ಸಿದ್ಧಗಂಗೆಗೆ ಹೊರಟ ಎಚ್​ಡಿಕೆ: ಹಾವೇರಿ ಪ್ರವಾಸ ರದ್ದು

ಬೆಂಗಳೂರು: ತುಮಕೂರಿನ ಸಿದ್ಧಗಂಗೆಯ ಶಿವಕುಮಾರಸ್ವಾಮೀಜಿ ಅವರ ಆರೋಗ್ಯದಲ್ಲಿ ಅಲ್ಪ ಏರುಪೇರು ಉಂಟಾಗಿರುವ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರು ತಮ್ಮೆಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಿ ಮಠಕ್ಕೆ ತೆರಳುತ್ತಿದ್ದಾರೆ.

ಸದ್ಯ ಮೈಸೂರಿನಲ್ಲಿರುವ ಸಿಎಂ ಎಚ್​ಡಿಕೆ, 11 ಗಂಟೆ ಸುಮಾರಿಗೆ ಅಲ್ಲಿಂದ ತುಮಕೂರಿನ ಮಠಕ್ಕೆ ತೆರಳಲಿದ್ದಾರೆ. ಅಲ್ಲದೆ, ಶ್ರೀಗಳ ಆರೋಗ್ಯ ನೋಡಿಕೊಳ್ಳುತ್ತಿರುವ ವೈದ್ಯರು ಮತ್ತು ಮಠದ ಕಿರಿಯ ಶ್ರೀ ಸಿದ್ದಲಿಂಗ ಸ್ವಾಮಿಜಿಯವರೊಂದಿಗೆ ಬೆಳಗ್ಗೆ ದೂರವಾಣಿ ಮೂಲಕ ಮಾತನಾಡಿರುವ ಅವರು, ಶ್ರೀಗಳ ಆರೋಗ್ಯದ ಸ್ಥಿತಿಗತಿ ಕುರಿತು ಮಾಹಿತಿ ಪಡೆದಿದ್ದಾರೆ.

ಸಿಎಂ ಎಚ್​ಡಿಕೆ ಅವರು ಇಂದು ಕಾಂಗ್ರೆಸ್​ ಶಾಸಕ ಬಿ.ಸಿ ಪಾಟೀಲ್​ ಅವರ ಪುತ್ರಿಯ ವಿವಾಹ ನಿಮಿತ್ತ ಹಾವೇರಿ ಪ್ರವಾಸ ಕೈಗೊಂಡಿದ್ದರು. ಆದರೆ, ಸಿದ್ಧಗಂಗೆ ಭೇಟಿ ಹಿನ್ನೆಲೆಯಲ್ಲಿ ಈ ಪ್ರವಾಸ ರದ್ದಾಗಿದೆ.