ಪಡುಬಿದ್ರಿ: ಕಾಪು ತಾಲೂಕು ಆಡಳಿತ ಸೌಧದ ಆವರಣದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಬೃಹದಾಕಾರದ ಹೆಬ್ಬಲಸಿನ ಮರವನ್ನು ಅರಣ್ಯ ಇಲಾಖೆ ಭಾನುವಾರ ತೆರವು ಮಾಡಿದೆ.
ಹಲವು ವರ್ಷಗಳಿಂದ ಇದನ್ನು ತೆರವು ಮಾಡಲು ಪ್ರಯತ್ನ ನಡೆದಿದ್ದು, ಇದೀಗ ತಹಸೀಲ್ದಾರ್ ಪ್ರತಿಭಾ, ತಾಪಂ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವ ಹಾಗೂ ಪುರಸಭಾ ಮುಖ್ಯಾಧಿಕಾರಿ ನಾಗರಾಜ್‌ರವರ ಪ್ರಯತ್ನದಿಂದ ಮರ ತೆರವು ಮಾಡಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳಾದ ಜೀವನ್‌ದಾಸ್ ಶೆಟ್ಟಿ, ಮಂಜುನಾಥ್ ಸಹಕಾರದಿಂದ ಗೌರವ್, ಜಯ, ಭರತ್, ಪ್ರಜಾನ್ ಅವರ ತಂಡ ಮರ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.