ಮಾದ್ಯಮದವರ ಕಡೆಗೆ ತಿರುಗಿಯೂ ನೋಡದ ಮುಖ್ಯಮಂತ್ರಿ

ಉಡುಪಿ: ಕಾಪು ಬೀಚ್‌ನಲ್ಲಿರುವ ಸಾಯಿರಾಧ ಹೆರಿಟೇಜ್ ರೆಸಾರ್ಟ್‌ನಿಂದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೆಗೌಡ ಪ್ರಕೃತಿ ಚಿಕಿತ್ಸೆ ಪೂರ್ಣಗೊಳಿಸಿ ಶುಕ್ರವಾರ ನಿರ್ಗಮಿಸಿದ್ದಾರೆ.

ಸ್ಥಳೀಯ ನಾಯಕರು, ಮುಖಂಡರ ಜತೆ ಚರ್ಚಿಸಿ ಮಧ್ಯಾಹ್ನ 2 ಗಂಟೆಗೆ ಚಿಕ್ಕಮಗಳೂರಿಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ. ರೆಸಾರ್ಟ್‌ನಿಂದ ಹೊರಬರುವ ವೇಳೆ ಸಿಎಂ ಕುಮಾರಸ್ವಾಮಿ, ದೇವೆಗೌಡರು ಮಾಧ್ಯಮವರ ಕಡೆಗೆ ತಿರುಗಿಯೂ ನೋಡದೇ ನೇರವಾಗಿ ಕಾರನ್ನೇರಿ ತೆರಳಿದ್ದಾರೆ. ಈ ವೇಳೆ ರೆಸಾರ್ಟ್ ಸುತ್ತಮುತ್ತಲ ಪರಿಸರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಕಳೆದ ಐದು ದಿನಗಳಿಂದ ಗೋಸ್ವಾಲ್ ಆಯುರ್ವೇದಿಕ್ ಸಂಸ್ಥೆ ವೈದ್ಯ ಡಾ.ತನ್ಮಯ್ ಗೋಸ್ವಾಮಿ ನೇತೃತ್ವದಲ್ಲಿ 40 ಮಂದಿ ತಂಡದಿಂದ ಯೋಗ, ಧ್ಯಾನ, ಪಂಚಕರ್ಮ ಚಿಕಿತ್ಸೆಗೆ ಜೆಡಿಎಸ್ ವರಿಷ್ಠರು ಒಳಗಾಗಿದ್ದರು.