ಹೆಬ್ರಿಯಲ್ಲಿ ಅಪಾಯಕಾರಿ ಮರಗಳ ತೆರವು

ಹೆಬ್ರಿ: ಮುದ್ರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯ ಮೇಲೆ ಅಪಾಯಕಾರಿ ಸ್ಥಿತಿಯಲ್ಲಿ ವಾಲಿಕೊಂಡಿದ್ದ ಮರಗಳನ್ನು ಅರಣ್ಯ ಇಲಾಖೆಯವರು ಇತ್ತೀಚೆಗೆ ತೆರೆವುಗೊಳಿಸಿದರು. ಹೆಬ್ರಿ ತಾಲೂಕಾದ್ಯಂತ ಇರುವ ಅಪಾಯಕಾರಿ ಮರಗಳ ತೆರವಿನ ಕುರಿತು ವಿಜಯವಾಣಿಯಲ್ಲಿ ವರದಿ ಪ್ರಕಟಿಸಲಾಗಿತ್ತು. ಶೀಘ್ರದಲ್ಲಿ ಮರ ತೆರವುಗೊಳಿಸಿ ಎಲ್ಲರನ್ನೂ ಭಯದಿಂದ ಮುಕ್ತಿಗೊಳಿಸುವಂತೆ ಮಾಡಿದೆ ಎಂದು ಮುಖ್ಯ ಶಿಕ್ಷಕ ಮುದ್ದೂರು ಶ್ರೀನಿವಾಸ ಭಂಡಾರಿ ಹೇಳಿದ್ದಾರೆ.