ಗ್ರಾಮೀಣರ ಕನಸು ನನಸಾಗಿಸಿದ ಸಿಐಟಿ: ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿ, ನಿರಂತರ ಕ್ಯಾಂಪಸ್ ಸಂದರ್ಶನಗಳಿಂದ ಉದ್ಯೋಗಾವಕಾಶ

ಬೆಂಗಳೂರು: ಶೈಕ್ಷಣಿಕ ನಗರಿ ತುಮಕೂರಿನ ಹೆಮ್ಮೆಯ ವಿದ್ಯಾಸಂಸ್ಥೆ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯ ಗ್ರಾಮೀಣ ಭಾಗದ ಬಡಮಕ್ಕಳ ತಾಂತ್ರಿಕ ಶಿಕ್ಷಣದ ಕನಸನ್ನು ನನಸಾಗಿಸಲು ನಿರಂತರವಾಗಿ ಶ್ರಮಿಸುತ್ತಿದ್ದು, ನಿರಂತರ ಕ್ಯಾಂಪಸ್ ಸಂದರ್ಶನಗಳನ್ನು ಆಯೋಜಿಸುವ ಮೂಲಕ ಉದ್ಯೋಗ ಸೃಷ್ಟಿಯಲ್ಲೂ ಮುಂಚೂಣಿಯಲ್ಲಿದೆ.

ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸಲು ತುಮಕೂರು ಲೋಕಸಭಾ ಸದಸ್ಯ ಜಿ.ಎಸ್. ಬಸವರಾಜು 2000ರಲ್ಲಿ ‘ಶ್ರೀ ಚನ್ನಬಸವೇಶ್ವರ ಸ್ವಾಮಿ ರೂರಲ್ ಎಜುಕೇಷನ್ ಸೊಸೈಟಿ’ ಸ್ಥಾಪಿಸಿದರು. ತಾಂತ್ರಿಕ ಶಿಕ್ಷಣ ಪಡೆದಿದ್ದ ಇವರ ಪುತ್ರ, ಸಂಸ್ಥೆ ಕಾರ್ಯದರ್ಶಿ ಜಿ.ಬಿ.ಜ್ಯೋತಿಗಣೇಶ್ 2001ರಲ್ಲಿ ಗುಬ್ಬಿಯಲ್ಲಿ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯ(ಸಿಐಟಿ) ಪ್ರಾರಂಭಿಸಿದರು. ಕಾಲೇಜಿನ ಅಧ್ಯಕ್ಷ ಜಿ.ಎಸ್. ಬಸವರಾಜು, ತುಮಕೂರು ನಗರ ಶಾಸಕರೂ ಆದ ಜಿ.ಬಿ.ಜ್ಯೋತಿಗಣೇಶ್, ಪ್ರಾಂಶುಪಾಲ ಡಾ.ಸುರೇಶ್ ಡಿ.ಎಸ್. ಹಾಗೂ ನಿರ್ದೇಶಕರ ಉತ್ತಮ ನಿರ್ವಹಣೆಯಿಂದಾಗಿ ಕಾಲೇಜು ಗಣನೀಯ ಸಾಧನೆ ಮೂಲಕ ಗಮನಸೆಳೆಯುತ್ತಿದೆ. 230 ಪ್ರತಿಭಾನ್ವಿತರಿಗೆ ಗ್ರಾಮೀಣ ಪ್ರದೇಶದಲ್ಲಿ ಜ್ಯೋತಿಗಣೇಶ್ ಉದ್ಯೋಗ ಸೃಷ್ಟಿಸಿದ್ದಾರೆ. ಕಳೆದ 2 ವರ್ಷಗಳಲ್ಲಿ ಎರಡು ಪ್ರಥಮ ರ್ಯಾಂಕ್​ಗಳೊಂದಿಗೆ ಒಟ್ಟು ಆರು ರ್ಯಾಂಕ್​ಗಳನ್ನು ಸಿಐಟಿ ತನ್ನದಾಗಿಸಿಕೊಂಡಿದೆ.

ಕ್ಯಾಂಪಸ್ ಸಂದರ್ಶನ: ಪ್ರಧಾನ ಮಂತ್ರಿ ಕೌಶಲ ಅಭಿವೃದ್ಧಿ ಯೋಜನೆಯಡಿ ಕೌಶಲ ಅಭಿವೃದ್ಧಿ ಕೇಂದ್ರ ಪ್ರಾರಂಭಿಸಲಾಗಿದೆ. ಪೂರ್ಣ ಪ್ರಮಾಣದ ಉದ್ಯೋಗ ಮತ್ತು ತರಬೇತಿ ವಿಭಾಗವಿದೆ. 2018-19ನೇ ಶೈಕ್ಷಣಿಕ ಸಾಲಿನಲ್ಲಿ 50ಕ್ಕೂ ಹೆಚ್ಚು ಕಂಪನಿಗಳನ್ನು ಕ್ಯಾಂಪಸ್ ಸಂದರ್ಶನಕ್ಕೆ ಆಮಂತ್ರಿಸಿದ್ದ ಸಿಐಟಿ ಕಾಲೇಜಲ್ಲಿ 150ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಪಡೆದಿದ್ದಾರೆ.

ಇನ್ಪೋಸಿಸ್, ವಿಪ್ರೋ, ಕಾಗ್ನೊಜೆಂಟ್, ತಯಾನಾ ಸಾಫ್ಟ್​ವೇರ್, ಎಂಫಸಿಸ್, ಟ್ರೇಜೆಂಟ್, ಸಿಸ್​ಕಾನ್, ಕ್ವೆಸ್ಟ್ ಇನ್ಪರ್ವ್ಯಾಟಿಕ್ಸ್ ಪ್ರಟಿಯನ್ ಟೆಕ್ನಾಲಜೀಸ್, ಪಿಇಒಎಲ್ ಟೆಕ್ನಾಲಜೀಸ್ (ಪಿಯೋಲ್ ಟೆಕ್ನಾಲಜೀಸ್), ಪವರ್ ರಿಸರ್ಚ್ ಡೆವಲಪ್​ವೆುಂಟ್ಸ್ ಕನ್ಸಲ್ಟೆಂಟ್ಸ್(ಪಿಆರ್​ಡಿಸಿ), ಅಟೆರ್ನಾ ಸೋಲ್ಯೂಷನ್ಸ್, ಹೈಬ್ರಿಟಿಕ್ಸ್ ಮತ್ತು ಎನ್​ಟಿಟಿ ಡೇಟಾ ಕಂಪನಿಗಳು ಕ್ಯಾಂಪಸ್ ಸಂದರ್ಶನ ನಡೆಸಿವೆ.

ಇತ್ತೀಚೆಗೆ ಪ್ರಾರಂಭವಾದ ಗುಮೊಮೊ.ಕಾಂ, ಗ್ರೇ-ಆರೆಂಜ್, ಎಬಿಸಿ ಫಾರ್ ಟೆಕ್ನಾಲಜಿ ಟ್ರೈನಿಂಗ್, ನವಜ್ಲಕ ಮೀಡಿಯಾ, ಇ-ಲಿಟ್ಮಸ್ ಇವ್ಯಾಲುಯೇಶನ್, ಜೋಹೊ ಕಾರ್ಪ್ ಗಳಂತಹ ಸ್ಟಾಟ್-ಅಪ್ ಕಂಪನಿಗಳು ತಮ್ಮೊಂದಿಗೆ ಬೆಳೆಯಲು ಇಲ್ಲಿನ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲದೆ ಪೂಲ್ ಕ್ಯಾಂಪಸ್ ಸಂದರ್ಶನಗಳಲ್ಲಿ ಭಾಗವಹಿಸಿದ್ದ ಇಲ್ಲಿನ ವಿದ್ಯಾರ್ಥಿಗಳು ಇನ್ಪೋಸಿಸ್, ಎಸ್​ಎಲ್​ಕೆ ಸಾಫ್ಟ್ ವೇರ್, ಅಕಾರ್ಡ್ ಸಾಫ್ಟ್​ವೇರ್ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ.

