ನಿಮ್ಮ ಬೇಜವಾಬ್ದಾರಿಯಿಂದ ಜಿಲ್ಲೆ ಸರ್ವನಾಶವಾಗುತ್ತಿದೆ ಎಂದು ಡಿಸಿಎಂ ವಿರುದ್ಧ ಆರೋಪ ಮಾಡಿದ ಶಾಸಕ ಮಾಧುಸ್ವಾಮಿ

ತುಮಕೂರು: ಜಿಲ್ಲಾ ಪಂಚಾಯಿತಿ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಬಿಜೆಪಿ ಶಾಸಕ ಮಾಧುಸ್ವಾಮಿ ಮತ್ತು ಡಿಸಿಎಂ ಪರಮೇಶ್ವರ್​ ನಡುವೆ ಮಾತಿನ ಚಕಮಕಿ ನಡೆದಿದೆ.

ಡಿಸಿಎಂ ನೇತೃತ್ವದಲ್ಲಿ ನಡೆದ ಬರನಿರ್ವಹಣೆ ಕುರಿತು ನಡೆದ ಸಭೆಯಲ್ಲಿ ಮಾಧುಸ್ವಾಮಿ ಡಿಸಿಎಂ ವಿರುದ್ಧ ಹರಿಹಾಯ್ದರು. ನಿಮ್ಮ ಬೇಜವಾಬ್ದಾರಿಯಿಂದ ಯಾವ ಕೆಲಸವೂ ಆಗುತ್ತಿಲ್ಲ. ನಿಮ್ಮ ಮಾತಿಗೆ ಅಧಿಕಾರಿಗಳು ಕಿಮ್ಮತ್ತುಕೊಡುತ್ತಿಲ್ಲ. ನಮ್ಮ ಜಿಲ್ಲೆ ಸರ್ವನಾಶ ಆಗುತ್ತಿದೆ ಎಂದು ಮಾಧುಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ತಿಂಗಳು ನಡೆದ ಬರ ಪರಿಹಾರ ಸಭೆಗೆ ಆಹ್ವಾನ ನೀಡದೆ ಇರುವುದಕ್ಕೆ ಕೂಡ ಮಾಧುಸ್ವಾಮಿ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಶಾಸಕರಾದ ಎ.ಎಸ್​. ಜಯರಾಮ್​, ಬಿ.ಸಿ.ನಾಗೇಶ್​ ಕೂಡ ಸಹಮತ ವ್ಯಕ್ತಪಡಿಸಿದರು. ಚುನಾವಣಾ ನೀತಿ ಸಂಹಿತೆ ಇದ್ದುದರಿಂದ ಸಭೆಗೆ ಕರೆಯಲಿಲ್ಲ ಎಂದು ಅಧಿಕಾರಿಯೋರ್ವರು ನೀಡಿದ ಸಮಜಾಯಿಷಿಯನ್ನೂ ಒಪ್ಪದ ಮಾಧುಸ್ವಾಮಿ ನಿರಂತರ ವಾಗ್ದಾಳಿ ನಡೆಸಿದರು.

ಮಾಧುಸ್ವಾಮಿಯವರ ಆರೋಪದಿಂದ ಸಿಟ್ಟಾದ ಡಿಸಿಎಂ ಪರಮೇಶ್ವರ್​, ಡೋಂಟ್​ ಟಾಕ್​ ಲೈಕ್​ ದಟ್​ ಎಂದು ಸಿಟ್ಟಾಗಿ ಪ್ರತಿಕ್ರಿಯೆ ನೀಡಿದರು. ಇವರಿಬ್ಬರ ನಡುವಿನ ಮಾತಿನ ಚಕಮಕಿ ಸುಮಾರು ಅರ್ಧಗಂಟೆ ಕಾಲ ನಡೆಯಿತು.

Leave a Reply

Your email address will not be published. Required fields are marked *