ಕಾಡಿನ ನಾಶದಿಂದ ಹವಾಮಾನ ವೈಪರೀತ್ಯ

blank

ಶಿಕಾರಿಪುರ: ಕೆಲವು ದಶಕಗಳ ಹಿಂದೆ ಸಮೃದ್ಧ ಕಾಡುಗಳು, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ನಮ್ಮ ನಾಡು ಇಂದು ಬಯಲಾಗಿದೆ. ಮರಗಿಡಗಳನ್ನು ಕಡಿದ ಪರಿಣಾಮ ಇಂದು ಬರಗಾಲ, ಅತಿವೃಷ್ಟಿ, ಅಕಾಲಿಕ ಮಳೆಗಳನ್ನು ನೋಡುವಂತಾಗಿದೆ ಎಂದು ಪುರಸಭೆ ಅಧ್ಯಕ್ಷೆ ಸುನಂದಾ ಮಂಜುನಾಥ್ ಕಳವಳ ವ್ಯಕ್ತಪಡಿಸಿದರು.
ಪುರಸಭೆ ಮತ್ತು ಕೇಂದ್ರ ಸರ್ಕಾರದ ಅಮೃತ ಯೋಜನೆಯಡಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊದಲು ಮನೆಯಿಂದಲೇ ಪರಿಸರ ಜಾಗೃತಿಯ ಕಾರ್ಯ ಆರಂಭವಾಗಬೇಕು ಎಂದರು.
ಮನೆಗೊಂದು ಗಿಡನೆಡಿ. ನಾವಿರುವ ಬೀದಿ, ವಾರ್ಡ್‌ಗಳಲ್ಲಿ ಸಂಘ ಸಂಸ್ಥೆಗಳು, ಪುರಸಭೆ ಜತೆಗೂಡಿ ಗಿಡಗಳನ್ನು ನೆಡಿ. ಅವು ನೆರಳಿನ ಜತೆಗೆ ಪರಿಶುದ್ಧ ಗಾಳಿಯನ್ನು ಕೊಡುತ್ತವೆ. ಪರಿಸ ಸ್ವಚ್ಛತೆ ಕಾಪಾಡುವುದು, ಹಸಿರನ್ನು ಉಳಿಸಿ, ಬೆಳೆಸುವುದು, ಮಾಲಿನ್ಯ ತಡೆಗಟ್ಟುವುದು, ಭೂಮಿ ಮೇಲಿರುವ ಪ್ರತಿ ಜೀವಿಗೂ ಸುಸ್ಥಿರ ಜೀವನಕ್ಕೆ ನೆರವಾಗಲು ಪರಿಸರವನ್ನು ಅಣಿಗೊಳಿಸುವುದು ಈ ದಿನದ ಆಚರಣೆಯ ಉದ್ದೇಶ ಎಂದು ತಿಳಿಸಿದರು.
ಪ್ರತಿಯೊಬ್ಬರೂ ತಮ್ಮ ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡಬೇಕು. ಪ್ರಕೃತಿಯ ರಕ್ಷಣೆ, ಮಾಲಿನ್ಯ ತಡೆಗಟ್ಟುವುದು ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಲು ಪೂರಕವಾದ ಕ್ರಮಗಳನ್ನು ತೆಗೆದುಕೊಳ್ಳಲು ಪ್ರತಿಯೊಬ್ಬರೂ ಪುರಸಭೆಯೊಂದಿಗೆ ಕೈಜೋಡಿಸಿ ಎಂದು ಮನವಿ ಮಾಡಿದರು.
ಪುರಸಭೆ ಉಪಾಧ್ಯಕ್ಷೆ ರೂಪಾ ಮಂಜುನಾಥ್ ಮಾತನಾಡಿ. ಪ್ರಕೃತಿಯನ್ನು ದೇವರೆಂದು ಆರಾಧಿಸುತ್ತೇವೆ. ಒಂದು ಕಾಡಿದ್ದರೆ ಆ ಭಾಗದಲ್ಲಿ ಕಾಲಕಾಲಕ್ಕೆ ಮಳೆಯಾಗಿ, ಸರಿಯಾದ ಬೆಳೆ ಬಂದು ನಾಡು ಸಮೃದ್ಧವಾಗುತ್ತದೆ. ಕಾಡಿದ್ದರೆ ನಾಡು ಎಂಬ ಕಲ್ಪನೆ ಇರಬೇಕು. ಪರಿಸರ ನಾಶವನ್ನು ಮನುಷ್ಯರೇ ತಡೆಯದಿದ್ದರೆ ಹೇಗೆ? ಅಭಿವೃದ್ಧಿಯ ನೆಪದಲ್ಲಿ ಬಹುತೇಕ ಕಾಡುಗಳು ಮರೆಯಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ಲಾಸ್ಟಿಕ್ ಬಳಕೆ ತ್ಯಜಿಸುವ ಶಪಥ ಮಾಡುವ ಮೂಲಕ ಜನರು ಈ ದಿನವನ್ನು ಆಚರಿಸಬೇಕು. ಪ್ಲಾಸ್ಟಿಕ್‌ನಿಂದ ಆಗುವ ಪರಿಸರ ಮಾಲಿನ್ಯವನ್ನು ಜಗತ್ತಿನಿಂದ ಕೊನೆಗೊಳಿಸುವುದು ಎಂಬ ಧ್ಯೇಯವಾಕ್ಯದೊಂದಿಗೆ ಪರಿಸರ ದಿನವನ್ನು ಆಚರಿಸಬೇಕು. ವಿದ್ಯಾರ್ಥಿಗಳು, ಸಾರ್ವಜನಿಕರು ಕೂಡ ಗಿಡಗಳನ್ನು ನೆಡುವ ಜತೆಗೆ ಪರಿಸರ ಸ್ವಚ್ಛತೆಗೂ ಕೈಜೋಡಿಸಬೇಕು. ಈ ಮೂಲಕ ವಿಶ್ವ ಪರಿಸರ ದಿನಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ಮುಖ್ಯಾಧಿಕಾರಿ ಭರತ್, ಸಂಘಟನಾಧಿಕಾರಿ ಸುರೇಶ್, ವ್ಯವಸ್ಥಾಪಕ ರಾಜಕುಮಾರ್, ಸೈಯದ್ ನವಾಜ್, ವಿವಿಧ ಸಂಘಟನೆಗಳಳ ಪ್ರಿಯಾಂಕಾ, ಯಶೋದಾ, ದೇವರಾಜ ಇತರರಿದ್ದರು.

Share This Article

ಒಂದು ತಿಂಗಳು ಸಕ್ಕರೆ ಮತ್ತು ಉಪ್ಪು ಬಿಟ್ಟರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? | Sugar

Sugar: ಸಾಮಾನ್ಯವಾಗಿ ಮನುಷ್ಯನ ದೇಹ ಅನಾರೋಗ್ಯಕ್ಕೊಳಗಾದಾಗ ಆಹಾರದಲ್ಲಿ ಸಕ್ಕೆರೆ ಮತ್ತು ಉಪ್ಪುನಂತಹ ಅಂಶಗಳನ್ನು ತ್ಯಜಿಸಬೇಕಾಗುತ್ತದೆ. ಇದರಿಂದ…

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…