ಪುರುಷರ ಏಕದಿನ ಕ್ರಿಕೆಟ್​ ಪಂದ್ಯಕ್ಕೆ ಮೊದಲ ಮಹಿಳಾ ಅಂಪೈರ್ ಆಗಿ ಇತಿಹಾಸ ನಿರ್ಮಿಸಿದ​​​ ಕ್ಲೇರ್​​​​​​​ ಪೊಲೊಸಾಕ್​​​

ಸಿಡ್ನಿ: ಮಹಿಳೆಯರಿಗೆ ಕ್ರಿಕೆಟ್​​ನಲ್ಲಿ ಎಲ್ಲ ರೀತಿಯ ಸ್ಥಾನಮಾನಗಳನ್ನು ನೀಡುವ ದೃಷ್ಟಿಯಿಂದ ಅಂತರಾಷ್ಟ್ರೀಯ ಕ್ರಿಕೆಟ್​​ ಮಂಡಳಿ (ಐಸಿಸಿ) ಮಹಿಳೆಯೊಬ್ಬರನ್ನು ಪುರುಷರ ಕ್ರಿಕೆಟ್​​ ಪಂದ್ಯಗಳಿಗೆ ಅಂಪೈರ್​​​​​​​ ಆಗಿ ಆಯ್ಕೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದೆ.

ಕ್ರಿಕೆಟ್​​ ಜಗತ್ತಿನಲ್ಲಿಯೇ ಇದೊಂದು ಹೊಸ ವಿಚಾರವಾಗಿದೆ. ಆಸ್ಟ್ರೇಲಿಯಾ ಮೂಲಕ ಕ್ಲೇರ್​​ ಪೊಲೊಸಾಕ್​​​ ಅವರು ಅಂಪೈರ್​​ ಆಗಿ ಆಯ್ಕೆಯಾಗುವ ಮೂಲಕ ವಿಶ್ವದ ಮೊದಲ ಮಹಿಳಾ ಅಂಪೈರ್​​ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಆಸ್ಟ್ರೇಲಿಯಾದ ಹಸಟ್​ರ್ ವಿಲ್ಲೆ ಓವಲ್​​​​​ನಲ್ಲಿ ನಡೆಯಲಿರುವ ಪುರುಷರ ಪ್ರಥಮ ದರ್ಜೆ ಪಂದ್ಯದಲ್ಲಿ ಪೊಲೊಸಾಕ್​​​ ಸೇವೆ ಸಲ್ಲಿಸಲಿದ್ದಾರೆ. ಇನ್ನೂ ಅಕ್ಟೋಬರ್​​​​​​​​​​​ 8 ರಂದು ನಡೆಯಲಿರುವ ನ್ಯೂಸೌತ್​​ ವೇಲ್ಸ್​​​ ಹಾಗೂ ಕ್ರಿಕೆಟ್​​​ ಆಸ್ಟ್ರೇಲಿಯಾ ಇಲೆವೆನ್​​​​​​ ನಡುವಿನ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಈ ಕುರಿತು ಮಾತನಾಡಿದ ಪೊಲೊಸಾಕ್​​​​​​​​​​​​​​​ ನಾನು ಇದುವರೆಗೂ ಯಾವುದೇ ಹಂತದ ಕ್ರಿಕೆಟ್​​ ಆಡಿಲ್ಲ. ಆದರೆ, ವೀಕ್ಷಣೆ ಮಾಡಲು ಬಹಳ ಆಸಕ್ತಿಯಿತ್ತು. ಇದರಿಂದ ನನ್ನ ತಂದೆ ಅಂಪೈರ್​​​​​​​​​​​​​ ಕೋರ್ಸ್​ಗೆ ಸೇರಿಸಿದರು. ಹಲವು ಬಾರಿ ಅಂಪೈರ್​​​​​ ಪರೀಕ್ಷೆಗಳಲ್ಲಿ ಅನುತೀರ್ಣಗೊಂಡಿದ್ದೆ. ಆದರೆ, ಈಗ ಅಂತರಾಷ್ಟ್ರೀಯ ಪಂದ್ಯಗಳಿಗೆ ತೀರ್ಪುಗಾರ್ತಿಯಾಗಿ ಆಯ್ಕೆಯಾಗಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.

ಕ್ಲೇರ್​​​​​​​​​ 2016ರ ಐಸಿಸಿ ಮಹಿಳಾ ಟಿ-20 ವಿಶ್ವಕಪ್​​​​​​​​​​ನಲ್ಲಿ ಮತ್ತು 2017ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್​​​ನಲ್ಲಿ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಇನ್ನೂ ಹಲವು ಪ್ರಾದೇಶಿಕ ಮತ್ತು ಕ್ಲಬ್​​ ಕ್ರಿಕೆಟ್​​​​​ ಪಂದ್ಯಗಳಲ್ಲಿ ಅಂಪೈರ್​​ ಆಗಿದ್ದರು.

ಅತಿ ಕಿರಿಯ ವಯಸ್ಸಿನಲ್ಲಿ ಅಂಪೈರ್​​ ಆಗಿ ಸೇವೆ ಸಲ್ಲಿಸಲಿರುವ ಕ್ಲೇರ್​ ಅವರಿಗೆ ಭವಿಷ್ಯದಲ್ಲಿ ಒಳ್ಳೆಯದಾಗಲಿ ಎಂದು ಆಸ್ಟ್ರೇಲಿಯಾ ಕ್ರಿಕೆಟ್​​ ಮಂಡಳಿಯ ಸಿಇಒ ಜೇಮ್ಸ್​​​ ಸುತರ್‍ಲೆಂಡ್ ಅಭಿನಂದನೆ ಸಲ್ಲಿಸಿದ್ದಾರೆ. (ಏಜನ್ಸೀಸ್​​)