Christ University : ಕ್ರೈಸ್ಟ್ ಅಲುಮ್ನಿ ಫೌಂಡೇಷನ್ ಬೆಂಗಳೂರು ವತಿಯಿಂದ ನ್ಯೂಯಾರ್ಕ್ ನಗರದಲ್ಲಿ ಮೊದಲ ಸಾಗರೋತ್ತರ ಅಲುಮ್ನಿ ಚಾಪ್ಟರ್ (ಕ್ರೈಸ್ಟ್ ಯೂನಿವರ್ಸಿಟಿಯ ನಾರ್ತ್ ಅಮೆರಿಕನ್ ಅಲುಮ್ನಿ ಅಸೋಸಿಯೇಷನ್) ಗೆ ನಿನ್ನೆ (ನ.09) ಬೆಳಗ್ಗೆ 11 ಗಂಟೆಗೆ ಚಾಲನೆ ನೀಡಲಾಯಿತು.
ಫಾದರ್ ಡಾ. ಸೇಂಟ್ ಅಂಥೋನಿ ಚರ್ಚ್ನಲ್ಲಿ ಅಮೆರಿಕ ಮತ್ತು ಕೆನಡಾದ ಅಲುಮ್ನಿ ಕೂಟವನ್ನು ಆಯೋಜಿಸಲಾಗಿತ್ತು. ಕುಲಪತಿ ಡಾ. ಫಾದರ್ ಜೋಸೆಫ್ ಸಿಸಿ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ವೇಳೆ ಮಾಜಿ ಪ್ರಾಂಶುಪಾಲರಾದ ಫಾದರ್ ಸೆಬಾಸ್ಟಿಯನ್ ಕೂಡ ಉಪಸ್ಥಿತರಿದ್ದರು.
ಕ್ರೈಸ್ಟ್ ಯೂನಿವರ್ಸಿಟಿಯು ಯುಎಸ್ಎ/ಕೆನಡಾದಲ್ಲಿ 5000 ಹಳೆಯ ವಿದ್ಯಾರ್ಥಿಗಳನ್ನು ಹೊಂದಿದ್ದು, ಅವರೊಂದಿಗೆ ಉತ್ತಮವಾದ ಸಂಪರ್ಕವನ್ನು ನಿರ್ಮಿಸಲು ಈ ಪ್ರದೇಶದಲ್ಲಿ ಮತ್ತು ಯುನೈಟೆಡ್ ಕಿಂಗ್ಡಮ್ ಹಾಗೂ ಮಧ್ಯಪ್ರಾಚ್ಯ ರಾಷ್ಟ್ರದಲ್ಲಿ ಶೀಘ್ರದಲ್ಲೇ ಹೆಚ್ಚಿನ ಅಲುಮ್ನಿ ಚಾಪ್ಟರ್ಗಳನ್ನು ಸೇರಿಸುವುದಾಗಿ ಕ್ರೈಸ್ಟ್ ಯೂನಿವರ್ಸಿಟಿ ಹೇಳಿದೆ.
ಅಂದಹಾಗೆ, ಹಾಲಿ ಮತ್ತು ಭವಿಷ್ಯದ ವಿದ್ಯಾರ್ಥಿಗಳಿಗೆ ಸಹಕಾರ ನೀಡುವುದು ಈ ಚಾಪ್ಟರ್‌ನ ಉದ್ದೇಶವಾಗಿದೆ. ಹಳೆಯ ವಿದ್ಯಾರ್ಥಿಗಳ ಸಂಪರ್ಕ ಬಲಪಡಿಸುವುದು, ವಿದ್ಯಾರ್ಥಿಗಳು ಮತ್ತು ಇತ್ತೀಚಿನ ಪದವೀಧರರನ್ನು ಬೆಂಬಲಿಸುವುದು, ಶೈಕ್ಷಣಿಕ ಮತ್ತು ವೃತ್ತಿಪರ ಅಭಿವೃದ್ಧಿ ಉತ್ತೇಜಿಸುವುದು, ಜಾಗತಿಕ ತೊಡಗಿಸಿಕೊಳ್ಳುವಿಕೆ ಹೆಚ್ಚಿಸುವುದು, ಫಂಡ್ ರೈಸಿಂಗ್ ಮತ್ತು ಸ್ಕಾಲರ್ಶಿಫ್, ಭವಿಷ್ಯದ ಯೋಜನೆಗಳು ಮೆಂಟರ್ಶಿಪ್ ಕಾರ್ಯಕ್ರಮಗಳನ್ನು ಪ್ರಾರಂಭಿಸುವುದು, ಅಮೆರಿಕ ಮತ್ತು ಕೆನಡಾದ ವಿವಿಧ ಭಾಗಗಳಲ್ಲಿ ವಿದ್ಯಾರ್ಥಿಗಳನ್ನು ಭೇಟಿ ಮಾಡುವುದು, ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳನ್ನು ಬೆಂಬಲಿಸುವುದು, ವೃತ್ತಿ ನೆರವು, ನೆಟ್ ವರ್ಕಿಂಗ್, ಸಂಶೋಧನೆ ಮತ್ತು ಪ್ರಾಯೋಗಿಕ ತರಬೇತಿ ಪಾಲುದಾರಿಕೆ ಉತ್ತೇಜಿಸುವ ಉದ್ದೇಶವನ್ನು ಹೊಂದಲಾಗಿದೆ.
ಹಳೆಯ ವಿದ್ಯಾರ್ಥಿಗಳ ಸಂಘದ ಜುಗ್ನು ಉಬೆರಾಯ್, ಕೋರ್ ಕಮಿಟಿ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಖಜಾಂಜಿ ಜತೆಗೆ ಸದಸ್ಯರು ಈ ಉಪಕ್ರಮದ ಮುಂದಾಳತ್ವ ವಹಿಸಿದ್ದಾರೆ. ಅಮೆರಿಕ ಮತ್ತು ಕೆನಡಾದಲ್ಲಿ ನೆಲೆಗೊಂಡಿರುವ ಕಾರ್ಯಕಾರಿ ಸಮಿತಿಯ ಸದಸ್ಯರು ಈ ಉಪಕ್ರಮ ಉತ್ತೇಜಿಸಿದ್ದಾರೆ. ಇದರ ಮುಖ್ಯಸ್ಥರು ಭಾರತದ ಎಲ್ಲ ಕ್ಯಾಂಪಸ್ಗಳೊಂದಿಗೆ ಮತ್ತು ಬೆಂಗಳೂರಿನಲ್ಲಿರುವ ಸೆಂಟ್ರಲ್ ಕ್ಯಾಂಪಸ್ ಕ್ರೈಸ್ಟ್ ಜತೆಗೆ ನಿರಂತರ ಸಂಪರ್ಕದಲ್ಲಿರುತ್ತಾರೆ.
ಬಂದಿದೆ ಹೊಸ ಮಾಲ್ವೇರ್! OTP ಇಲ್ಲದೇ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಎಗರಿಸುತ್ತಾರೆ ಎಚ್ಚರ! Toxic Panda