More

    ಲಂಡಿಹಳ್ಳದಲ್ಲಿ ಸ್ವಚ್ಛತಾ ಕಾರ್ಯ

    ಲಕ್ಷ್ಮೇಶ್ವರ: ಪಟ್ಟಣದ ಲಂಡಿಹಳ್ಳದಲ್ಲಿ ಪುರಸಭೆ ವತಿಯಿಂದ ಸೋಮವಾರ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ಹಳ್ಳದಲ್ಲಿ ಸಂಗ್ರಹವಾದ ಅಪಾರ ಪ್ರಮಾಣದ ತ್ಯಾಜ್ಯವನ್ನು ಜೆಸಿಬಿ ಮೂಲಕ ಸ್ವಚ್ಛಗೊಳಿಸಲಾಗುತ್ತಿದೆ.
    ಪಟ್ಟಣದ ಯಲಿಗಾರ ಪ್ಲಾಟ್, ಜನ್ನತ್‌ನಗರ, ಹಳ್ಳದಕೇರಿ, ಕೆಂಚಲಾಪುರ, ಬಳಿಗಾರ ಓಣಿ, ಅಂಬೇಡ್ಕ್‌ರ ನಗರ, ಇಂದಿರಾ ನಗರ ಬಡಾವಣೆಗುಂಟ ಹರಿಯುವ ಹಳ್ಳದುದ್ದಕ್ಕೂ ಗಿಡಗಂಟೆ ಬೆಳೆದಿದ್ದವು. ಹಳ್ಳದಲ್ಲಿ ಅಪಾರ ಪ್ರಮಾಣದಲ್ಲಿ ತ್ಯಾಜ್ಯ ತುಂಬಿ ನೀರು ಹರಿಯದಂತಾಗಿತ್ತು. ಇದರಿಂದ ಕೊಳಚೆ ನಿರ್ಮಾಣವಾಗಿ ರೋಗರುಜಿನಗಳ ತಾಣವಾಗಿತ್ತು. ಈ ಕುರಿತು ಮೇ 26ರಂದು ‘ಗಬ್ಬೆದ್ದು ನಾರುವ ಲಂಡಿನಾಲಾ’ ಶೀರ್ಷಿಕೆಯಡಿ ವಿಜಯವಾಣಿಯಲ್ಲಿ ವಿಸ್ತೃತ ವರದಿ ಪ್ರಕಟಿಸಿತ್ತು.
    ವರದಿಗೆ ಸ್ಪಂದಿಸಿ ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಅವರು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರ ಸೂಚನೆಯಂತೆ ಹಳ್ಳ ಸ್ವಚ್ಛತೆಗೆ ಮುಂದಾಗಿದ್ದಾರೆ.
    ‘ಮಳೆಗಾಲದಲ್ಲಿ ಚರಂಡಿ, ನಾಲಾ ನೀರಿನಿಂದ ತೊಂದರೆ ಉಂಟಾಗದಂತೆ, ಸಾಂಕ್ರಾಮಿಕ ರೋಗ ಹರಡದಂತೆ ಹಳ್ಳದಕೇರಿ ಓಣಿಯಿಂದ ಮಂಜಲಾಪುರ ಸಮೀಪದ ಹಳ್ಳದವರೆಗೆ ಸ್ವಚ್ಛಗೊಳಿಸಲಾಗುವುದು. ಪಟ್ಟಣದ ಜನರು ಚರಂಡಿಗೆ ಕಸ ಹಾಕುವುದು ಮುಖ್ಯವಾಗಿ ಹಳ್ಳದ ಅಕ್ಕ-ಪಕ್ಕದ ಜನರು ತ್ಯಾಜ್ಯ ಸುರಿಯವುದು, ಹಳ್ಳದ ದಂಡೆಗುಂಟ ತಿಪ್ಪೆ, ಬಣವೆ ಹಾಕುವುದರಿಂದ ಸಮಸ್ಯೆ ಉಲ್ಬಣವಾಗುತ್ತಿದೆ. ಪುರಸಭೆಯಿಂದ ನಿತ್ಯ ಮನೆ ಮನೆ ಕಸ ಸಂಗ್ರಹ ಮಾಡಲಾಗುತ್ತಿದ್ದು, ಜನರ ಸಹಕಾರ ಅಗತ್ಯ’ ಎಂದು ಶಂಕರ ಹುಲ್ಲಮ್ಮನವರ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts