More

    ನೆಲಕ್ಕುರುಳಿದ್ದ ವಿದ್ಯುತ್ ಕಂಬ ತೆರವು

    ಕೋಳಗುಂದ: ಟ್ರಾೃಕ್ಟರ್ ಡಿಕ್ಕಿ ಹೊಡೆದು ನೆಲಕ್ಕುರುಳಿದ್ದ ವಿದ್ಯುತ್ ಕಂಬವೊಂದನ್ನು ಗುರುವಾರ ಸೆಸ್ಕ್ ಸಿಬ್ಬಂದಿ ತಕ್ಷಣವೇ ತೆರವುಗೊಳಿಸಿವ ಮೂಲಕ ಅನಾಹುತ ತಪ್ಪಿಸಿದ್ದಾರೆ.

    ಗ್ರಾಮದಲ್ಲಿ ಕೆರೆ ಏರಿ ಕಾಮಗಾರಿ ನಡೆಯುತ್ತಿದ್ದು, ಟ್ರಾೃಕ್ಟರ್ ಮತ್ತು ಲಾರಿಗಳಲ್ಲಿ ಜಲ್ಲಿ, ಮರಳು ತರಲಾಗುತ್ತಿತ್ತು. ಈ ಸಂದರ್ಭ ಚಾಲಕನ ನಿರ್ಲಕ್ಷೃದಿಂದ ವಿದ್ಯುತ್ ಕಂಬಕ್ಕೆ ಟ್ರಾೃಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಕಂಬ ನೆಲಕ್ಕುರುಳಿದೆ. ಪರಿಸ್ಥಿತಿಯನ್ನು ಅರಿತ ಸಾರ್ವಜನಿಕರು ಕೂಡಲೇ ಸೆಸ್ಕ್ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಿಷಯ ತಿಳಿಸಿದರು.

    ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಬಂದ ಸಿಬ್ಬಂದಿ ವಿದ್ಯುತ್ ತಂತಿ ಬೇರ್ಪಡಿಸಿ ಯಾವುದೇ ಅವಘಡ ಸಂಭವಿಸದಂತೆ ಎಚ್ಚರ ವಹಿಸಿದರು. ಜಮೀನುಗಳಿಗೆ ತೆರಳುವ ರೈತರು, ರಾಸುಗಳು ಸಂಚರಿಸುವ ಪ್ರಮುಖ ರಸ್ತೆಯಲ್ಲೇ ಅವಘಡ ಘಟಿಸಿ ಆತಂಕ ಸೃಷ್ಟಿಸಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts