ಜಗಳೂರು: ಸ್ವಚ್ಛತೆ ಕೇವಲ ಪೌರಕಾರ್ಮಿಕರ ಕೆಲಸವಲ್ಲ. ಅದರಲ್ಲಿ ಎಲ್ಲರ ಸಹಭಾಗಿತ್ವವೂ ಅಗತ್ಯ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಹೇಳಿದರು.
ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಶನಿವಾರ ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತೆ ಸೇವೆ ಕಾರ್ಯಕ್ರಮದಡಿ ಅಮ್ಮನ ಹೆಸರಿನಲ್ಲಿ ಒಂದು ಗಿಡ ನೆಡುವ ಹಾಗೂ ಸ್ವಚ್ಛಗೊಳಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೀದಿ, ಮನೆ ಮುಂಭಾಗದಲ್ಲಿ ಕಸ ಸುರಿಯವುದು, ಬಳಕೆಗೆ ಬಾರದ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡುವುದು ಸರಿಯಲ್ಲ. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸ್ವಚ್ಛತೆ ಬಹಳ ಮುಖ್ಯ. ಪಟ್ಟಣವನ್ನು ಸ್ವಚ್ಛವಾಗಿ ಇಟ್ಟರೆ ಎಲ್ಲರ ಆರೋಗ್ಯ ಚೆನ್ನಾಗಿರುತ್ತದೆ ಎಂದರು.
ಪಪಂ ಅಧ್ಯಕ್ಷ ಪಪಂ ಅಧ್ಯಕ್ಷ ನವೀನ್ ಕುಮಾರ್ ಮಾತನಾಡಿ, ನಮ್ಮ ಸುತ್ತಮುತ್ತಲಿನ ಪರಿಸರ ಚೆನ್ನಾಗಿದ್ದರೆ ನಾವು ಆರೋಗ್ಯವಂತರಾಗಿರುತ್ತೇವೆ. ಹಾಗಾಗಿ, ಕಸ ಚರಂಡಿಯಲ್ಲಿ ಹಾಗೂ ಖಾಲಿ ಜಾಗಗಳಲ್ಲಿ ಹಾಕದೆ ಕಸದ ಗಾಡಿಗಳಿಗೆ ಹಾಕಿ ಎಂದು ಮನವಿ ಮಾಡಿದರು.
ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕಾ ಮಾತನಾಡಿ, ಎಲ್ಲಿ ಬೇಕೆಂದರಲ್ಲಿ ಕಸ ಎಸೆಯದೆ ಸ್ವಚ್ಛತೆಯೇ ನಮ್ಮ ಸೇವೆ ಎಂದು ಎಲ್ಲರೂ ಭಾವಿಸಬೇಕು ಎಂದರು.
ಪಪಂ ಸದಸ್ಯರಾದ ರಮೇಶ್ ರೆಡ್ಡಿ, ಲಲಿತಾ ಶಿವಣ್ಣ, ಶಕೀಲ್, ಮಹಮ್ಮದ್ ಆಲಿ, ಲುಕ್ಮಾನ್ ಖಾನ್, ಮುಖಂಡರಾದ ಶಿವಣ್ಣ, ಓಬಳೇಶ್, ಮಂಜುನಾಥ್, ಆರೋಗ್ಯ ನಿರೀಕ್ಷಕ ಪ್ರಶಾಂತ್ ಮತ್ತಿತರರಿದ್ದರು.