Monday, 12th November 2018  

Vijayavani

ಕಳಚಿತು ರಾಜಕೀಯ ರಂಗದ ಮತ್ತೊಂದು ಕೊಂಡಿ- ಬಾರದ ಲೋಕಕ್ಕೆ ಅನಂತ್ ಕುಮಾರ್ ಪಯಣ - ಶೋಕದ ಕಡಲಲ್ಲಿ ಬಿಜೆಪಿ ಪಾಳಯ        ಅಗಲಿದ ನಾಯಕನ ಅಂತಿಮ ದರ್ಶನ- ಇನ್ನು ಕೆಲವೇ ಹೊತ್ತಲ್ಲಿ ಬೆಂಗಳೂರಿಗೆ ಪ್ರಧಾನಿ ಆಗಮನ- ಅದಮ್ಯ ಚೇತನ ನೇತಾರನ ಗುಣಗಾನ        ನಾಳೆ ವೈದಿಕ ಸಂಪ್ರದಾಯದಂತೆ ಅಂತ್ಯಸಂಸ್ಕಾರ- ಬೆಳಗ್ಗೆ 8ಗಂಟೆಯಿಂದ ಸಾರ್ವಜನಿಕ ದರ್ಶನ - ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳೋರಿಗಾಗಿ ವಿಶೇಷ ರೈಲು        ಜೈಲು ಹಕ್ಕಿಯಾಗಿರೋ ರೆಡ್ಡಿಗೆ ಸಿಗುತ್ತಾ ಜಾಮೀನು- ನಾಳೆ ನಡೆಯಲಿದೆ ಅರ್ಜಿ ವಿಚಾರಣೆ- ಪರಪ್ಪರ ಅಗ್ರಹಾರದಲ್ಲಿ ದಿನಕಳೆದ ನಾಯಕ        ಸಿಲಿಕಾನ್ ಸಿಟಿಯಲ್ಲಿ ಎದೆ ಝಲ್ಲೆನಿಸುವ ಘಟನೆ- ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು- ಡೆತ್​ನೋಟ್ ಬರೆದಿಟ್ಟು ಸೂಸೈಡ್        ಕಾರ್ತಿಕ ಮಾಸದ ಮೊದಲ ಸೋಮವಾರ- ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ- ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಂದಿಮೂರ್ತಿಗೆ ರುದ್ರಾಭಿಷೇಕ       
Breaking News

ಮೀಟರ್ ಬಡ್ಡಿಗೆ ಸೆಡ್ಡು

Sunday, 12.08.2018, 3:06 AM       No Comments

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಬೀದಿ ಬದಿಯಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡುವವರಿಗೆ ಮೀಟರ್ ಬಡ್ಡಿ ಸಾಲ ನೀಡಿ ಜೀವ ಹಿಂಡುತ್ತಿರುವ ದಂಧೆಕೋರರನ್ನು ಮಟ್ಟಹಾಕುವ ಜತೆಯಲ್ಲೇ ಬಡವರ ಬದುಕಿಗೆ ಭದ್ರತೆ ನೀಡುವ ‘ಬಡವರ ಬಂಧು’ ಗಣೇಶ ಚತುರ್ಥಿಗೆ ಆಗಮಿಸಲಿದ್ದಾನೆ!

ಬಡ್ಡಿ ದಂಧೆಕೋರರ ಹಾವಳಿ ತಪ್ಪಿಸಿ ಪ್ರತಿ ವ್ಯಾಪಾರಿಗೂ ಕಡಿಮೆ ಬಡ್ಡಿ ದರದಲ್ಲಿ 25 ಸಾವಿರ ರೂ.ವರೆಗೆ ಸೌಲ ಸೌಲಭ್ಯ ಕಲ್ಪಿಸುವ, ಅವರ ಜೀವನಮಟ್ಟ ಸುಧಾರಿಸಲು ಬರಲಿರುವ ಈ ‘ಬಡವರ ಬಂಧು’ ಕಳೆದ ಬಜೆಟ್​ನಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಘೋಷಣೆ ಮಾಡಿದ್ದ ಯೋಜನೆಯೇ ಆಗಿದೆ. ಖಾಸಗಿ ಲೇವಾದೇವಿದಾರರ ನಿಯಂತ್ರಣಕ್ಕೆ ಕಠಿಣ ಕಾನೂನು ಇದ್ದರೂ ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ. ಸರ್ಕಾರದ ಇಲಾಖೆಗಳ ನಡುವೆ ಸಮನ್ವಯದ ಕೊರತೆಯಿಂದಾಗಿ ಮೀಟರ್ ಬಡ್ಡಿ ದಂಧೆಕೋರರು ತಮ್ಮ ಸಾಮ್ರಾಜ್ಯ ವಿಸ್ತರಿಸುತ್ತ ಬಡ ವ್ಯಾಪಾರಿಗಳ ಸುಲಿಗೆ ಮುಂದುವರಿಸಿದ್ದಾರೆ. ಇಂತಹವರನ್ನು ಮಟ್ಟಹಾಕುವುದಕ್ಕಾಗಿಯೇ ಸರ್ಕಾರ ಬೀದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡಲು ತೀರ್ವನಿಸಿದೆ.

ರೂಪುರೇಷೆ ಸಿದ್ಧ: ಅಸಂಘಟಿತ ವಲಯದಲ್ಲಿರುವ ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸಬೇಕೆಂಬ ಆಶಯದೊಂದಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್​ನಲ್ಲಿ ಘೋಷಿಸಿದ್ದ ಬಡವರ ಬಂಧು ಯೋಜನೆಯನ್ನು ಗಣೇಶ ಚತುರ್ಥಿಗೆ ಜಾರಿಗೊಳಿಸಲು ಸಿದ್ಧತೆ ನಡೆದಿದೆ. ಸಹಕಾರ ಇಲಾಖೆ ಈಗಾಗಲೇ ಯೋಜನೆಯ ರೂಪುರೇಷೆ ಸಿದ್ಧಪಡಿಸಿದೆ.

ಮೀಟರ್ ಬಡ್ಡಿ ಲೆಕ್ಕಾಚಾರ

ರಸ್ತೆ ಬದಿಯಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡುವ ಬಡವರು ದೈನಂದಿನ ವಹಿವಾಟಿಗಾಗಿ ಬಡ್ಡಿ ವ್ಯಾಪಾರಿಗಳಿಂದ ಮೀಟರ್ ಬಡ್ಡಿ ದರದಲ್ಲಿ ಸಾಲ ಪಡೆಯುತ್ತಾರೆ. ಬೆಳಗ್ಗೆ 900 ರೂ. ಸಾಲ ಪಡೆದರೆ ಸಂಜೆ ಮರಳಿ 1000 ರೂ. ನೀಡಬೇಕು. ಒಂದು ವೇಳೆ ಕೊಡಲು ಸಾಧ್ಯವಾಗದಿದ್ದರೆ ಮಾರನೇ ದಿನ 1050 ರೂ. ಪಾವತಿಸಬೇಕು. ಈ ರೀತಿಯಲ್ಲಿ ಮೀಟರ್ ಬಡ್ಡಿ ದಿನದಿಂದ ದಿನಕ್ಕೆ ಬೆಳೆಯುತ್ತಾ ಹೋಗುತ್ತದೆ.

ಸಾಲ ಸಿಗುತ್ತಿಲ್ಲ

ಬೀದಿಬದಿ ವ್ಯಾಪಾರಿಗಳಿಗೆ ಬ್ಯಾಂಕ್​ಗಳಲ್ಲಿ ಸಾಲ ಸೌಲಭ್ಯ ಸಿಗುತ್ತಿಲ್ಲ. ವ್ಯಾಪಾರ ವಹಿವಾಟಿಗೆ ಬ್ಯಾಂಕ್​ಗಳ ಮುಂದೆ ಹೋದರೆ ಖಾತೆ ಹೊಂದಬೇಕು ಹಾಗೂ ಆರು ತಿಂಗಳು ವಹಿವಾಟು ನಡೆಸಿರಬೇಕೆಂಬ ಷರತ್ತು ವಿಧಿಸುತ್ತಾರೆ. ಈ ನಿಯಮ ಪಾಲಿಸಲಾಗದೆ ಬಹುತೇಕರು ಖಾಸಗಿ ಲೇವಾದೇವಿದಾರರ ಬಳಿ ಹೋಗುತ್ತಾರೆ.

ವ್ಯಾಪಾರಿಗಳ ಸಮಸ್ಯೆ

* ಲೈಂಗಿಕ ದೌರ್ಜನ್ಯ

* ಪೊಲೀಸ್ ಕಿರುಕುಳ

* ಸರ್ಕಾರಿ ಯೋಜನೆಗಳ ಫಲ ಸಿಗುತ್ತಿಲ್ಲ

* ಶಿಕ್ಷಣದ ಕೊರತೆ

* ಸೂಕ್ತ ರಕ್ಷಣೆ ಇಲ್ಲ

ವಾಸ ಎಲ್ಲೆಲ್ಲಿ?

