More

    ಸ್ವಚ್ಛತಾ ರಾಂಕಿಂಗ್ ಮಂಗಳೂರು ಕುಸಿತ

    ವೇಣುವಿನೋದ್ ಕೆ.ಎಸ್.ಮಂಗಳೂರು

    ಸ್ವಚ್ಛತೆಯ ಹುರುಪು ನಿರಂತರವಾಗಿರಬೇಕು ಎಂಬ ಕಾರಣದಿಂದ ದೇಶದ ವಿವಿಧ ನಗರಗಳ ಸ್ವಚ್ಛತೆಯ ಮಟ್ಟ ಅಳೆಯಲು ವರ್ಷಕ್ಕೊಮ್ಮೆ ನಡೆಸಲಾಗುವ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಮಂಗಳೂರು ನಗರ ಭಾರಿ ಕುಸಿತ ಕಂಡಿದೆ.
    ಪ್ರಾರಂಭದ ವರ್ಷಗಳಲ್ಲಿ 100ರ ಒಳಗಿರುತ್ತಿದ್ದ ರಾಂಕಿಂಗ್ ಪ್ರಸ್ತುತ 165ಕ್ಕೆ ಕುಸಿದಿದೆ. ಕೆಲ ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿರುವ 2019ರ ಮೊದಲ ನಾಲ್ಕು ತಿಂಗಳ ಅವಧಿಯ ಲೀಗ್‌ನಲ್ಲಿ 101ನೇ ಸ್ಥಾನದಲ್ಲಿದ್ದ ಮಂಗಳೂರು 2ನೇ ನಾಲ್ಕು ತಿಂಗಳ ಅವಧಿಯಲ್ಲಿ 65ಕ್ಕೆ ಏರಿಕೆ ಕಂಡರೂ ಒಟ್ಟಾರೆ ರ‌್ಯಾಂಕಿಂಗ್‌ನಲ್ಲಿ 165ಕ್ಕೆ ಕುಸಿಯಿತು.

    1 ಲಕ್ಷದಿಂದ 10 ಲಕ್ಷ ಜನಸಂಖ್ಯೆ ಇರುವ ನಗರಗಳನ್ನು ಹೋಲಿಸಿದರೆ ಕರ್ನಾಟಕದ ನಗರಗಳಲ್ಲಿ ಮೈಸೂರು ದೇಶದಲ್ಲೇ ನಿರಂತರವಾಗಿ ಅಗ್ರ 10ರಲ್ಲಿ ತನ್ನ ಸ್ಥಾನ ಕಾಪಿಡುತ್ತಾ ಬಂದಿದೆ. 2017ರ ಸಮೀಕ್ಷೆಯಲ್ಲಿ ಮೈಸೂರು ಟಾಪ್ 10ರೊಳಗೆ ಎಂದರೆ 5ನೇ ಸ್ಥಾನದಲ್ಲಿತ್ತು. ಮಂಗಳೂರು ಆಗ 63ನೇ ಸ್ಥಾನದಲ್ಲಿತ್ತು. ಉಡುಪಿ 143ನೇ ಸ್ಥಾನಿಯಾಗಿತ್ತು.
    2018ರಲ್ಲಿ ಮೈಸೂರು 8ನೇ ಸ್ಥಾನಿಯಾಗಿದ್ದರೆ ಮಂಗಳೂರು 63ರಿಂದ 52ಕ್ಕೇರಿ ಸ್ಥಾನ ಕಂಡಿತ್ತು. ಉಡುಪಿ 198ರಲ್ಲಿತ್ತು.
    2019ರಲ್ಲಿ ಮೈಸೂರು 3ನೇ ಸ್ಥಾನಿಯಾಗಿದ್ದು(ರಾಜ್ಯದಲ್ಲಿ ಅಗ್ರಸ್ಥಾನ) ಮಂಗಳೂರು 165ರಷ್ಟು ಕೆಳಕ್ಕೆ ಕುಸಿದಿದೆ, ಆದರೆ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿರುವುದಷ್ಟೇ ಸಮಾಧಾನ. ಬಿಬಿಎಂಪಿ(194), ತುಮಕೂರು(231), ಹುಬ್ಬಳ್ಳಿ(235), ಚಿತ್ರದುರ್ಗ(242), ಬಿಜಾಪುರ(251), ಉಡುಪಿ(254) ಹಾಗೂ ಬೆಳಗಾವಿ(277) ರಾಜ್ಯದಲ್ಲಿ ಉಳಿದ ಸ್ಥಾನದಲ್ಲಿವೆ. ಉಳಿದ ಹಲವು ನಗರಗಳು 300ರ ಕೆಳಗಿನ ಪಟ್ಟಿಯಲ್ಲಿವೆ.

    2016ರಿಂದ ಶುರು
    2016ರಲ್ಲಿ ಸ್ವಚ್ಛ ಸರ್ವೇಕ್ಷಣಾ ಸರ್ವೇ ಶುರುವಾಗಿತ್ತು. ಪ್ರಾರಂಭದ ವರ್ಷ 73 ನಗರಗಳನ್ನು ಸಮೀಕ್ಷೆಗೆ ಆಯ್ದುಕೊಳ್ಳಲಾಗಿತ್ತು. ಆಗ ಮೈಸೂರು ಅಗ್ರಸ್ಥಾನದಲ್ಲಿದ್ದರೆ ಮಧ್ಯಪ್ರದೇಶದ ಇಂದೋರ್ 25ನೇ ಸ್ಥಾನದಲ್ಲಿತ್ತು. ಆದರೆ ಅಲ್ಲಿಂದ ಬಳಿಕ ನಿರಂತರವಾಗಿ ಇಂದೋರ್ ನಗರವೇ ಅಗ್ರಪಟ್ಟದಲ್ಲಿದೆ. 2019ರ ಸಮೀಕ್ಷೆಯಲ್ಲೂ ಅದೇ ಸ್ಥಾನ ಕಾಯ್ದುಕೊಂಡಿದೆ. 2016ರ ಸಮೀಕ್ಷೆಯಲ್ಲಿ ಮಂಗಳೂರು ಭಾಗ ವಹಿಸಿರಲಿಲ್ಲ.

    ಪಚ್ಚನಾಡಿ ಕುಸಿತದ ಹೊಡೆತ
    ಪಚ್ಚನಾಡಿಯಲ್ಲಿ ತ್ಯಾಜ್ಯದ ರಾಶಿ ಮಂದಾರ ಪ್ರದೇಶಕ್ಕೆ ಕುಸಿದು ಉಂಟಾದ ತ್ಯಾಜ್ಯ ಪ್ರವಾಹದ ಕಾರಣದಿಂದ ಮಂಗಳೂರಿನ ರಾಂಕಿಂಗ್ ನಲ್ಲೂ ಕುಸಿತವಾಗಿದೆ. ಅದರ ಮೊದಲು ಇಷ್ಟು ಕೆಳಕ್ಕೆ ಕುಸಿತ ಆಗುತ್ತಿರಲಿಲ್ಲ. ಹಿಂದೆ ಡೋರ್ ಟು ಡೋರ್ ತ್ಯಾಜ್ಯ ಸಂಗ್ರಹ, ಕಸದ ಬಿನ್‌ಗಳಿಲ್ಲವಾದದ್ದು, ಇತ್ಯಾದಿಗಳಿಂದ ಮಂಗಳೂರಿನ ರಾಂಕಿಂಗ್ 100ರ ಒಳಗೆಯೇ ಇರುತ್ತಿತ್ತು, ಅಲ್ಲದೆ 52ಕ್ಕೆ ತಲಪಿತ್ತು. ಆದರೆ ಕಳೆದ ವರ್ಷ ಪಚ್ಚನಾಡಿಯ ದುರ್ಘಟನೆ ರ‌್ಯಾಂಕಿಂಗ್‌ಗೆ ದೊಡ್ಡ ಹೊಡೆತ ನೀಡಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts