ಪರೀಕ್ಷೆಯಲ್ಲಿ ಕೇಳಿದ್ದ ಪ್ರಶ್ನೆಗೆ ವಿಧವಾ ಪುನರ್​ವಿವಾಹದ ಪರವಾಗಿ ಉತ್ತರಿಸಿ ಜನಮನ ಗೆದ್ದ ಬಾಲಕ!

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ನೀಡುವ ಉತ್ತರ ಹಾಗೂ ಕೆಲವೊಮ್ಮೆ ಶಿಕ್ಷಕರು ಕೇಳುವ ವಿಚಿತ್ರ ಪ್ರಶ್ನೆಗಳ ಕುರಿತಾಗಿ ಸೋಶಿಯಲ್​​ ಮೀಡಿಯಾದಲ್ಲಿ ಚರ್ಚೆಯಾಗುತ್ತಿರುತ್ತದೆ. ಇದೀಗ ಐದನೇ ತರಗತಿಯ ವಿದ್ಯಾರ್ಥಿ ನೀಡಿರುವ ಉತ್ತರ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಐದನೇ ತರಗತಿಯ ಮಕ್ಕಳಿಗೆ, “ನೀವು ಸ್ವಾತಂತ್ರ್ಯಪೂರ್ವ ದಿನಗಳ ಸಮಾಜ ಸುಧಾರಕರೆಂದು ಭಾವಿಸಿ, ಅಂದು ಯಾವ ರೀತಿಯ ಸಾಮಾಜಿಕ ಸುಧಾರಣೆ ತರಲು ಬಯಸುತ್ತೀರಿ?ʼ ಎಂದು ಪ್ರಶ್ನಿಸಲಾಗಿತ್ತು. ಅದಕ್ಕೆ ಆ ಹುಡುಗ, ವಿಧವಾ ವಿವಾಹ ಪದ್ಧತಿಯ ಬಗ್ಗೆ ಹೇಳಿರುವುದು ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. … Continue reading ಪರೀಕ್ಷೆಯಲ್ಲಿ ಕೇಳಿದ್ದ ಪ್ರಶ್ನೆಗೆ ವಿಧವಾ ಪುನರ್​ವಿವಾಹದ ಪರವಾಗಿ ಉತ್ತರಿಸಿ ಜನಮನ ಗೆದ್ದ ಬಾಲಕ!