24.7 C
Bangalore
Sunday, December 15, 2019

ಮೋಡಗಳು ದಟ್ಟೈಸಿರುವಾಗ ಯುದ್ಧವಿಮಾನಗಳನ್ನು ನಿಖರವಾಗಿ ಗುರುತಿಸಲು ರೆಡಾರ್​ಗಳಿಗೆ ಸಾಧ್ಯವಾಗುವುದಿಲ್ಲ

Latest News

ರಾಹುಲ್​ ಗಾಂಧಿಯವರನ್ನು ವಿರೋಧಿಸಿದ ಶಿವಸೇನೆಗೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್​ ಇನ್ನೂ ಬೆಂಬಲ ನೀಡುತ್ತಿದೆಯಾ? ಗೊಂದಲ ವ್ಯಕ್ತಪಡಿಸಿದ ಮಾಯಾವತಿ

ನವದೆಹಲಿ: ನಾನು ರಾಹುಲ್​ ಸಾವರ್ಕರ್​ ಅಲ್ಲ ಎಂದು ಹೇಳಿದ್ದ ರಾಹುಲ್ ಗಾಂಧಿ ವಿರುದ್ಧ ಶಿವಸೇನೆ ತಿರುಗಿಬಿದ್ದಿದೆ. ರಾಹುಲ್​ ಗಾಂಧಿಯವರು ಸಾವರ್ಕರ್​ ಬಗ್ಗೆ ಆ ಮಾತುಗಳನ್ನು ಆಡಿದ್ದು ದುರದೃಷ್ಟಕರ...

ಲವ್​ ಫೇಲ್ಯೂರ್​ನಿಂದ ಯುವಕ ಆತ್ಮಹತ್ಯೆ: ಶವಪರೀಕ್ಷೆ ನಿರಾಕರಿಸಿ ಮೃತದೇಹ ಹೊತ್ತೊಯ್ದವರು ಪೊಲೀಸ್​ ಕೈಗೆ ಸಿಕ್ಕಿಬಿದ್ದಿದ್ಹೇಗೆ?

ಕರ್ನೂಲ್​: ಶವಪರೀಕ್ಷೆ ಬೇಡವೆಂದು ಹೇಳಿ ಯುವಕರಿಬ್ಬರು ತಮ್ಮ ಕುಟುಂಬದ ಸದಸ್ಯನೊಬ್ಬನ ಮೃತದೇಹವನ್ನು ಬೈಕ್​ನಲ್ಲಿ ಹಾಕಿಕೊಂಡು ಪರಾರಿಯಾಗುವಾಗ ಪೊಲೀಸರು ಬೆನ್ನತ್ತಿ ಮೃತದೇಹವನ್ನು ಮರಳಿ ತಂದ...

ಬುದ್ಧ, ಬಸವಣ್ಣ, ಅಂಬೇಡ್ಕರ್​ರನ್ನು ದೇಶದಿಂದ ಓಡಿಸಿದವರು ಬಿಜೆಪಿಗೆ ಮತ ಹಾಕಿದ್ದಾರೆ: ಸತೀಶ್​ ಜಾರಕಿಹೊಳಿ ವಿವಾದಿತ ಹೇಳಿಕೆ

  ಗೋಕಾಕ್: ಉಪ ಚುನಾವಣೆಯಲ್ಲಿ ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್​ ಪರವಾಗಿದ್ದವರು ಕಾಂಗ್ರೆಸ್​ಗೆ ಮತ ಹಾಕಿದ್ದಾರೆ. ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್​ ಅವರನ್ನು ದೇಶದಿಂದ...

ಚಳಿಗಾಲದಲ್ಲಿ ಏನು ತಿನ್ನಬೇಕು? ಯಾವುದನ್ನು ತಿನ್ನಬಾರದು? ಎಂದೆಲ್ಲ ತಲೆ ಕೆಡಿಸಿಕೊಂಡಿದ್ರೆ ಒಮ್ಮೆ ಈ ಟಿಪ್ಸ್​ಗಳನ್ನು ಓದಿ…

ಚಳಿಗಾಲ ಬಂದಾಗಿದೆ. ಚಳಿಗಾಲದಲ್ಲಿ ತಿನ್ನೋ ಹ್ಯಾಬಿಟ್​ ಸ್ಪಲ್ಪ ಜಾಸ್ತಿಯಾಗೋದು ಸಹಜ. ಪದೇಪದೆ ಏನಾದ್ರೂ ತಿನ್ನಬೇಕು ಅನ್ನಿಸ್ತಾ ಇರತ್ತೆ. ಅದರಲ್ಲೂ ಸಂಜೆ ಚಳಿ ದೂರ ಮಾಡಿಕೊಳ್ಳಲು ಏನಾದ್ರೂ ಸರಿ...

ರಾಹುಲ್, ಸೋನಿಯಾ, ಪ್ರಿಯಾಂಕಾ ಹಾಗೂ ವಾದ್ರಾ ಇವರೆಲ್ಲ ನಕಲಿ ಗಾಂಧಿಗಳು: ಪ್ರಲ್ಹಾದ್​ ಜೋಶಿ

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದಲ್ಲಿರುವ ಎಲ್ಲರೂ ನಕಲಿ ಗಾಂಧಿಗಳು ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ವಾಗ್ದಾಳಿ ನಡೆಸಿದರು. ನಾನು ರಾಹುಲ್​ ಸಾವರ್ಕರ್​ ಅಲ್ಲ, ರಾಹುಲ್​...

ಭಾಟಿಂಡಾ: ಆಗಸದಲ್ಲಿ ಕರಿಮೋಡಗಳು ದಟ್ಟೈಸಿರುವಾಗ ಹಾಗೂ ಮಳೆಸುರಿಯುವ ವಾತಾವರಣ ಇದ್ದಾಗ ಯುದ್ಧವಿಮಾನಗಳನ್ನು ನಿಖರವಾಗಿ ಗುರುತಿಸಲು ರೆಡಾರ್​ಗಳಿಗೆ ಸಾಧ್ಯವಾಗುವುದಿಲ್ಲ ಎಂದು ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿ ಏರ್​ ಮಾರ್ಷಲ್​ ರಘುನಾಥ್​ ನಂಬಿಯಾರ್​ ಸ್ಪಷ್ಟಪಡಿಸಿದ್ದಾರೆ.

ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಅವರು, ದಟ್ಟ ಮೋಡಗಳು ಆಗಸವನ್ನು ಆವರಿಸಿದ್ದ ಹಿನ್ನೆಲೆಯಲ್ಲಿ, ಯುದ್ಧವಿಮಾನಗಳನ್ನು ಗುರುತಿಸಲು ರೆಡಾರ್​ಗಳಿಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ಪಾಕಿಸ್ತಾನದ ಬಾಲಾಕೋಟ್​ನಲ್ಲಿರುವ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಲು ಈ ಸಮಯವೇ ಸೂಕ್ತ ಎಂದು ಆಗಿನ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡರು.

ಕೇರಳದಲ್ಲಿ ಭಾನುವಾರ ಮಾತನಾಡಿದ್ದ ಸೇನಾಪಡೆ ಮುಖ್ಯಸ್ಥ ಜನರಲ್​ ಬಿಪಿನ್​ ರಾವತ್​ ಕೂಡ ಆಗಿನ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಖಾಸಗಿ ಸುದ್ದಿಸಂಸ್ಥೆ ಏರ್​ ಮಾರ್ಷಲ್​ ರಘುನಾಥ್​ ನಂಬಿಯಾರ್​ ಅವರನ್ನು ಸಂಪರ್ಕಿಸಿತ್ತು.

ವಿವಿಧ ವಾತಾವಾರಣದಲ್ಲಿ ಬೇರೆಬೇರೆ ತಂತ್ರಜ್ಞಾನ ಆಧರಿತವಾದ ರೆಡಾರ್​ಗಳ ಕಾರ್ಯನಿರ್ವಹಣೆಯಲ್ಲಿ ಅವುಗಳದ್ದೇ ಆದ ಇತಿಮಿತಿಗಳಿರುತ್ತವೆ. ಮೋಡಗಳು ದಟ್ಟೈಸಿರುವಾಗ, ಭಾರಿ ಮಳೆಯಾಗುತ್ತಿರುವಾಗ ಕೆಲವು ರೆಡಾರ್​ಗಳು ವಿಮಾನಗಳನ್ನು ನಿಖರವಾಗಿ ಗುರುತಿಸಬಲ್ಲವು. ಇನ್ನು ಹಲವಕ್ಕೆ ಸಾಧ್ಯವಾಗುವುದಿಲ್ಲ. ಕೆಲವೊಂದು ರೆಡಾರ್​ಗಳ ಕಾರ್ಯನಿರ್ವಹಣೆಯ ಇತಿಮಿತಿಯಿಂದಾಗಿ ಅವುಗಳಿಗೆ ವಿಮಾನಗಳನ್ನು ನಿಖರವಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ ಎಂದು ಏರ್​ ಮಾರ್ಷಲ್​ ಹೇಳಿದರು.

ಪಾಕ್​ ರೆಡಾರ್​ ತಂತ್ರಜ್ಞಾನ ಬದಲಾದರೂ ರಫೇಲ್​ ಯುದ್ಧವಿಮಾನಗಳಿಂದ ಭಾರತದ ಕೈ ಮೇಲು
2002ರಲ್ಲಿ ಭಾರತ ಪರಾಕ್ರಮ್​ ಕಾರ್ಯಾಚರಣೆ ನಡೆಸಿದಾಗ ಪಾಕಿಸ್ತಾನದ ಬಳಿ ಬಲಿಷ್ಠವಾದ ರೆಡಾರ್​ಗಳು ಇರಲಿಲ್ಲ. ಆದರೆ, ಆನಂತರದಲ್ಲಿ ಅವರು ತಮ್ಮ ರೆಡಾರ್​ ತಂತ್ರಜ್ಞಾನ ಸುಧಾರಿಸಿಕೊಂಡಿದ್ದಾರೆ. ಅವುಗಳಿಗೆ ಆಧುನಿಕತೆಯ ಸ್ಪರ್ಶ ನೀಡಿದ್ದಾರೆ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ಏರ್​ಚೀಫ್​ ಮಾರ್ಷಲ್​ ಬಿ.ಎಸ್​. ಧನೂಹಾ ಹೇಳಿದರು.

ಇಷ್ಟಾಗಿಯೂ ಭಾರತದ ವಾಯುಪಡೆಗೆ ರಫೇಲ್​ ಯುದ್ಧವಿಮಾನಗಳು ಸೇರ್ಪಡೆಗೊಂಡ ನಂತರದಲ್ಲಿ ಮತ್ತೊಮ್ಮ ಭಾರತದ ಕೈ ಮೇಲಾಗಿದೆ ಎಂದು ತಿಳಿಸಿದರು.

Stay connected

278,751FansLike
588FollowersFollow
628,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...