Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಸಿಎಂ ಮುಖಕ್ಕೆ ಸ್ಟಿಕ್ಕರ್ ಗುದ್ದು!

Friday, 06.04.2018, 3:02 AM       No Comments

ಕಾರವಾರ: ಈ ಬಾರಿ ಪಡಿತರ ಅಂಗಡಿ ಉದ್ಯೋಗಿಗಳಿಗೆ ಸಿಎಂ ಮುಖಕ್ಕೆ ಸ್ಟಿಕ್ಕರ್ ಅಂಟಿಸುವ ಹೊಸ ಕೆಲಸ ಶುರುವಾಗಿದೆ. ಅನ್ನ ಭಾಗ್ಯದ ಅಕ್ಕಿಯ ಜತೆ ನೀಡಲಾಗುವ ಒಂದು ಕೆಜಿ ತೊಗರಿಬೇಳೆ ಪ್ಯಾಕೆಟ್​ನಲ್ಲಿ ಸಿಎಂ ಸಿದ್ದರಾಮಯ್ಯ ಭಾವಚಿತ್ರವಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಅವುಗಳನ್ನು ಮರೆಮಾಚಿ ಜನರಿಗೆ ವಿತರಣೆ ಮಾಡಲು ಚುನಾವಣಾ ಆಯೋಗ ಸೂಚಿಸಿದೆ. ಚುನಾವಣೆ ಘೊಷಣೆ ಯಾಗುವುದಕ್ಕೂ ಪೂರ್ವದಲ್ಲಿ ಕರ್ನಾಟಕ ಆಹಾರ ನಿಗಮದ ಗೋದಾಮುಗಳಿಗೆ ಮುಖ್ಯಮಂತ್ರಿ ಭಾವಚಿತ್ರವಿರುವ ಪ್ಯಾಕೆಟ್​ಗಳು ಪೂರೈಕೆಯಾಗಿವೆ. ಇದರಿಂದ ನಿಗಮವು ಸ್ಟಿಕ್ಕರ್ ಮುದ್ರಿಸಿ ಎಲ್ಲ ಗೋದಾಮುಗಳಿಗೆ ಕಳಿಸಿಕೊಟ್ಟಿದೆ. 25 ಕೆಜಿ ಚೀಲದಲ್ಲಿರುವ ಪ್ಯಾಕೆಟ್​ಗಳನ್ನು ತೆಗೆದು ಸ್ಟಿಕ್ಕರ್ ಅಂಟಿಸುವುದು ಕಷ್ಟವಾಗಿರುವ ಕಾರಣ ಪಡಿತರ ಸ್ಟಾಕ್ ಪಡೆಯಲು ಬರುವ ನ್ಯಾಯಬೆಲೆ ಅಂಗಡಿಯವರಿಗೆ ಸ್ಟಿಕ್ಕರ್​ಗಳನ್ನು ಹಸ್ತಾಂತರಿಸಲಾಗುತ್ತಿದೆ.

ರೇಶನ್ ಕಾರ್ಡ್​ಗಿಲ್ಲ ನಿಯಮ: ಕಳೆದ ಕೆಲ ತಿಂಗಳಲ್ಲಿ ವಿತರಣೆಯಾದ ಪಡಿತರ ಚೀಟಿಗಳ ಮೇಲೆ ಸಿಎಂ ಸಿದ್ದರಾಮಯ್ಯ ಅವರ ಭಾವಚಿತ್ರಗಳಿವೆ. ಆದರೆ, ಅವು ಈಗಾಗಲೇ ಜನರಿಗೆ ವಿತರಣೆಯಾಗಿರುವ ಕಾರಣ ಚಿತ್ರ ಮರೆಮಾಚುವ ಯಾವುದೇ ಸೂಚನೆ ಇಲ್ಲ ಎನ್ನುತ್ತಾರೆ ಅಧಿಕಾರಿಗಳು.

 

Leave a Reply

Your email address will not be published. Required fields are marked *

Back To Top