More

  425 ಸರ್ಕಾರಿ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ

  ಎನ್.ಆರ್.ಪುರ: ರೋಟರಿ ಸಂಸ್ಥೆ ಹಾಗೂ ಮುತ್ತೂಟ್ ಫೈನಾನ್ಸ್ ಕಂಪನಿಯ ಸಹ ಭಾಗಿತ್ವದಲ್ಲಿ 2.50 ಕೋಟಿ ರೂ. ರಾಜ್ಯದ 425 ಸರ್ಕಾರಿ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ನೀಡಲಾಗಿದೆ ಎಂದು ರೋಟರಿ ಸಂಸ್ಥೆಯ 3182ಜಿಲ್ಲೆಯ ಮಾಜಿ ರಾಜ್ಯಪಾಲ ಚಂದ್ರಶೇಖರ್ ತಿಳಿಸಿದರು.

  ತಾಲೂಕಿನ ಮುತ್ತಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಕ್ಲಬ್ ಹಾಗೂ ಮುತ್ತೂಟ್ ಫೈನಾನ್ಸ್ ಕಂಪನಿಯ ಸಹಯೋಗದಲ್ಲಿ 50 ಸಾವಿರ ರೂ. ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಲೆಗೆ ಹಸ್ತಾಂತರಿಸಿ ಮಾತನಾಡಿದ ಅವರು, ಶುದ್ಧವಾದ ನೀರು ಪ್ರತಿಯೊಬ್ಬರಿಗೂ ಅವಶ್ಯಕ. ನೀರು ಕೊಳಕಾಗಿದ್ದರೆ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಕೇರಳದ ಮುತ್ತೂಟ್ ಫೈನಾನ್ಸ್ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿ ರಾಜ್ಯದ ಶಾಲೆಗಳಿಗೆ ಶುದ್ಧವಾದ ಕುಡಿಯುವ ನೀರಿನ ಘಟಕ ನೀಡಿದ್ದೇವೆ. ಈ ಭಾಗದ ಕೊಪ್ಪ, ಶೃಂಗೇರಿ ಶಾಲೆಗಳಿಗೂ ಶುದ್ಧವಾದ ಕುಡಿಯುವ ನೀರಿನ ಘಟಕ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಬೇರೆ ರಾಜ್ಯಕ್ಕೂ ಈ ಕಾರ್ಯಕ್ರಮ ವಿಸ್ತರಣೆಯಾಗಲಿದೆ ಎಂದರು.
  ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಮಡಬೂರು ರಾಜೇಂದ್ರ ಮಾತನಾಡಿ, ಪ್ರತಿಯೊಬ್ಬರ ಮೇಲೂ ಸಮಾಜದ ಋಣ ಇರುತ್ತದೆ. ನಾವು ಅದನ್ನು ತೀರಿಸಬೇಕಾಗಿದೆ. ಮಕ್ಕಳು ಸಹ ದೊಡ್ಡವರಾದ ಮೇಲೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು. ರೋಟರಿ ಸಂಸ್ಥೆಯು ಮುತ್ತೂಟ್ ಫೈನಾನ್ಸ್ ಜತೆ ಸೇರಿ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ನೀಡುತ್ತಿರುವುದು ಒಳ್ಳೆಯ ಯೋಜನೆಯಾಗಿದೆ ಎಂದು ಹೇಳಿದರು.
  ರೋಟರಿ 3182ರ ಅಸಿಸ್ಟಂಟ್ ಗವರ್ನರ್ ಶ್ರೀಹರ್ಷ ಮಾತನಾಡಿ, ಸೇವೆಯೇ ರೋಟರಿ ಸಂಸ್ಥೆಯ ಮುಖ್ಯ ಗುರಿಯಾಗಿದೆ. ಭಾರತದಲ್ಲಿ ಪೋಲಿಯೋ ನಿರ್ಮೂಲನೆಯಲ್ಲಿ ರೋಟರಿ ಸಂಸ್ಥೆ ಪಾತ್ರ ಮಹತ್ವದ್ದಾಗಿದೆ. ಸಮಾಜದಿಂದ ಪಡೆದಿದ್ದನ್ನು ಮತ್ತೆ ಸಮಾಜಕ್ಕೆ ನೀಡಬೇಕಾಗಿದೆ ಎಂದರು.
  ರೋಟರಿ ಸಂಸ್ಥೆ ಅಧ್ಯಕ್ಷ ಕಿರಣ್, ರೋಟರಿ ಜೋನಲ್ ಲೆಫ್ಟಿನೆಂಟ್ ಜಿ.ದಿವಾಕರ, ರೋಟರಿ ಮಾಜಿ ಅಧ್ಯಕ್ಷ ಸುಂದರೇಶ್, ಮುತ್ತೂಟ್ ಫೈನಾನ್ಸ್‌ನ ಶಾಖಾ ವ್ಯವಸ್ಥಾಪಕ ಕೆ.ಅನಿಲ್, ಎಸ್‌ಡಿಎಂಸಿ ಅಧ್ಯಕ್ಷ ಮನೋಹರ್, ರೋಟರಿ ಕಾರ್ಯದರ್ಶಿ ಪಿ.ಎಸ್. ವಿದ್ಯಾ ನಂದಕುಮಾರ್ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts