More

    ಚುನಾವಣಾ ರಾಜಕೀಯದಿಂದ ನಿವೃತ್ತಿ ಬಗ್ಗೆ ಸಿಎಂ ನಮಗೇನೂ ಹೇಳಿಲ್ಲ: ಜೆ.ಸಿ.ಮಾಧುಸ್ವಾಮಿ

    ಹಾಸನ: ಮೂರೂವರೆ ವರ್ಷದ ಬಳಿಕ ಸಿಎಂ ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುವ ಬಗ್ಗೆ ನಮ್ಮೊಟ್ಟಿಗೆ ಯಾವುದೇ ವಿಚಾರ ಹೇಳಿಕೊಂಡಿಲ್ಲ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

    ಮೊನ್ನೆ ಯಡಿಯೂರಪ್ಪ ನಾವೇ ಮತ್ತೆ ಐದು ವರ್ಷ ಸರ್ಕಾರ ಮಾಡ್ತೀವಿ ಅಂತ ಹೇಳಿದ್ದಾರೆ. ಅವರ ನಾಯಕತ್ವದ ಬಗ್ಗೆ ನಮಗೆ ವಿಶ್ವಾಸ ಇದೆ ಎಂ‌ದು ಸುದ್ದಿಗಾರರಿಗೆ ಹೇಳಿದರು.

    ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ, ಸಿಎಂ ದಾವೋಸ್ ಗೆ ಹೋಗಿದ್ದಾರೆ. ಅವರು ಮರಳಿ ಬಂದ ಬಳಿಕ ಈ ಬಗ್ಗೆ ನಿರ್ಧಾರ ಆಗಬಹುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts