊಷಣೆ ಮಾಡಲಾಗಿದೆ. ರಾಜ್ಯದಲ್ಲಿಯೇ ಗುಡಿಬಂಡೆಯನ್ನು ಪೋಡಿ ಮುಕ್ತ ತಾಲೂಕನ್ನಾಗಿಸಿರುವುದು ಹೆಗ್ಗಳಿಕೆ. ಈ ಭಾಗದಲ್ಲಿ ಫ್ಲೋರೈಡ್ ನೀರಿನ ಸಮಸ್ಯೆ ನಿವಾರಣೆಗೆ ಶುದ್ಧ ನೀರು ಪೂರೈಸಲು 681 ಘಟಕಗಳನ್ನು ಸ್ಥಾಪಿಸಲಾಗಿದೆ.


ಕರ್ನಾಟಕದಲ್ಲಿ ಇಸ್ರೇಲ್ ಬೇಸಾಯ

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಳೆದ ಹಲವಾರು ವರ್ಷಗಳಿಂದ ಇಸ್ರೇಲ್ ಮಾದರಿ ಶೂನ್ಯ ಬಂಡವಾಳದ ಕೃಷಿ ಪದ್ಧತಿಯನ್ನು ಪ್ರತಿಪಾದಿಸುತ್ತ ಬಂದಿದ್ದಾರೆ. ಅದರ ಪರಿಣಾಮವಾಗಿಯೇ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುತ್ತಲೇ ಮಂಡಿಸಿದ ಬಜೆಟ್​ನಲ್ಲಿ ಶೂನ್ಯ ಬಂಡವಾಳ ಕೃಷಿ ಉತ್ತೇಜನಕ್ಕೆ 50 ಕೋಟಿ ರೂ. ಘೋಷಿಸಿದರು. ಅದರ ಪರಿಣಾಮವಾಗಿ ಶೂನ್ಯ ಬಂಡವಾಳ ಕೃಷಿ ಪದ್ಧತಿ ಕುರಿತಂತೆ ರೈತರಿಗೆ ತರಬೇತಿ ನೀಡಲಾಗುತ್ತಿದೆ. ಈ ಉದ್ದೇಶಕ್ಕೆ ಯುಎನ್​ಪಿಎ ಸಂಸ್ಥೆಯ ಸಸ್ಟೇನೇಬಲ್ ಇಂಡಿಯಾ ಫೈನಾನ್ಸ್ ಫೆಸಿಲಿಟಿ ಸಂಸ್ಥೆ ಮೂಲಕ ತಾಂತ್ರಿಕ ಸಹಾಯ ಪಡೆಯಲು ಕೂಡ ಸರ್ಕಾರ ಮುಂದಾಗಿದೆ. ಸಚಿವ ಸಿ.ಎಸ್.ಪುಟ್ಟರಾಜು ತಮ್ಮ ಸ್ವಂತ ಜಮೀನಿನಲ್ಲಿ ಇಸ್ರೇಲ್ ಮಾದರಿ ಕೃಷಿ ಅಳವಡಿಕೆ ಮಾಡಿಕೊಂಡು ಉತ್ತಮ ಬೆಳೆ ಬೆಳೆದಿದ್ದು, ಇತರ ರೈತರಿಗೂ ಮಾದರಿಯಾಗಿದ್ದಾರೆ.

ರಾಜ್ಯದಲ್ಲಿ ಕೃಷಿ ನಿರತ ರೈತರ ನಿಖರ ಅಂಕಿ-ಅಂಶಗಳನ್ನು ಒಳಗೊಂಡ ಡೇಟಾಬೇಸ್ ಸಂಗ್ರಹಕ್ಕೆ ಮುಂದಾಗಿದ್ದೇವೆ. ಆ ಮೂಲಕ ರಾಜ್ಯದ ರೈತ ಕುಟುಂಬಗಳ ಸಂಖ್ಯೆ, ಅದರ ಅವಲಂಬಿತರ ಸಂಖ್ಯೆ, ಪ್ರತಿ ಕೃಷಿಕ ಹೊಂದಿರುವ ಭೂಮಿ ಪ್ರಮಾಣ, ಸಾಂಪ್ರದಾಯಿಕ ಬೇಸಾಯ ಪದ್ಧತಿಯಲ್ಲಿ ಬೆಳೆಯುತ್ತಿರುವ ಬೆಳೆಗಳು, ಅದಕ್ಕೆ ವಿನಿಯೋಗಿಸುತ್ತಿರುವ ಸಂಪನ್ಮೂಲದ ಪ್ರಮಾಣ ಹೀಗೆ ಎಲ್ಲವೂ ಬೆರಳ ತುದಿಯಲ್ಲಿ ಸಿಗಬೇಕು ಮತ್ತು ಅದರ ಆಧಾರದ ಮೇಲೆ ವಾಸ್ತವಿಕ ಯೋಜನೆಗಳು ರೂಪುಗೊಳ್ಳಬೇಕು ಎಂಬುದು ನಮ್ಮ ದೃಢ ನಿಲುವು.

