ನವದೆಹಲಿ: ಐಟಿ ಕಂಪೆನಿಗಳಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುವ ಪ್ರವೃತ್ತಿ ಮುಂದುವರಿದಿದೆ. ಈ ಹಿಂದೆ ಆರ್ಥಿಕ ಹಿಂಜರಿತದ ಕಾರಣ ನೀಡಿ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳನ್ನು ವಜಾಗೊಳಿಸಿದ ಸಂಸ್ಥೆಗಳು ಈಗ ಎಐ ತಂತ್ರಜ್ಞಾನ ಅಳವಡಿಸಿಕೊಳ್ಳುವ ಸಲುವಾಗಿ ಇನ್ನಷ್ಟು ಮಂದಿಯನ್ನು ವಜಾಗೊಳಿಸುತ್ತಿವೆ.
ಇದನ್ನೂ ಓದಿ: ‘ 50 ಗ್ರಾಂ ತೂಕಕ್ಕೆ ಅನರ್ಹಗೊಂಡಿದ್ದೆ’: ವಿನೇಶ್ ಗೆ ದೈರ್ಯತುಂಬಿದ ಒಲಂಪಿಕ್ ಸ್ವರ್ಣಪದಕ ವಿಜೇತ
ಪ್ರಸಿದ್ಧ ನೆಟ್ವರ್ಕ್ ಸಂಸ್ಥೆ ಸಿಸ್ಕೋ ಸೈಬರ್ ಭದ್ರತೆ ಮತ್ತು ಎಐ ಮೇಲೆ ಕೇಂದ್ರೀಕರಿಸಲು ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ.
ಈ ಸಂಸ್ಥೆ ಕಳೆದ ಫೆಬ್ರವರಿಯಲ್ಲಿ 4ಸಾವಿರ ಉದ್ಯೋಗಿಗಳನ್ನು ವಜಾ ಗೊಳಿಸುವ ಘೋಷಣೆ ಮಾಡಿದ್ದು, ಅಷ್ಟೇ ಸಂಖ್ಯೆಯ ಉದ್ಯೋಗಿಗಳನ್ನು ಮತ್ತೆ ಮನೆಗೆ ಕಳುಹಿಸಲು ಸಿದ್ಧವಾಗಿದೆ ಎಂದು ಹೇಳಲಾಗುತ್ತಿದೆ.
ಕಂಪೆನಿಯ ನಾಲ್ಕನೇ ತ್ರೈಮಾಸಿಕ ವರದಿಯಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುವ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಇನ್ನು ಪಂಪ್ಯೂಟರ್ ಉತ್ಪಾದಕಾ ಸಂಸ್ಥೆ ಡೆಲ್ ಕಳೆದ ವರ್ಷ ಎರಡು ಸುತ್ತುಗಳಲ್ಲಿ 13 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಇಂಟೆಲ್ ಸಂಸ್ಥೆ ಇತ್ತೀಚೆಗೆ 15ಸಾವಿರ ನೌಕರರನ್ನು ವಜಾ ಮಾಡಿದ್ದನ್ನು ಸ್ಮರಿಸಬಹುದು.