ಮುದ್ದೇಬಿಹಾಳ : ಪಟ್ಟಣದ ಪ್ರಮುಖ ರಸ್ತೆಗಳ ಡಿವೈಡರ್‌ನಲ್ಲಿರುವ ವಿದ್ಯುತ್ ಕಂಬಗಳಿಗೆ ಜಾಹೀರಾತು ಪ್ಲೆಕ್ಸ್ ಅಳವಡಿಸಿರುವುದನ್ನು ತೆರವುಗೊಳಿಸುವಲ್ಲಿ ವಿಫಲವಾಗಿರುವ ಪುರಸಭೆ ಮುಖ್ಯಾಧಿಕಾರಿ ಮಲ್ಲನ ಗೌಡ ಬಿರಾದಾರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸುವಂತೆ ಲೋಕಾಯುಕ್ತ ಎಸ್‌ಪಿ ಟಿ. ಮಲ್ಲೇಶ ಸೂಚಿಸಿದ ಘಟನೆ ಸೋಮವಾರ ಜರುಗಿದ ತಾಲೂಕು ಮಟ್ಟದ ಪ್ರಗತಿ ಪರಿಶೀಲನೆ ಸಭೆಯಲ್ಲಿ ನಡೆಯಿತು.
ಈ ಕುರಿತು ಲೋಕಯುಕ್ತರು ಮಲ್ಲನ ಗೌಡ ಬಿರಾದಾರ ಅವರಿಗೆ ಪ್ರಶ್ನಿಸಿದಾಗ, ತಕ್ಷಣ ತೆರವುಗೊಳಿಸುವುದಾಗಿ ತಿಳಿಸಿದರು.
ನಂತರ ಲೋಕಾಯುಕ್ತ ಎಸ್‌ಪಿ ಟಿ.ಮಲ್ಲೇಶ ಮಾತನಾಡಿ, ಪ್ರತಿ ವಾರ್ಡ್‌ನಲ್ಲಿ ಸ್ಯಾನಿಟೈಜೇಶನ್ ಪ್ರೋಗ್ರಾಮ್ ಹಮ್ಮಿಕೊಳ್ಳಬೇಕು. ತ್ಯಾಜ್ಯ ಸಂಗ್ರಹಣ ವಾಹನಕ್ಕೆ ಕಸ ಕೊಡದೆ ಇರುವವರನ್ನು ಗುರುತಿಸಿ ಮೊದಲು ಮನವೊಲಿಸಿ, ನಂತರ ಎಚ್ಚರಿಕೆ ನೀಡಿ. ಆದರೂ ಸುಧಾರಣೆ ಕಂಡು ಬರದಿದ್ದರೆ ಕ್ರಮ ಜರುಗಿಸಿ ಎಂದು ಸೂಚನೆ ನೀಡಿದರು.
TAGGED:ಮುದ್ದೇಬಿಹಾಳ