| ಎನ್.ಎಚ್.ಶಿವಶಂಕರ್ ರೆಡ್ಡಿ ಕೃಷಿ ಸಚಿವ


ಶೂನ್ಯದಿಂದಲೇ ಸೃಷ್ಟಿ ಕೃಷಿಯಿಂದಲೇ ಖುಷಿ

ಬೆಂಗಳೂರು: ಸಾಲಮನ್ನಾ ಮೂಲಕ ರೈತ ಸಮುದಾಯ ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಿರುವ ರಾಜ್ಯ ಸರ್ಕಾರ, ಬೆಳೆದ ಉತ್ಪನ್ನಗಳಿಗೆ ನ್ಯಾಯಯುತ ದರ ಸಿಗುವುದಿಲ್ಲ ಎಂಬ ಕೊರಗಿನಿಂದಲೂ ರೈತರನ್ನು ಪಾರು ಮಾಡುವ ನಿಟ್ಟಿನಲ್ಲಿ ಸಕಾಲಕ್ಕೆ ಮಾರುಕಟ್ಟೆ ಪ್ರವೇಶಿಸಲು ಮುಂದಾಗಿದೆ.

ಮಳೆ ಹಾಗೂ ವಾತಾವರಣದ ಪ್ರತಿಕೂಲ ಪರಿಸ್ಥಿತಿಯಲ್ಲೂ ಉತ್ತಮ ಫಸಲು ರೈತನ ಕೈ ಸೇರಿದಾಗ ಕೃಷಿ ಮಾರುಕಟ್ಟೆಯಲ್ಲಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ಸಿಗದಂತಹ ದುಸ್ಥಿತಿ ಸದಾ ರಾಜ್ಯದ ರೈತರನ್ನು ಕಾಡುತ್ತಿದೆ. ಹೀಗಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಅವರ ಸಕಾಲಿಕ ತೀರ್ವನಗಳಿಂದಾಗಿ ಸರ್ಕಾರ ತಕ್ಷಣವೇ ಮಾರುಕಟ್ಟೆ ಮಧ್ಯಪ್ರವೇಶ ಮಾಡಿದ್ದರಿಂದ ಅನೇಕ ಬೆಳೆಗಳಿಗೆ ನ್ಯಾಯಯುತ ದರಗಳು ಸಿಗುವಂತಾಗಿದೆ. ಹಲವಾರು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ, ಖರೀದಿ ಕೇಂದ್ರಗಳನ್ನು ಆರಂಭಿಸುವ ಮೂಲಕ ವ್ಯವಸಾಯ ಪರವಾದ ಬದ್ಧತೆಯನ್ನು ಸರ್ಕಾರ ಪ್ರದರ್ಶಿಸಿದೆ.

ರಾಜ್ಯದಲ್ಲಿ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹೆಸರು ಉತ್ಪಾದನೆಗೊಂಡಿದ್ದರಿಂದ ರೈತರು ಬೆಲೆ ಕುಸಿತದ ಬಾಧೆಗೆ ಸಿಲುಕಿದ್ದರು. ಆಗ ಮಾರುಕಟ್ಟೆ ಮಧ್ಯಪ್ರವೇಶ ಮಾಡಿದ ರಾಜ್ಯ ಸರ್ಕಾರ, ನೋಂದಾಯಿತ ರೈತರಿಂದ ಹೆಸರು ಖರೀದಿ ಅವಧಿ ವಿಸ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಮೊರೆ ಹೋಗಿದೆ. ಇದಲ್ಲದೆ, ಬೆಂಬಲ ಬೆಲೆ ಯೋಜನೆಯಲ್ಲಿ ಸೋಯಾಬೀನ್ ಹಾಗೂ ಉದ್ದು ಕೂಡ ಖರೀದಿಸಲಾಗುತ್ತಿದೆ. ಇದೇ ವೇಳೆ ಭತ್ತವನ್ನೂ ಬೆಂಬಲ ಬೆಲೆ ನೀಡಿ ಖರೀದಿಸಲು ಈಗಾಗಲೇ ಸರ್ಕಾರ ಆದೇಶ ಹೊರಡಿಸಿದ್ದು, ಮಾರುಕಟ್ಟೆಗೆ ಆವಕ ಪ್ರವೇಶಿಸಿದ ತಕ್ಷಣ ಖರೀದಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಈ ಬಾರಿ ಬೆಂಬಲ ಬೆಲೆ ಖರೀದಿ ಯೋಜನೆಯಲ್ಲಿ ಮೆಕ್ಕೆ ಜೋಳ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಲಿಲ್ಲ. ಹಾಗಾಗಿ ರಾಜ್ಯ ಸರ್ಕಾರವೇ ರೈತಪರ ಕಾಳಜಿ ಮೆರೆದು ಕೆಎಂಎಫ್ ಮೂಲಕ ಭಾರಿ ಪ್ರಮಾಣದ ಮೆಕ್ಕೆಜೋಳವನ್ನು ಖುದ್ದಾಗಿ ಖರೀದಿಸಲು ಮುಂದಾಗಿದೆ. ಅದಕ್ಕಾಗಿ ಕೆಎಂಎಫ್​ಗೆ ಅಗತ್ಯ ಹಣವನ್ನೂ ರಾಜ್ಯ ಸರ್ಕಾರ ಈಗಾಗಲೇ ಒದಗಿಸಿದೆ. ಹೀಗಾಗಿ ಮೆಕ್ಕೆಜೋಳ ಬೆಳೆದ ರೈತರ ಮೊಗದಲ್ಲಿ ಮಂದಹಾಸ ಮೂಡುವಂತಾಗಿದೆ.

