ಸಿಗರೇಟ್​​ ಕೊಡಲಿಲ್ಲ ಅಂತಾ ಟೀ ಮಾರಾಟಗಾರನಿಗೆ ಚಾಕು ಇರಿದ ದುಷ್ಕರ್ಮಿಗಳು

ಆನೇಕಲ್: ಸಿಗರೇಟ್​​ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ದುಷ್ಕರ್ಮಿಗಳು ಟೀ ಮಾರಾಟಗಾರನೊಬ್ಬನಿಗೆ ಚಾಕು ಇರಿದಿರುವ ಘಟನೆ ಕಳೆದ ತಿಂಗಳು 28 ರಂದು ಹೆಬ್ಬಗೋಡಿಯ ಅನಂತನಗರ ಗೇಟ್ ಬಳಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಶಿವಶಂಕರ್​​(25) ಚಾಕು ಇರಿತಕ್ಕೊಳಗಾದವ. ಪ್ರಜ್ವಲ್ ಅಲಿಯಾಸ್​ ಕೊತ್ವಾಲ್ ಹಾಗೂ ಮನೋಜ್ ಗೌಡ ಎಂಬುವವರಿಂದ ಈ ಕೃತ್ಯ ನಡೆದಿದ್ದು, ಸಿ.ಸಿ.ಕ್ಯಾಮರಾದಲ್ಲಿ ಕೃತ್ಯ ಸೆರೆಯಾಗಿದೆ.

ಗಾಯಾಳು ಶಿವಶಂಕರ್​ಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆರೋಪಿಗಳು ಮೇಲೆ ದರೋಡೆ ಹಾಗೂ ಕಳ್ಳತನ ಪ್ರಕರಣಗಳು ಇವೆ. ಘಟನೆ ನಡೆದು ಇಷ್ಟು ದಿನವಾದರು ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ. ಘಟನೆ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)