ವಿಜಯನಗರ ನೂತನ ಜಿಲ್ಲೆಯ ವಿಚಾರವಾಗಿ ಮೂಡದ ಒಮ್ಮತ: ಸರ್ಕಾರದಲ್ಲೇ ಭಿನ್ನಾಭಿಪ್ರಾಯ

Latest News

ಜನರ ಮೇಲೆ ಕಾಳಜಿಯಿಲ್ಲ

ಮೈಸೂರು: ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರಗಳಿಗೆ ಜನರ ಮೇಲೆ ಕಾಳಜಿ ಇಲ್ಲ ಎಂದು ಶಾಸಕಿ ಸೌಮ್ಯಾ ರೆಡ್ಡಿ...

ನಿವೇಶನ ನೀಡಲು ಮೀನಮೇಷ

ಶೃಂಗೇರಿ: ತಾಲೂಕು ಕಚೇರಿ ದನದ ದೊಡ್ಡಿಯಾಗಿದೆ. ಬಡವರಿಗೆ ನಿವೇಶನ ನೀಡಲು ಜಾಗವೇ ಇಲ್ಲ ಎನ್ನುವ ಅಧಿಕಾರಿಗಳು ಮಾನವೀಯತೆ ಮರೆಯುತ್ತಿದ್ದಾರೆ. ಹಾಗಿದ್ದರೆ ಕಚೇರಿಗೆ ಬೀಗ...

ಶಾಸಕರ ಅನುದಾನದಲ್ಲಿ ಶುದ್ಧ ಗಂಗಾ ಘಟಕ

ಅಜ್ಜಂಪುರ: ಚುನಾವಣೆ ವೇಳೆ ಸಾಕಷ್ಟು ನಿರೀಕ್ಷೆ ಇರಿಸಿಕೊಂಡು ಗ್ರಾಮೀಣ ಮತದಾರರು ನನ್ನ ಕೈಹಿಡಿದಿದ್ದಾರೆ. ಅವರ ಋಣ ತೀರಿಸುವ ಹೊಣೆ ನನ್ನ ಮೇಲಿರುವುದರಿಂದ ಗ್ರಾಮೀಣ...

ಸಚಿವ, ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿ

ಚಿಕ್ಕಮಗಳೂರು: ಡಾ. ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆದಿಲ್ಲ ಎಂದು ಸುತ್ತೋಲೆ ಹೊರಡಿಸುವ ಮೂಲಕ ರಾಜ್ಯ ಶಿಕ್ಷಣ ಇಲಾಖೆ ಅಂಬೇಡ್ಕರ್ ಅವರನ್ನು ಅಪಮಾನಿಸಿದೆ ಎಂದು...

ಇನ್ನು ನಾಲ್ಕೈದು ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಶಿವಸೇನೆ-ಕಾಂಗ್ರೆಸ್​-ಎನ್​ಸಿಪಿ ಮೈತ್ರಿ ಸರ್ಕಾರ ರಚನೆ; ಇಂದು ಸಂಜೆ ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರ

ಮುಂಬೈ: ಇಂದು ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್​ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ 50 ನಿಮಿಷ ಮಾತುಕತೆ ನಡೆಸಿದ್ದಾರೆ. ಅದಾದ ಬಳಿಕ ಎನ್​ಸಿಪಿ ಹಾಗೂ...

ಬೆಂಗಳೂರು: ವಿಜಯನಗರವನ್ನು ನೂತನ ಜಿಲ್ಲೆಯನ್ನಾಗಿ ಮಾಡುವ ವಿಚಾರದಲ್ಲಿ ಸರ್ಕಾರದಲ್ಲಿಯೇ ಭಿನ್ನಾಭಿಪ್ರಾಯ ಉಂಟಾಗಿದ್ದು, ಸಚಿವ ಶ್ರೀರಾಮುಲು, ಶಾಸಕ ಸೋಮಶೇಖರ ರೆಡ್ಡಿ ಅಸಮಾಧಾನ ಹೊರಹಾಕಿದ್ದಾರೆ.

ಬಳ್ಳಾರಿ ಜಿಲ್ಲೆ ಅಖಂಡವಾಗಿದ್ರೆ ಅಭಿವೃದ್ಧಿ ಸಾಧ್ಯ
ಸುದ್ದಿಗಾರರೊಂದಿಗೆ ಬಳ್ಳಾರಿಯಲ್ಲಿ ಮಾತನಾಡಿದ ಶ್ರೀರಾಮುಲು ಅವರು ಕೆಲವು ಗೌಪ್ಯ ವಿಚಾರವನ್ನು ನಾನು ಬಹಿರಂಗವಾಗಿ ಮಾತಾಡಲ್ಲ. ನಾಳೆ ನಾನು ಕ್ಯಾಬಿನೆಟ್​​ನಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇನೆ. ಈ ಬಗ್ಗೆ ಈಗಾಗಲೇ ಪರ-ವಿರೋಧ ಚರ್ಚೆಯಾಗ್ತಿದೆ. ಸಿಎಂ ಬಳಿ ಮಾತಾಡೋ ಪ್ರಯತ್ನ ಮಾಡಿದ್ದೆ, ಸಾಧ್ಯವಾಗಿಲ್ಲ. ಬಳ್ಳಾರಿ ಜಿಲ್ಲೆ ಅಖಂಡವಾಗಿದ್ರೆ ಅಭಿವೃದ್ಧಿ ಸಾಧ್ಯ ಎಂದು ಪರೋಕ್ಷ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹೊಸಪೇಟೆ ‌ಜಿಲ್ಲೆ ಮಾಡಿದರೆ ತುಗಲಕ್ ದರ್ಬಾರ್ ಆಗುತ್ತದೆ
ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಮಾತನಾಡಿ, ಬಳ್ಳಾರಿ ‌ಜಿಲ್ಲೆ ಇಬ್ಭಾಗ ಮಾಡಲು ಬಿಡುವುದಿಲ್ಲ. ಹೊಸಪೇಟೆ ‌ಜಿಲ್ಲೆ ಮಾಡಿದರೆ ತುಗಲಕ್ ದರ್ಬಾರ್ ಆಗುತ್ತದೆ. ನಿಯೋಗದ ಜತೆಗೆ ಹೋದವರೆಲ್ಲ ಸ್ವಾರ್ಥಿಗಳು. ಯಾರದ್ದೋ ಸ್ವಾರ್ಥಕ್ಕೆ ವಿಜಯನಗರ ‌ಜಿಲ್ಲೆ ಮಾಡ್ತಿದ್ದಾರೆ ಎಂದು ಆನಂದ್ ಸಿಂಗ್​ಗೆ ಟಾಂಗ್ ಕೊಟ್ಟ ಸೋಮಶೇಖರ್ ರೆಡ್ಡಿ, ಅಖಂಡ ಬಳ್ಳಾರಿ ‌ಜಿಲ್ಲೆ ನಮ್ಮ ಆಗ್ರಹವಾಗಿದೆ. ಬೇಕಿದ್ರೆ ಬಳ್ಳಾರಿ ಜಿಲ್ಲೆಗೆ ವಿಜಯನಗರವೆಂದು ನಾಮಕರಣ ಮಾಡಿ. ಬೆಳಗಾವಿಯಲ್ಲಿ 18 ತಾಲೂಕುಗಳಿವೆ. ಆಂಧ್ರದ ಅನಂತಪುರ‌ ಜಿಲ್ಲೆ ಮುನ್ನೂರು ಕಿ.ಮೀ. ವಿಸ್ತೀರ್ಣ ಇದೆ. ಅವರಿಗಿಲ್ಲದ ತೊಂದರೆ ನಮಗೆ ಬಂದಿದೆಯಾ? ಬೆಳಗಾವಿ ಯಾಕೆ ವಿಭಜನೆ ಮಾಡ್ತಿಲ್ಲ? ಬಳ್ಳಾರಿಯೇ ಕಣ್ಣಿಗೆ ಕಾಣುತ್ತಿದೆಯಾ? ಈ ಬಗ್ಗೆ ಸಿಎಂ ಬಳಿ ಮನವಿ ಮಾಡುವೆ. ತರಾತುರಿಯಲ್ಲಿ‌ ಜಿಲ್ಲೆ ಘೋಷಣೆ ಮಾಡದಂತೆ ಮನವಿ ಮಾಡುವೆ ಎಂದು ತಿಳಿಸಿದರು.

ಸರ್ಕಾರ ವರದಿ ತರಿಸಿಕೊಂಡು ಜಿಲ್ಲಾ ಕೇಂದ್ರ ಆಯ್ಕೆ ಮಾಡಲಿ
ಈ ಬಗ್ಗೆ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್​ ಶಾಸಕ ಭೀಮಾನಾಯ್ಕ ವಿರೋಧ ವ್ಯಕ್ತಪಡಿಸಿದ್ದು, ವಿಜಯನಗರ ಜಿಲ್ಲಾ ಕೇಂದ್ರ ಮಾಡಿದ್ರೆ ಅಭಿವೃದ್ಧಿಯಾಗಲ್ಲ. ಭೌಗೋಳಿಕವಾಗಿ ಕೇಂದ್ರವಾಗಿರುವ ನಗರ ಜಿಲ್ಲೆಯಾಗಲಿ, ನೂತನ ಜಿಲ್ಲಾ ಕೇಂದ್ರ ಮಧ್ಯವಿದ್ದರೆ ಎಲ್ಲರಿಗೂ ಅನುಕೂಲವಾಗಲಿದೆ. ಸಿಎಂ ಯಡಿಯೂರಪ್ಪ ಎಲ್ಲರ ಅಭಿಪ್ರಾಯ ಸಂಗ್ರಹಿಸಬೇಕು. ಸರ್ಕಾರ ವರದಿ ತರಿಸಿಕೊಂಡು ಜಿಲ್ಲಾ ಕೇಂದ್ರ ಆಯ್ಕೆ ಮಾಡಲಿ. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಬಳಿಯೂ ಚರ್ಚೆ ನಡೆಸುತ್ತೇನೆ ಎಂದು ದಿಗ್ವಿಜಯ ನ್ಯೂಸ್​ಗೆ ಶಾಸಕ ಭೀಮಾನಾಯ್ಕ ಪ್ರತಿಕ್ರಿಯೆ ನೀಡಿದರು.

