More

    ಪೌರತ್ವ ಕಾಯ್ದೆ ಬೆಂಬಲಿಸಿ ಅಂಚೆ ಪತ್ರ

    ಮೈಸೂರು: ಕೆ.ಆರ್.ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಪೌರತ್ವ ಕಾಯ್ದೆಯನ್ನು ಬೆಂಬಲಿಸಿ ಸಾರ್ವಜನಿಕರಿಂದ ಅಂಚೆ ಪತ್ರದಲ್ಲಿ ಸಹಿ ಸಂಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳಹಿಸಿದರು.

    ನಗರದ ವಿವೇಕಾನಂದ ವೃತ್ತದ ಬಳಿಯ ಗಣಪತಿ ದೇವಸ್ಥಾನದ ಮುಂಭಾಗ ಸಿಎಎಗೆ ಬೆಂಬಲಿಸಿ ಸಾರ್ವಜನಿಕರಿಂದ ಸಹಿ ಪಡೆದ ಪತ್ರಗಳನ್ನು ಭಾನುವಾರ ಪ್ರಧಾನಿ ಕಚೇರಿ ವಿಳಾಸಕ್ಕೆ ಅಂಚೆ ಮೂಲಕ ರವಾನಿಸಲಾಯಿತು.

    ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ಕಾಯ್ದೆ ಕುರಿತು ಮುಸ್ಲಿಮರಲ್ಲಿ ವಿನಾ ಕಾರಣ ಗೊಂದಲ ಮೂಡಿಸಿ ಪ್ರಚೋದನೆ ಮಾಡುವ ಮೂಲಕ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಇಂತಹ ಪ್ರಚೋದನಾಕಾರಿಯಿಂದ ಗಲಭೆ ಉಂಟುಮಾಡಲು ಪ್ರಯತ್ನಿಸುತ್ತಿರುವವರ ಮನಸ್ಥಿತಿಯನ್ನು ಖಂಡಿಸಿ ಇಂತವರ ಗೊಂದಲ ಮತ್ತು ಪ್ರಚೋದನೆಗಳಿಗೆ ಒಳಗಾಗದೇ ನಾವೆಲ್ಲರೂ ಭಾವೈಕತ್ಯೆ, ದೇಶದ ಸಾರ್ವಭೌಮತ್ವವನ್ನು ಎತ್ತಿ ಹಿಡಿಯಬೇಕು ಎಂದು ಮನವಿ ಮಾಡಿದರು.

    ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾವುದೇ ಧರ್ಮ, ವಿಶೇಷವಾಗಿ ಮುಸಲ್ಮಾನರ ಪೌರತ್ವಕ್ಕೆ ತೊಂದರೆ ಉಂಟಾಗುವುದಿಲ್ಲ. ಮುಂದಿನ ದಿನಗಳಲ್ಲಿ ಎಲ್ಲರೂ ಕಾಯ್ದೆ ಕುರಿತು ತಿಳಿದುಕೊಂಡರೆ ಸ್ವತಃ ಮುಸಲ್ಮಾನರೇ ಬೆಂಬಲ ವ್ಯಕ್ತಪಡಿಸುತ್ತಾರೆ ಎನ್ನುವ ವಿಶ್ವಾಸವಿದೆ. ಪೌರತ್ವ ತಿದ್ದುಪಡಿ ಮಸೂದೆ ಜಾರಿಗೆ ತಂದಂತಹ ಕೇಂದ್ರ ಸರ್ಕಾರಕ್ಕೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮತ್ತು ಗೃಹ ಸಚಿವ ಅಮಿತ್ ಷಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

    ಕೃಷ್ಣರಾಜ ಕ್ಷೇತ್ರದ 270 ಬೂತ್‌ಗಳಲ್ಲೂ ಪೋಸ್ಟ್ ಕಾರ್ಡ್ ಅಭಿಯಾನ ಆಯೋಜಿಸಲಾಗಿದ್ದು ಸಿಎಎ ಬೆಂಬಲಿಸಿ ಒಂದು ಲಕ್ಷ ಅಂಚೆ ಪತ್ರಗಳನ್ನು ಸಾರ್ವಜನಿಕರಿಂದ ಕಳಹಿಸಿಕೊಡಲಾಗುವುದು ಎಂದು ಹೇಳಿದರು.

    ನಗರ ಪಾಲಿಕೆ ಸದಸ್ಯರಾದ ಸುನಂದಾ ಪಾಲನೇತ್ರ, ಬಿ.ವಿ. ಮಂಜುನಾಥ್, ಶಿವಕುಮಾರ್, ಗೀತಾಶ್ರೀ ಯೋಗಾನಂದ್, ಸೌಮ್ಯಾ ಉಮೇಶ್, ಶಾರದಮ್ಮ, ಜಿ.ರೂಪಾ, ಚಂಪಕಾ, ಛಾಯಾದೇವಿ, ಕೃಷರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ವಡಿವೇಲು, ಉಪಾಧ್ಯಕ್ಷ ಬಾಲಕೃಷ್ಣ, ಮುಖಂಡರಾದ ಓಂ. ಶ್ರೀನಿವಾಸ್, ಕಿಟ್ಟಿ (ಕೃಷ್ಣ), ಈಶ್ವರ್, ಯೋಗಾನಂದ್, ರಘು, ರವಿ, ನವೀನ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts