ಕಿರು ಏತ ನೀರಾವರಿ ಯೋಜನೆಗಳಿಗೆ ಮಾಮನಿ ಕಾಯಕಲ್ಪ; ಸಿಎಂ ಬೊಮ್ಮಾಯಿ‌ ಭಾವಪೂರ್ಣ ಸ್ಮರಣೆ

ಬೆಂಗಳೂರು: ಅನಾರೋಗ್ಯದಿಂದ ಚೇತರಿಕೆ ಕಾಣದೆ ಸಣ್ಣ ವಯಸ್ಸಿನಲ್ಲೇ ಶಾಸಕ ಆನಂದ ಮಾಮನಿ ಅಗಲಿರುವುದು ದುರ್ದೈವ. ಸವದತ್ತಿ ವಿಧಾನಸಭೆ ಕ್ಷೇತ್ರವನ್ನು ಮೂರನೇ ಬಾರಿಗೆ ಪ್ರತಿನಿಧಿಸಿರುವ ಅವರು ಸದಾ ಕ್ರಿಯಾಶೀಲರು. ರೈತರ ಪರ ಕಾಳಜಿ ಉಳ್ಳವರು, ಮಲಪ್ರಭಾ ನದಿ ವ್ಯಾಪ್ತಿಗೆ ಎಂಟು ಕಿರು ಏತ ನೀರಾವರಿ ಯೋಜನೆಗಳಿಗೆ ಕಾಯಕಲ್ಪ ನೀಡಿದವರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಭಾವಪೂರ್ಣವಾಗಿ ಸ್ಮರಿಸಿದರು. ವಿಧಾನಸಭೆ ಉಪಾಧ್ಯಕ್ಷರಾಗಿ ಸದನವನ್ನು ಸಮಚಿತ್ತದಿಂದ ನಿರ್ವಹಿಸಿದ್ದರು. ರಾಜಕೀಯವಾಗಿ ಉತ್ತಮ ಭವಿಷ್ಯ, ನಾಡಿನ ಏಳಿಗೆಗೆ ಹೆಚ್ಚೆಚ್ಚು ಕೊಡುಗೆ ನೀಡುವ ಅವಕಾಶ ಹೊಂದಿದ್ದರು. … Continue reading ಕಿರು ಏತ ನೀರಾವರಿ ಯೋಜನೆಗಳಿಗೆ ಮಾಮನಿ ಕಾಯಕಲ್ಪ; ಸಿಎಂ ಬೊಮ್ಮಾಯಿ‌ ಭಾವಪೂರ್ಣ ಸ್ಮರಣೆ