ವಿಜಯನಗರ ಐತಿಹಾಸಿಕ ಹಾಗೂ ಭೌಗೋಳಿಕವಾಗಿ ತನ್ನದೆ ಆದ ಪ್ರಸಿದ್ಧತೆ ಪಡೆದಿದ್ದು, ಹೊಸ ಜಿಲ್ಲೆಯಾಗಿ ಘೋಷಣೆ ಮಾಡಬೇಕು ಎಂದು ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಶಾಸಕರಾದ ಆನಂದ್​ಸಿಂಗ್, ಕಾಂಗ್ರೆಸ್ ಮುಖಂಡರಾದ ಅಲ್ಲಂ ವೀರಭದ್ರಪ್ಪ, ಕೆ.ಸಿ.ಕೊಂಡಯ್ಯ, ಕಂಪ್ಲಿ ಶಾಸಕ ಗಣೇಶ್ ನೇತೃತ್ವದ ನಿಯೋಗ ಬುಧವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಆಗ್ರಹಿಸಿತ್ತು. (ದಿಗ್ವಿಜಯ ನ್ಯೂಸ್​)

ವಿಜಯನಗರ ಜಿಲ್ಲೆ ಘೋಷಣೆಗೆ ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ

- Advertisement -

Stay connected

278,636FansLike
573FollowersFollow
611,000SubscribersSubscribe

ವಿಡಿಯೋ ನ್ಯೂಸ್

VIDEO: ಶವಪೆಟ್ಟಿಗೆಯಿಂದ ಎದ್ದುಕುಳಿತ ಮದುಮಗಳು; ಇದು ಮದುವೆನಾ, ಅಂತಿಮ ಸಂಸ್ಕಾರನಾ...

ಈ ಜಗತ್ತಿನಲ್ಲಿ ಎಂತೆಂತಾ ವಿಚಿತ್ರ ವ್ಯಕ್ತಿಗಳು ಇರುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇಲ್ಲೊಬ್ಬಳು ಮದುಮಗಳು ತನ್ನ ವಿಶಿಷ್ಟ ನಡೆಯಿಂದ ಸುದ್ದಿಯಾಗಿದ್ದಾಳೆ. ಮದುವೆ ಪ್ರತಿ ವ್ಯಕ್ತಿಯ ಜೀವನದಲ್ಲಿ ವಿಶೇಷ ಸಂದರ್ಭ. ನಾವು ಹೀಗೇ ವಿವಾಹವಾಗಬೇಕು ಎಂದು...

VIDEO: ರಸ್ತೆಯಲ್ಲಿ ಎಂಬಿಎ ವಿದ್ಯಾರ್ಥಿನಿಯ ವಿಭಿನ್ನ ನೃತ್ಯ; ಇದು ಮನರಂಜನೆಗೆ...

ಇಂದೋರ್​: ವಾಹನ ಸವಾರರಿಗೆ ಟ್ರಾಫಿಕ್​ ನಿಯಮಗಳನ್ನು ಅರ್ಥ ಮಾಡಿಸುವುದು ಟ್ರಾಫಿಕ್​ ಪೊಲೀಸರಿಗೆ ದೊಡ್ಡ ಸಾಹಸವೇ ಸರಿ. ಬೈಕ್​ ಸವಾರರು ಹೆಲ್ಮೆಟ್​ ಧರಿಸುವುದಿಲ್ಲ, ಕಾರು ಚಾಲಕರು ಸೀಟ್​ ಬೆಲ್ಟ್​ ಹಾಕಿಕೊಂಡಿರುವುದಿಲ್ಲ...ಅದರೊಟ್ಟಿಗೆ ಬೇಕಾಬಿಟ್ಟಿ ಚಾಲನೆ ಬೇರೆ....

