ಮೀನುಪೇಟೆ ಮುತ್ತಪ್ಪ ದೇಗುಲ ಆವರಣ ಸ್ವಚ್ಛತೆ

ವಿರಾಜಪೇಟೆ: ನಾಲ್ಕನೇ ವರ್ಷದ ಸ್ವಚ್ಛತಾ ಸಪ್ತಾಹ, ಸ್ವಾತಂತ್ರ್ಯೋತ್ಸವದ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗಾಂಧಿನಗರದ ಒಕ್ಕೂಟದ ಸದಸ್ಯರು ಶನಿವಾರ ಪಟ್ಟಣದ ಮೀನುಪೇಟೆಯ ಮುತ್ತಪ್ಪ ದೇವಾಲಯದ ಆವರಣವನ್ನು ಶ್ರಮದಾನದ ಮೂಲಕ ಶುಚಿಗೊಳಿಸಿದರು.

ಚಿಕ್ಕಪೇಟೆಯ ಒಕ್ಕೂಟದ ಸದಸ್ಯರು, ವೀರಾಜಪೇಟೆ ಎ.ಒಕ್ಕೂಟದ ವತಿಯಿಂದ ಅರಸುನಗರದ ಕುಡಿಯುವ ನೀರಿನ ಟ್ಯಾಂಕ್ ಬಳಿಯಲ್ಲಿ ಸ್ವಚ್ಛತೆ ನಡೆಸಿದರು.

ಸ್ವಚ್ಛತಾ ಕಾರ್ಯಕ್ರಮದಲ್ಲಿ ಯೋಜನೆಯ ವೀರಾಜಪೇಟೆ ಮೇಲ್ವಿಚಾರಕರಾದ ರತ್ನಾ ಮೈಪಾಲ, ಸೇವಾ ಪ್ರತಿನಿಧಿ ಮಿನಾಕ್ಷಿ, ಗಾಂಧಿನಗರದ ಒಕ್ಕೂಟದ ಅಧ್ಯಕ್ಷೆ ಶೋಭಾ, ಉಪಾಧ್ಯಕ್ಷೆ ಸಮೀರ, ಕಾರ್ಯದರ್ಶಿ ಪದ್ಮಾವತಿ, ಚಿಕ್ಕಪೇಟೆ ಒಕ್ಕೂಟದ ಅಧ್ಯಕ್ಷ ಪ್ರದೀಪ್, ಸೇವಾ ಪ್ರತಿನಿಧಿ ಪದ್ಮಲತಾ, ವೀರಾಜಪೇಟೆ ಎ.ಒಕ್ಕೂಟದ ಅಧ್ಯಕ್ಷೆ ಕುಸುಮಾ ಸೇವಾಪ್ರತಿನಿಧಿ ಮೋಹನ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *