ವ್ಯಾಪಾರಿಯ ಸೋಗಲ್ಲಿ ಬಂದರು, ಅಂಗಡಿ ಮಾಲೀಕನನ್ನೇ ಕೊಂದರು; ಗುಂಡಿಕ್ಕಿ ಸಾಯಿಸಿದ್ರು ಸುಪಾರಿ ಕಿಲ್ಲರ್ಸ್​

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ರಾತ್ರಿ ಹೊತ್ತು ಗುಂಡಿನ ಸದ್ದು ಕೇಳಿಬಂದಿದ್ದು ವ್ಯಾಪಾರಿಯೊಬ್ಬರನ್ನು ಬಲಿ ಪಡೆದಿದೆ. ವರ್ತಕರ ಸೋಗಿನಲ್ಲಿ ಬಂದಿದ್ದ ಸುಪಾರಿ ಕಿಲ್ಲರ್ಸ್​ ಅಂಗಡಿ ಮಾಲೀಕನನ್ನು ಗುಂಡಿಕ್ಕಿ ಕೊಂದಿದ್ದಾರೆ. ಹೊಳಲ್ಕೆರೆ ಪಟ್ಟಣದ ಹೊಸದುರ್ಗ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಹೊಳಲ್ಕೆರೆಯ ಪ್ರಿಯದರ್ಶಿನಿ ಬಟ್ಟೆ ಅಂಗಡಿ ಮಾಲೀಕ ಮೂಲಸಿಂಗ್ ಕೊಲೆಗೀಡಾದ ವ್ಯಕ್ತಿ. ದುಷ್ಕರ್ಮಿಗಳು ಬಟ್ಟೆ ಮಾರಾಟ ಮಾಡುವ ಸೋಗಿನಲ್ಲಿ ಆಗಮಿಸಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಅಂಗಡಿ ಮುಂದೆ ಪ್ರಯೋಗಿಸಲಾದ ಗುಂಡಿನೇಟಿಗೆ ಮೂಲಸಿಂಗ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಹೊಳಲ್ಕೆರೆಯಲ್ಲಿ ಇದೇ ಮೊದಲ … Continue reading ವ್ಯಾಪಾರಿಯ ಸೋಗಲ್ಲಿ ಬಂದರು, ಅಂಗಡಿ ಮಾಲೀಕನನ್ನೇ ಕೊಂದರು; ಗುಂಡಿಕ್ಕಿ ಸಾಯಿಸಿದ್ರು ಸುಪಾರಿ ಕಿಲ್ಲರ್ಸ್​