ಸಂಬರಗಿ: ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಶಿಬಿರಾರ್ಥಿಗಳು ಗ್ರಾಮೀಣ ಪ್ರದೇಶದ ಜನರಲ್ಲಿ ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹನುಮಾಪುರ ಕವಲಗುಡ್ಡ ಮಠದ ಅಮರೇಶ್ವರ ಮಹಾರಾಜರು ಹೇಳಿದರು.
ಸಮೀಪದ ಸಿದ್ಧಿವಾಡಿ ಗ್ರಾಮದಲ್ಲಿ ಮದಭಾವಿಯ ಶ್ರೀ ಗುರುಸಿದ್ದೇಶ್ವರ ಸಂಯುಕ್ತ ಪಪೂ ಮಹಾವಿದ್ಯಾಲಯ ಈಚೆಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದಲ್ಲಿ ಅವರು ಮಾತನಾಡಿದರು.
ಶಾಸಕ ರಾಜು ಕಾಗೆ, ರಾಯಬಾಗ ಶಿಕ್ಷಣ ಪ್ರಸಾರ ಸಂಸ್ಥೆ ಅಧ್ಯಕ್ಷ ಬ್ಯಾರಿಸ್ಟರ್ ಅಮರಸಿಂಗ್ ಪಾಟೀಲ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ರೂಪಾಲಿ ಚವ್ಹಾಣ, ಕೃಷ್ಣ ಜುಗಳಿ, ಮಾರುತಿ ಮಗದುಮ್, ಅಣ್ಣ್ಣಾಸಾಹೇಬ ಪಾಟೀಲ, ರಾಹುಸಾಹೇಬ್ ಕಾಳಲಿ, ಕುಮಾರ ಪಾಟೀಲ, ಜಿ.ಎಂ.ಬಡಿಗೇರ, ವಿಠ್ಠಲ ತಕತರಾವ್, ಎಸ್.ಬಿ.ಬಾಳಿಗೇರಿ, ಪ್ರಾಚಾರ್ಯೆ ಸಂಗೀತಾ ಲೋಟೆ, ಪ್ರೊ.ವಿಠ್ಠಲ ತಾಖತ್ರಾವ್ ಇತರರಿದ್ದರು.