ಕಾರವಾರ: ಕೇಂದ್ರೀಯ ಕೈಗಾರಿಗೆ ಸುರಕ್ಷಾ ಪಡೆ (ಸಿಐಎಸ್‌ಎಫ್) ಸಂಸ್ಥಾಪನಾ ದಿನದ ಅಂಗವಾಗಿ, ದೇಶದ ಕರಾವಳಿ ಪ್ರದೇಶಗಳಲ್ಲಿ ಸಂಚರಿಸುತ್ತಿರುವ ಸೈಕ್ಲೋಥಾನ್-2025 ಪ್ರಯುಕ್ತ, ಸಿಐಎಸ್‌ಎಫ್ ನ ಮೈ ನವಿರೇಳಿಸುವ ಶೌರ್ಯದ ಪ್ರದರ್ಶನವು ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಮಂಗಳವಾರ ನಡೆಯಿತು.
ಕೇಂದ್ರೀಯ ಕೈಗಾರಿಕಾ ಸುರಕ್ಷಾ ಪಡೆಯ ಸಂಸ್ಥಾಪನಾ ದಿನದ ಅಂಗವಾಗಿ ಆರಂಭವಾದ ಸೈಕ್ಲೋಥಾನ್ ಸೋಮವಾರ ಸಂಜೆ ಕಾರವಾರ ತಲುಪಿದ್ದು, ಮಂಗಳವಾರ ಬೆಳಗ್ಗೆ ಧ್ವಜಾರೋಹಣ ಪ್ರಯುಕ್ತ ಜಿಲ್ಲಾ ಕೇಂದ್ರವಾದ ಕಾರವಾರದಲ್ಲಿ ಯೋಧರ ಸಾಹಸ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಮಾಂಡೋ ಸಮವಸ್ತçದಲ್ಲಿದ್ದ ಯೋಧರು ತಮ್ಮ ಕಾರ್ಯಾಚರಣೆ ಕಾರ್ಯ ವಿಧಾನಗಳನ್ನು ಹಾಗೂ ತಾವು ಬಳಕೆ ಮಾಡುವ ಶಸ್ತ್ರಗಳನ್ನು ಪರಿಚಯಿಸಿದರು. ಅಲ್ಲದೇ ವಿವಿಧ ರೀತಿಯಲ್ಲಿ ಗುಂಡು ಹಾರಿಸುವ ಮೂಲಕ ಕಾರ್ಯಾಚರಣೆಯ ಕೌಶಲ್ಯವನ್ನು ತೋರ್ಪಡಿಸಿದರು. ಬಳಿಕ ನಡೆದ ಕಾರ್ಯಾಚರಣೆಗಳಲ್ಲಿ ಬೆಂಕಿಯ ರಿಂಗ್‌ನಲ್ಲಿ ಹಾರುವುದು,
ಮುಂತಾದ ದೈಹಿಕ ಶಕ್ತಿಯ ಸಾಹಸ ನೆರದ ಗಣ್ಯರು ಹಾಗೂ ಸಾರ್ವಜನಿಕರನ್ನು ಬೆರಗುಗೊಳಿಸಿತು. ರಕ್ಷಣೆ ಕಾರ್ಯಾಚರಣೆಗಳಲ್ಲಿ ಬಳಕೆಯಾಗುವ ಶ್ವಾನ ದಳದ ಪ್ರಾಮುಖ್ಯತೆ ತಿಳಿಸುವ, ಮಾದಕ ವಸ್ತುಗಳನ್ನು ಪತ್ತೆ ಮಾಡುವ
ಶ್ವಾನಗಳ ಕಾರ್ಯಕ್ಷಮತೆಯನ್ನು ಮತ್ತು ಅವುಗಳ ಕ್ಷಮತೆಯ ಕೌಶಲ್ಯವನ್ನು ಪ್ರದರ್ಶಿಸಲಾಯಿತು. ಅಗ್ನಿಶಾಮಕ ವಾಹನದಿಂದ ಬೆಂಕಿ
ಅನಾಹುತಗಳನ್ನು ನಿಗ್ರಹಿಸುವ ಅಣುಕು ಪ್ರದರ್ಶನ ಕೂಡ ನಡೆಯಿತು.
ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರ ತಂಡದಿAದ ಹಾಲಕ್ಕಿ ಸಮುದಾಯದ ಜಾನಪದ ನೃತ್ಯ ಹಾಗೂ ಯಕ್ಷಗಾನ ಪ್ರದರ್ಶನ
ನಡೆಯಿತು.
ಬಳಿಕ ಸೈಕ್ಲೋಥಾನ್‌ನಲ್ಲಿ ಭಾಗವಹಿದವರನ್ನು ಪೊಲೀಸ್ ಬ್ಯಾಂಡ್ ಮೂಲಕ ಮುಂದಿನ ಜಿಲ್ಲೆಗೆ ಬೀಳ್ಕೊಡಲಾಯಿತು.
ಕರ್ನಾಟಕ ರಾಜ್ಯ ಮಾರ್ಕೇಟಿಂಗ್ ಕನ್ಸಲೆಂಟ ಅಂಡ್ ಏಜೆನ್ಸಿಸ್ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಕೆ. ಸೈಲ್, ಜಿಲ್ಲಾಧಿಕಾರಿ
ಲಕ್ಷ್ಮೀಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ, ಕೈಗಾ ಘಟಕದ ಸಿಐಎಸ್‌ಎಫ್ ನ ಹಿರಿಯ ಕಮಾಂಡೆಂಟ್ ಅಜಯ
ಕುಮಾರ ಝಾ, ಸಹಾಯಕ ಕಮಾಂಡೆಂಟ್ ಎಸ್.ಪಿ ಪಾಟಕ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ ಹಾಗೂ ವಿವಿಧ ಇಲಾಖೆಯ
ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.
ಸಿಐಎಸ್‌ಎಫ್‌ನಿಂದ ಮೈ ನವಿರೇಳಿಸುವ ಶೌರ್ಯ ಪ್ರದರ್ಶನ

You Might Also Like
ಬೇಸಿಗೆಯಲ್ಲಿ ನಿಮ್ಮ ಆರೋಗ್ಯಕ್ಕೆ ಯಾವುದು ಹೆಚ್ಚು ಪ್ರಯೋಜನಕಾರಿ, ಮೊಸರು ಅಥವಾ ಮಜ್ಜಿಗೆ?Summer Health Tips
Summer Health Tips: ಬೇಸಿಗೆಯ ಸುಡುವ ಬಿಸಿಲಿನಲ್ಲಿ ಮಧ್ಯಾಹ್ನವಾಗಲಿ ಅಥವಾ ಸಂಜೆಯಾಗಲಿ, ನಮ್ಮ ದೇಹವನ್ನು…
Oil Food: ಎಣ್ಣೆ ಪದಾರ್ಥ ಆಹಾರ ತಿಂದ ನಂತರ ಈ ಕೆಲಸಗಳನ್ನು ಮಾಡಿ ಆರೋಗ್ಯಕ್ಕೆ ಒಳ್ಳೆಯದು
Oil Food: ನಮ್ಮಲ್ಲಿ ಹಲವರಿಗೆ ಯಾವಾಗಲೂ ಎಣ್ಣೆಯುಕ್ತ ಆಹಾರವನ್ನು ಸೇವಿಸಬೇಕು ಎಂದು ಅನಿಸುತ್ತದೆ. ಅಂದರೆ ನಾವು…
ಬೇಸಿಗೆಯಲ್ಲಿ ಜಿಮ್ಗೆ ಹೋಗುವ ಮೊದಲು ಸುಸ್ತಾಗುತ್ತೀದ್ರೆ ಈ ಜ್ಯೂಸ್ಗಳನ್ನು ಒಮ್ಮೆ ಟ್ರೈ ಮಾಡಿ, ದಣಿವು ದೂರವಾಗುವುದು ಖಂಡಿತ!Pre Workout Drinks
Pre Workout Drinks: ಬೇಸಿಗೆಯ ಬಿಸಿಲಿನಲ್ಲಿ ಸ್ವಲ್ಪ ದೂರ ನಡೆದರೂ ಸಹ ದೇಹವು ದಣಿಯುತ್ತದೆ, ಬಾಯಾರಿಕೆ…