Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಒಂದೇ ಕಡೆ ತಳವೂರಿದ ಕ್ಲರಿಕಲ್ ಸ್ಟಾಫ್ ಎತ್ತಂಗಡಿ!

Wednesday, 19.09.2018, 3:02 AM       No Comments

| ಕೀರ್ತಿನಾರಾಯಣ ಸಿ. ಬೆಂಗಳೂರು

ಸರ್ಕಾರಿ ಕಚೇರಿಗಳಲ್ಲಿ ಹಲವು ವರ್ಷಗಳಿಂದ ಒಂದೇ ಕಡೆ ತಳವೂರಿದ್ದ ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ (ಮಿನಿಸ್ಟರಿಯಲ್ ಸ್ಟಾಫ್) ಸಿಬ್ಬಂದಿ ಎತ್ತಂಗಡಿ ಮಾಡಲು ರಾಜ್ಯ ಸರ್ಕಾರ ಕೊನೆಗೂ ಮುಂದಾಗಿದೆ. ಎಸ್​ಡಿಎ ಹಾಗೂ ಎಫ್​ಡಿಎಗಳು 3 ವರ್ಷಕ್ಕಿಂತ ಹೆಚ್ಚು ಒಂದೇ ಕಡೆ ಇರದಂತೆ ನಿಗಾ ವಹಿಸಲು ಆದೇಶಿಸಿದೆ.

ಪ್ರಾಥಮಿಕ ಹಂತವಾಗಿ ಪೊಲೀಸ್ ಇಲಾಖೆ 3 ವರ್ಷಕ್ಕೊಮ್ಮೆ ಕಡ್ಡಾಯ ವರ್ಗಾವಣೆ ನಿಯಮ ಪಾಲನೆಗೆ ಆದೇಶ ಹೊರಡಿಸಿದೆ. ಮುಂದಿನ ದಿನಗಳಲ್ಲಿ ಈ ನಿಯಮ ರಾಜ್ಯದ ಎಲ್ಲ ಸರ್ಕಾರಿ ಇಲಾಖೆ ಗಳಿಗೂ ವಿಸ್ತರಣೆಯಾಗಲಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿ, ಕಮಿಷನರ್ ಕಚೇರಿ, ಐಜಿಪಿ, ಡಿಸಿಪಿ, ಎಸ್ಪಿ, ಡಿವೈಎಸ್ಪಿ ಕಚೇರಿ ಹಾಗೂ ಕೆಎಸ್​ಆರ್​ಪಿ ಕಮಾಂಡೆಂಟ್ ಕಚೇರಿ ಸೇರಿ ರಾಜ್ಯಾದ್ಯಂತ ಇಲಾಖೆಯ ಬೇರೆಬೇರೆ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ 1700ಕ್ಕೂ ಹೆಚ್ಚು ಎಫ್​ಡಿಎ ಮತ್ತು ಎಸ್​ಡಿಎ ಸಿಬ್ಬಂದಿ ವರ್ಗಾವಣೆಗೆ ಡಿಜಿಪಿ ನೀಲಮಣಿ ಎನ್.ರಾಜು ಲಿಖಿತ ಆದೇಶ ಹೊರಡಿಸಿದ್ದಾರೆ.

ವರ್ಗಾವಣೆ ಆದೇಶ ಪತ್ರ, ವೇತನ, ಭತ್ಯೆ, ಸಾಲ ಮಂಜೂರಾತಿ ಸೇರಿ ಆಯಾ ಇಲಾಖೆಗೆ ಸಂಬಂಧಿಸಿ ಪ್ರತಿಯೊಂದು ಪತ್ರ ವ್ಯವಹಾರವೂ ಈ ಮಿನಿಸ್ಟರಿಯಲ್ ಸ್ಟಾಫ್ ಮುಖಾಂತರವೇ ನಡೆಯುತ್ತದೆ. ಪ್ರತಿಯೊಂದು ಪತ್ರ, ಆದೇಶಕ್ಕೆ ಸಂಬಂಧಪಟ್ಟ ಅಧಿಕಾರಿ ಸಹಿ ಹಾಕಿಸುವ ಜವಾಬ್ದಾರಿ ಎಸ್​ಡಿಎ ಮತ್ತು ಎಫ್​ಡಿಎ ಸಿಬ್ಬಂದಿಯದ್ದಾಗಿರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಕೆಲವರು ಉದ್ಯೋಗಿಗಳಿಗೆ ಲಂಚಕ್ಕಾಗಿ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿಬಂದಿತ್ತು.