VIDEO: ಮೃತ ವ್ಯಕ್ತಿಯ ಶ್ವಾಸಕೋಶವನ್ನು ಬೇರೊಬ್ಬರಿಗೆ ಕಸಿ ಮಾಡಲು ಹೊರತೆಗೆದ...

ಬೀಜಿಂಗ್​: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅದರ ಪ್ಯಾಕೆಟ್​ ಮೇಲೆಯೇ ಬರೆದಿರುತ್ತದೆ. ಧೂಮಪಾನದಿಂದ ಶ್ವಾಸಕೋಶಗಳು ಕಪ್ಪಾಗುತ್ತವೆ ಎಂಬುದನ್ನೂ ವೈದ್ಯ ಲೋಕ ಸಾಬೀತು ಪಡಿಸಿದೆ. ಅದನ್ನು ನೋಡಿ ಕೂಡ ಅನೇಕರು ಸ್ಮೋಕ್​ ಮಾಡುವುದನ್ನು ಮುಂದುವರಿಸುತ್ತಾರೆ....

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...

VIDEO| ಜೆಎನ್​ಯು ವಿದ್ಯಾರ್ಥಿಗಳ ಹೆಸರಿನಲ್ಲಿ ವೈರಲ್​ ಆಗಿದ್ದ ವಿಡಿಯೋದ ಅಸಲಿಯತ್ತು...

ನವದೆಹಲಿ: ಪಾಕಿಸ್ತಾನದ ಲಾಹೋರ್​​ನಲ್ಲಿ ನಡೆದಿದ್ದ ಫೈಜ್​ ಸಾಹಿತ್ಯೋತ್ಸವದಲ್ಲಿ ವಿದ್ಯಾರ್ಥಿಗಳು ಕೂಗಿದ್ದ "ಆಜಾದಿ" ಘೋಷಣೆಯ ವಿಡಿಯೋವನ್ನು ದೆಹಲಿಯ ಜವಹರ್​ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್​ಯು)ದ ವಿದ್ಯಾರ್ಥಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಶೇರ್​ ಮಾಡಲಾಗಿದೆ. "ಜೆಎನ್​ಯು...

VIDEO| ಮೀಮ್ಸ್​ ವಿಡಿಯೋ ಹರಿಬಿಡುವ ಮೂಲಕ ಸೋದರ ರಮೇಶ್​ ಜಾರಕಿಹೊಳಿಗೆ...

ಬೆಳಗಾವಿ: ಗೋಕಾಕ್​ ಕ್ಷೇತ್ರದ ಉಪಚುನಾವಣೆಯ ಕದನ ತೀವ್ರ ಕುತೂಹಲ ಮೂಡಿಸಿದೆ. ಸಹೋದರರ ನಡುವಿನ ಜಿದ್ದಾಜಿದ್ದಿಯೇ ಅದಕ್ಕೆ ನೇರ ಕಾರಣವಾಗಿದೆ. ಕಾಂಗ್ರೆಸ್​ಗೆ ಗುಡ್​ಬೈ ಹೇಳಿ ಬಿಜೆಪಿ ಸೇರಿಕೊಂಡಿರುವ ಸೋದರ ರಮೇಶ್​ ಜಾರಕಿ...

VIDEO| ಶಾಸಕ ತನ್ವೀರ್​ ಸೇಠ್​ ಹಲ್ಲೆ ಪ್ರಕರಣ: ಪೊಲೀಸ್​ ವಿಚಾರಣೆ...

ಮೈಸೂರು: ಕಾಂಗ್ರೆಸ್​ ಶಾಸಕ ಹಾಗೂ ಮಾಜಿ ಸಚಿವ ತನ್ವೀರ್‌ ಸೇಠ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸ್​ ವಿಚಾರಣೆಯ ವೇಳೆ ಸ್ಪೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ. ತನ್ವೀರ್‌ ಸೇಠ್ ಹತ್ಯೆಗೆ ಈ ಹಿಂದೆ...

VIDEO: ಗೋಕಾಕ್​ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಲಖನ್​, ಸತೀಶ್​ ನಾಮಪತ್ರ ಸಲ್ಲಿಕೆ;...

ಗೋಕಾಕ್​: ಡಿಸೆಂಬರ್​ 5ಕ್ಕೆ ಉಪಚುನಾವಣೆ ನಡೆಯಲಿದ್ದು ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಬಹುತೇಕ ಅನರ್ಹರೆಲ್ಲ ತಮ್ಮ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ ಇವತ್ತು ಕುತೂಹಲ ಮೂಡಿಸಿದ್ದು ಗೋಕಾಕ್​ ಕ್ಷೇತ್ರ. ಇಲ್ಲಿ ಬಿಜೆಪಿಯಿಂದ ರಮೇಶ್​...