*ಶೇ. 62- ಜನ ಬಾಡಿಗೆ ಮನೆ

*ಶೇ. 20- ಜನ ಕೊಳೆಗೇರಿ

*ಶೇ.10- ಜನ ಸ್ವಂತ ಮನೆ

*ಶೇ.8- ಜನ ಬೀದಿ ಬದಿ ವಾಸ

ಸಿಗದ ಗುರುತಿನ ಚೀಟಿ

ಪೊಲೀಸರು ಹಾಗೂ ಅಧಿಕಾರಿಗಳ ಕಿರುಕುಳ ತಪ್ಪಿಸಿಕೊಳ್ಳಲು ಬಿಬಿಎಂಪಿ ಹಾಗೂ ಇತರೆ ನಗರಗಳ ಸ್ಥಳೀಯ ಸಂಸ್ಥೆಯಿಂದ ಗುರುತಿನ ಚೀಟಿಯನ್ನು ನೀಡಬೇಕು ಎಂದು ದೊಡ್ಡ ಹೋರಾಟ ನಡೆದಿತ್ತು. ಆದರೆ ಈವರೆಗೆ ಎಲ್ಲ ವ್ಯಾಪಾರಿಗಳಿಗೂ ಗುರುತಿನ ಚೀಟಿಯೇ ಸಿಕ್ಕಿಲ್ಲ. ಬೆಂಗಳೂರಿನಲ್ಲಿ ಶೇ. 25 ವ್ಯಾಪಾರಿಗಳಷ್ಟೇ ಗುರುತಿನ ಚೀಟಿ ಪಡೆದಿದ್ದಾರೆ.

ಬೀದಿ ವ್ಯಾಪಾರಿಗಳಿಗೆ ಈವರೆಗೆ ಯಾವುದೇ ಯೋಜನೆ ಇರಲಿಲ್ಲ. ಸರ್ಕಾರ ಇದೀಗ ಹೊಸ ಯೋಜನೆ ತರುತ್ತಿರುವುದು ಸ್ವಾಗತಾರ್ಹ. ಗುರುತಿನ ಚೀಟಿ ವಿತರಣೆ, ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಆರೋಗ್ಯ ವಿಮೆಯಂತಹ ಯೋಜನೆಗಳನ್ನು ತರಬೇಕು.

| ಎಂ. ಸುರೇಶ್ ಕೆ.ಆರ್. ಮಾರುಕಟ್ಟೆ ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ

ಎಲ್ಲೆಲ್ಲಿ ಜಾರಿ

ಯೋಜನೆಯ ಪ್ರಾಯೋಗಿಕ ಜಾರಿಗೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಹಾಸನ ಹಾಗೂ ಬೀದರ್ ನಗರಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಹಂತ ಹಂತವಾಗಿ ಇತರ ನಗರಗಳಿಗೂ ವಿಸ್ತರಣೆ ಆಗಲಿದೆ.

5 ಕೋಟಿ ರೂ. ವಹಿವಾಟು

ಬೆಂಗಳೂರು ನಗರವೊಂದರಲ್ಲೇ 1 ರಿಂದ 1.5 ಲಕ್ಷ ಬೀದಿಬದಿ ಹಾಗೂ ಕೈಗಾಡಿ ವ್ಯಾಪಾರಿಗಳಿದ್ದಾರೆ. ಇವರಲ್ಲಿ ಬಹುತೇಕರು ಬಡ್ಡಿ ದಂಧೆಕೋರರಿಂದ ಪ್ರತಿ ನಿತ್ಯ 5 ಕೋಟಿ ರೂ.ಗಳಷ್ಟು ಸಾಲ ಪಡೆದರೆ, ಬಡ್ಡಿಯಾಗಿ ಒಂದು ಕೋಟಿ ರೂ. ಹಿಂದಿರುಗಿಸುತ್ತಾರೆಂಬ ಲೆಕ್ಕಾಚಾರ ಇದೆ. ಕೆಲ ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳೇ ಈ ದಂಧೆ ಹಿಂದಿರುವುದರಿಂದ ಮೀಟರ್ ಬಡ್ಡಿಕೋರರನ್ನು ಮಟ್ಟ ಹಾಕಲು ಸಾಧ್ಯವಾಗಿಲ್ಲ ಎಂಬ ಆರೋಪಗಳೂ ಕೇಳಿ ಬರುತ್ತಿವೆ.

ಎಷ್ಟರವರೆಗೆ ಸಿಗುತ್ತೆ ಸಾಲ?

ಪ್ರತಿ ವ್ಯಾಪಾರಿಗೆ ಕನಿಷ್ಠ 1 ಸಾವಿರದಿಂದ 25 ಸಾವಿರ ರೂ.ಗಳ ತನಕ ಸಾಲ ನೀಡುವ ಉದ್ದೇಶವನ್ನು ಸಹಕಾರ ಇಲಾಖೆ ಹೊಂದಿದೆ. ಮರು ಪಾವತಿ ಹೇಗಿದೆ ಎಂಬುದನ್ನು ನೋಡಿಕೊಂಡು 50 ಸಾವಿರ ರೂ.ಗಳ ತನಕ ಏರಿಸುವ ಉದ್ದೇಶವೂ ಇದೆ.

ಏನಿದು ಬಡವರ ಬಂಧು

ಸರ್ಕಾರ ಇದೇ ಮೊದಲ ಬಾರಿ ಕಾನೂನು ವ್ಯಾಪ್ತಿಯನ್ನು ಬಿಟ್ಟು ಪರ್ಯಾಯ ಮಾರ್ಗದ ಮೂಲಕ ಮೀಟರ್ ಬಡ್ಡಿ ದಂಧೆ ಮಟ್ಟ ಹಾಕುವ ಜತೆಯಲ್ಲೇ ವ್ಯಾಪಾರಿಗಳಿಗೆ ಆರ್ಥಿಕ ನೆರವು ಒದಗಿಸುವತ್ತ ಗಮನ ಹರಿಸಿದೆ. ಇದಕ್ಕಾಗಿ ಮೊದಲ ಹಂತದಲ್ಲಿ 5 ನಗರಗಳನ್ನು ಆಯ್ಕೆ ಮಾಡಿ 5 ಕೋಟಿ ರೂ. ಮೀಸಲಿಟ್ಟಿದೆ. ಬೀದಿಬದಿ ವ್ಯಾಪಾರಿಗಳ ಆಧಾರ್ ಕಾರ್ಡ್ ಮೂಲಕ ಆ ವಲಯದ ಸಹಕಾರ ಬ್ಯಾಂಕ್​ಗಳಿಗೆ ಲಿಂಕ್ ಮಾಡಲಾಗುತ್ತದೆ. ಬ್ಯಾಂಕ್ ಸಿಬ್ಬಂದಿ ಮೈಕ್ರೋ

ಎಟಿಎಂಗಳ ಮೂಲಕ ವ್ಯಾಪಾರಿಗಳಿರುವ ಜಾಗಕ್ಕೇ ಹೋಗಿ ಹಣ ನೀಡುತ್ತಾರೆ. ವಸೂಲಿಗೆ ಪಿಗ್ಮಿ ಸಂಗ್ರಹ ರೀತಿಯಲ್ಲಿ ಅರೆಕಾಲಿಕ ಸಿಬ್ಬಂದಿ ನೇಮಕ ಮಾಡುತ್ತಾರೆ. ಬ್ಯಾಂಕ್ ಸಾಲಕ್ಕೆ ಇರುವಷ್ಟೇ ಬಡ್ಡಿದರ ನಿಗದಿ ಮಾಡಲಾಗುತ್ತದೆ. ನಂಬಿಕೆ ಹಾಗೂ ವಿಶ್ವಾಸದ ಮೇಲೆ ಯೋಜನೆ ಜಾರಿ ಮಾಡಲಾಗುತ್ತದೆ.

ಬೀದಿಬದಿ ವ್ಯಾಪಾರಿ ಗಳಿಗೂ ನೆಮ್ಮದಿಯ ಜೀವನ ಕಲ್ಪಿಸಬೇಕೆಂಬುದು ಸರ್ಕಾರದ ಉದ್ದೇಶ. ಅವರು ದುಡಿದ ಹಣವೆಲ್ಲ ಬಡ್ಡಿದಂಧೆಕೋರರ ಬಾಯಿಗೆ ಹೋಗದಂತೆ ತಪ್ಪಿಸಲು ಈ ಯೋಜನೆ ತರಲಾಗುತ್ತಿದೆ. ಚೌತಿಗೆ ಐದು ನಗರಗಳಲ್ಲಿ ಯೋಜನೆ ಜಾರಿಗೆ ಬರಲಿದ್ದು, ಬಳಿಕ ಹಂತಹಂತವಾಗಿ ವಿಸ್ತರಣೆ ಆಗಲಿದೆ.

| ಬಂಡೆಪ್ಪ ಖಾಶೆಂಪುರ ಸಹಕಾರ ಸಚಿವ

Leave a Reply

Your email address will not be published. Required fields are marked *

Back To Top