ಈ ಹಿನ್ನೆಲೆಯಲ್ಲಿ 3 ವರ್ಷಕ್ಕಿಂತ ಹೆಚ್ಚಿನ ಅವಧಿ ಒಂದೇ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರನ್ನು ಈ ಕೂಡಲೇ ಬೇರೆಡೆಗೆ ವರ್ಗಾವಣೆಗೊಳಿಸಬೇಕು. ಜತೆಗೆ ಮುಂದೆಯೂ ಕಡ್ಡಾಯ ವರ್ಗಾವಣೆ ನಿಯಮ ಪಾಲಿಸುವಂತೆ ಅಧಿಕೃತವಾಗಿ ಆದೇಶವಾಗಿರುವುದರಿಂದ ಕೆಳಹಂತದ ಸಿಬ್ಬಂದಿ ನಿಟ್ಟುಸಿರುಬಿಟ್ಟಿದ್ದಾರೆ. ಕಾಲಕಾಲಕ್ಕೆ ವರ್ಗಾವಣೆಗೊಳಿಸಿ ಆ ಕುರಿತ ವರದಿಯನ್ನು ಮುಖ್ಯ ಕಚೇರಿಗೆ ಸಲ್ಲಿಸುವಂತೆ ಆಯಾ ಘಟಕದ ಮುಖ್ಯಸ್ಥರಿಗೆ ಸೂಚನೆ ಕೊಡಲಾಗಿದೆ.

ಗಮನ ಸೆಳೆದಿದ್ದ ವಿಜಯವಾಣಿ ವರದಿ

ಹಲವಾರು ವರ್ಷಗಳಿಂದ ಮಿನಿಸ್ಟರಿಯಲ್ ಸಿಬ್ಬಂದಿ ಒಂದೇ ಕಡೆಯಿದ್ದು, ಅವರಿಂದ ಕೆಳಹಂತದ ಸಿಬ್ಬಂದಿ ಕಿರುಕುಳ ಅನುಭವಿಸುತ್ತಿರುವ ಕುರಿತು ಈ ಹಿಂದೆ ವಿಜಯವಾಣಿ ವಿಶೇಷ ವರದಿ ಪ್ರಕಟಿಸಿ ಪೊಲೀಸ್ ಇಲಾಖೆ ಗಮನ ಸೆಳೆದಿತ್ತು. ಪೊಲೀಸರಂತೆ ಮಿನಿಸ್ಟರಿಯಲ್ ಸಿಬ್ಬಂದಿಯನ್ನೂ ಕಡ್ಡಾಯ ವರ್ಗಾವಣೆ ನಿಯಮದ ವ್ಯಾಪ್ತಿಗೆ ತರುವ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಜತೆ ಮಾತುಕತೆ ನಡೆಸುವುದಾಗಿ ಆಡಳಿತ ವಿಭಾಗದ ಎಡಿಜಿಪಿ ಕಮಲ್​ಪಂತ್ ತಿಳಿಸಿದ್ದರು. ಅದರಂತೆ ಈಗ ಅಧಿಕೃತ ಆದೇಶ ಜಾರಿಯಾಗಿದೆ.

ಆದೇಶದಲ್ಲಿ ಏನಿದೆ?

ಹಲವು ವರ್ಷಗಳಿಂದ ಒಂದೇ ಕಚೇರಿ/ಶಾಖೆಯಲ್ಲಿರುವುದು ಗಮನಕ್ಕೆ ಬಂದಿದೆ.

ಒಂದೇ ಶಾಖೆಯಲ್ಲಿದ್ದರೆ ಬೇರೆ ಶಾಖೆಗಳ ಕಾರ್ಯವೈಖರಿ ಜ್ಞಾನ ಸಿಬ್ಬಂದಿಗೆ ಇರುವುದಿಲ್ಲ.

ಅಲ್ಲಿಗೆ ವರ್ಗಾವಣೆಯಾದರೆ ಕಚೇರಿ ಕಾರ್ಯಗಳಿಗೆ ಅಡಚಣೆಯಾಗುವ ಸಾಧ್ಯತೆ.

ಶಾಖಾಧೀಕ್ಷಕ, ಎಸ್​ಡಿಎ/ಎಫ್​ಡಿಎ ಒಂದೇ ಕಡೆ ಮೂರು ವರ್ಷಕ್ಕಿಂತ ಜಾಸ್ತಿ ಇರಬಾರದು.

ಎಲ್ಲ ಶಾಖೆಗಳಲ್ಲೂ ಕರ್ತವ್ಯ ನಿರ್ವಹಿಸಲು ಕಾಲಕಾಲಕ್ಕೆ ವರ್ಗಾವಣೆ ಆಗಬೇಕು.

ಸಿಬ್ಬಂದಿಯನ್ನು ವರ್ಗಾವಣೆಗೊಳಿಸಿರುವ ಕುರಿತು ಪ್ರತಿವರ್ಷ ವರದಿ ಸಲ್ಲಿಸಬೇಕು.

Leave a Reply

Your email address will not be published. Required fields are marked *

Back To Top