ಕಾಲೇಜಿಗೆ ಸಂದ ಪ್ರಶಸ್ತಿ

2014ರಲ್ಲಿ ಸಿಎಂಎಐ ಮತ್ತು ವಿಟಿಯು ಬೆಳಗಾವಿಯಿಂದ ‘ಕರ್ನಾಟಕದ ಶ್ರೇಷ್ಠ ಗ್ರಾಮೀಣ ಇಂಜಿನಿಯರಿಂಗ್ ಕಾಲೇಜು ಪ್ರಶಸ್ತಿ’, 2016ರಲ್ಲಿ ದೆಹಲಿಯಲ್ಲಿ ನಡೆದ ನ್ಯಾಷನಲ್ ಎಜುಕೇಷನ್ ಸಮ್ಮಿಟ್ ಮತ್ತು ಅವಾರ್ಡ್​ನಲ್ಲಿ ‘ಗ್ರಾಮೀಣ ಭಾರತದ ಶ್ರೇಷ್ಠ ಇಂಜಿನಿಯರಿಂಗ್ ಕಾಲೇಜು ಪ್ರಶಸ್ತಿ’, 2017ರಲ್ಲಿ ಕೆರಿಯರ್ 360 ರೇಟಿಂಗ್​ನಿಂದ ಎಎಎ ಮಾನ್ಯತೆ, 2018ರಲ್ಲಿ ದೆಹಲಿಯಲ್ಲಿ ನಡೆದ ಲೀಡರ್ಸ್ ಕಾನ್​ಕ್ಲೇವ್​ನಲ್ಲಿ ‘ಭಾರತದ ಅತ್ಯಂತ ಭರವಸೆಯ ಇಂಜಿನಿಯರಿಂಗ್ ಕಾಲೇಜು ಪ್ರಶಸ್ತಿ’ಗಳು ಸಿಐಟಿಗೆ ಒಲಿದಿವೆ.

ಸಂಶೋಧನಾ ಕೇಂದ್ರ

ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಶನ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ಮತ್ತು ಗಣಿತ ವಿಭಾಗಗಳ ಸಂಶೋಧನಾ ಕೇಂದ್ರವೆಂದು ಸಿಐಟಿ ಕಾಲೇಜು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಮಾನ್ಯತೆ ಪಡೆದಿದೆ. ಕಾಲೇಜಿನ ಸಂಶೋಧನಾ ಕೇಂದ್ರದಲ್ಲಿ 30ಕ್ಕೂ ಹೆಚ್ಚು ಸಂಶೋಧಕರು ವಿವಿಧ ತಾಂತ್ರಿಕ ಸಂಶೋಧನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಯಾವ ಕೋರ್ಸ್ ಲಭ್ಯ

ಸ್ನಾತಕ ಕೋರ್ಸ್-ಕಂಪ್ಯೂಟರ್ ಸೈನ್ಸ್, ಇನ್​ಫಮೇಶನ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್, ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್, ಸಿವಿಲ್ ಇಂಜಿನಿಯರಿಂಗ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್. ಸ್ನಾತಕೋತ್ತರ ಕೋರ್ಸ್(ಎಂಟೆಕ್)- ಕಂಪ್ಯೂಟರ್ ಸೈನ್ಸ್, ಸಾಫ್ಟ್​ವೇರ್, ಎಲೆಕ್ಟ್ರಾನಿಕ್ಸ್, ಎಂಬಿಎ (ಮಾರ್ಕೆಟಿಂಗ್, ಎಚ್​ಆರ್, ಫೈನಾನ್ಸ್). ಡಿಪ್ಲೊಮಾ ಕೋರ್ಸ್-ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್.

ದಾಖಲಾತಿ ಆರಂಭ

2019-20ನೇ ಸಾಲಿನ ದಾಖಲಾತಿಗಳು ಪ್ರಾರಂಭವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಸಿಐಟಿ ಗುಬ್ಬಿ ಅಥವಾ ಸಿಐಟಿ ಸಂಸ್ಥೆಯ ಅಂಗಸಂಸ್ಥೆ/ ತುಮಕೂರಿನ ಕಚೇರಿ ಸಿಟ್ರಿಸ್, ಸಿದ್ಧಗಂಗಾ ಕಾಂಪ್ಲೆಕ್ಸ್, ಬಿ.ಎಚ್ ರಸ್ತೆ. ಅಥವಾ ದೂರವಾಣಿ ಸಂಖ್ಯೆ: 0816-4021402/4021403, 08131-223818, ಮೊ.ಸಂಖ್ಯೆ8660224239, 9449637043 ಸಂರ್ಪಸಬಹುದು.

Leave a Reply

Your email address will not be published. Required fields are marked *