Friday, 16th November 2018  

Vijayavani

Breaking News

ವೋಟು ಕೊಡಿ, ನೋಟೂ ಕೊಡಿ!

Wednesday, 04.04.2018, 3:02 AM       No Comments

ಮಂಡ್ಯದ ಮತದಾರರು ಮಾರಾಟಕ್ಕಿಲ್ಲ, ಚುನಾವಣೆ ಉದ್ಯಮವಲ್ಲ. ವೋಟು ಕೊಡಿ, ನೋಟು ಕೊಡಿ. ಮತದಾನ ಮಾಡಿ, ಮಾರಾಟ ಮಾಡಬೇಡಿ, ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸಿ ಹೀಗೆಂದು ಬಿಜೆಪಿ ಟಿಕೆಟ್ ಆಕಾಂಕ್ಷಿತ ಅಭಿಯಾನ ಆರಂಭಿಸಿದ್ದಾರೆ. ಟಿಕೆಟ್ ಆಕಾಂಕ್ಷಿತ ಸಿ.ಟಿ.ಮಂಜುನಾಥ್ ಎಂಬುವರು, ಮಂಡ್ಯ ನಗರದಲ್ಲಿ ಉದ್ಯಾನದ ಬಳಿ ಬಾಕ್ಸ್ ಹಿಡಿದು ನಿಂತು ಠೇವಣಿ ಕಟ್ಟಲು ಹಣ ನೀಡುವಂತೆ ಕೋರಿದರು. ಅವರ ಕೋರಿಕೆಗೆ ಸ್ಪಂದಿಸಿದ ಜನತೆ ಅರ್ಧ ಗಂಟೆಗೆ 1500 ರೂ.ಗಳಿಗೂ ಹೆಚ್ಚು ಹಣ ನೀಡಿದರು.

ಮಂಡ್ಯ ಮತದಾರರು ಮಾರಾಟಕ್ಕಿಲ್ಲ ಎಂಬ ಧ್ಯೇಯ ವಾಕ್ಯದೊಂದಿಗೆ ಹಣ ಸಂಗ್ರಹಿಸಿದ ಅವರು, ಪ್ರಸ್ತುತ ಎಲ್ಲ ರಾಜಕೀಯ ಪಕ್ಷಗಳು ಹಣವಿದ್ದವರಿಗೆ ಟಿಕೆಟ್ ಎಂಬಂತ ಧೋರಣೆ ಹೊಂದಿವೆ. ಕೆಲವರು ಬಹಿರಂಗವಾಗಿ ಹಣ ಕೊಡಬೇಕೆಂದು ಹೇಳುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದೆ. ಮತ ದಾನವೇ ಹೊರತು ಮಾರಾಟದ ವಸ್ತುವಲ್ಲ. ಚುನಾವಣೆ ಪ್ರಜಾಪ್ರಭುತ್ವದ ಅಂಗವೇ ಹೊರತು ಉದ್ಯಮವಲ್ಲ ಎಂದು ಅರಿವು ಮೂಡಿಸಿ, ಮತ ಮಾರಿಕೊಳ್ಳದೆ, ಸ್ಥಳೀಯರಿಗೆ, ಪ್ರಾಮಾಣಿಕರಿಗೆ, ಜನಪರ ಕಾಳಜಿ ಉಳ್ಳವರಿಗೆ ಮತದಾನ ಮಾಡಬೇಕೆಂದು ಮನವಿ ಮಾಡಿದರು. ಮಂಜುನಾಥ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಿಂದುಪರ ಪಕ್ಷದಿಂದ ಅಭ್ಯರ್ಥಿಯಾಗಿದ್ದರೆ, ಅವರ ಪತ್ನಿ ಶಕುಂತಲಾ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Leave a Reply

Your email address will not be published. Required fields are marked *

Back To Top