ರಾಜ್ಯದ ಒಂಬತ್ತು ಜಿಲ್ಲೆಗಳ 5.20 ಲಕ್ಷ ಹೆಕ್ಟೇರ್ ಪ್ರದೇಶ ಆವರಿಸಿರುವ ಪ್ರಮುಖ ವಾಣಿಜ್ಯ ಬೆಳೆ ಕಬ್ಬು ರೈತರ ಬದುಕು ಕಟ್ಟುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ವಾರ್ಷಿಕ ಸುಮಾರು 410 ಲಕ್ಷ ಟನ್ ಕಬ್ಬು ರಾಜ್ಯದಲ್ಲಿ ಉತ್ಪಾದನೆಯಾಗುತ್ತಿದ್ದು, ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಹಣಕ್ಕಾಗಿ ಕಾಯುವ ಪರಿಸ್ಥಿತಿ ಇದೆ. ರಾಜ್ಯ ಸರ್ಕಾರ ಕಬ್ಬು ಬೆಳೆಗಾರರ ನೆರವಿಗೆ ಧಾವಿಸಿ, ಸಕ್ಕರೆ ಕಾರ್ಖಾನೆಗಳ ಮಾಲೀಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಕ್ಕರೆ ಉದ್ಯಮದಲ್ಲಿ ಸೌಹಾರ್ದಯುತ ವಾತಾವರಣ ನಿರ್ವಣಕ್ಕೆ ಮುಂದಾಗಿದೆ. ಸ್ವತಃ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಕ್ಕರೆ ಸಚಿವ ಕೆ.ಜೆ.ಜಾರ್ಜ್ ಉದ್ಯಮದ ಪಾಲುದಾರ ರೈತರು ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರನ್ನೂ ಒಂದೆಡೆ ಸೇರಿಸಿ ರ್ಚಚಿಸಿದ್ದಾರೆ. ಕಬ್ಬು ಬೆಳೆಗಾರರಿಗೆ ನೀಡಿದ್ದ ವಚನದಂತೆ ಬಾಕಿ ಹಣವನ್ನು 15 ದಿನಗಳಲ್ಲಿ ಪಾವತಿಸಲು ಕಾರ್ಖಾನೆಗಳ ಮಾಲೀಕರು ಒಪ್ಪಿಕೊಂಡಿದ್ದಾರೆ.

ರೈತರು ಬೆಳೆದ ಸಿರಿಧಾನ್ಯಗಳಾದ ನವಣೆ, ಅರ್ಕ, ಸಜ್ಜೆ, ಸಾಮೆ, ರಾಗಿ, ಊದಲು, ಕೊರ್ಲೆಗಳು ಹಾಗೂ ಸಾವಯವ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಲು ಸರ್ಕಾರ-ಖಾಸಗಿ ಸಹಭಾಗಿತ್ವದಲ್ಲಿ ಮಾರುಕಟ್ಟೆ ಶುಲ್ಕ ಹಂಚಿಕೆ ಮಾದರಿಯಲ್ಲಿ 10 ಮಾರುಕಟ್ಟೆಗಳ ನಿರ್ವಣಕ್ಕೆ ಸರ್ಕಾರ ಮುಂದಾಗಿದೆ.

ಕಳೆದ ಐದು ವರ್ಷಗಳಿಂದ ಸತತ ಮಳೆರಾಯನ ಅವಕೃಪೆಗೆ ಒಳಗಾಗಿರುವ ತೆಂಗಿನ ಬೆಳೆಗಾರರಿಗೆ 190 ಕೋಟಿ ರೂ. ವಿಶೇಷ ಪ್ಯಾಕೇಜ್ ರೂಪಿಸಿದೆ. ತೆಂಗಿನ ಜತೆ ಮಾವು, ಗೋಡಂಬಿ, ಹುಣಸೆ, ಸೀತಾಫಲ, ನೇರಳೆ ಬೆಳೆಯಲು ಪ್ರೋತ್ಸಾಹ ನೀಡುತ್ತಿದೆ.