ಕೆರೂರ: ಅಂಬಿಗರ ಚೌಡಯ್ಯ ಕೇವಲ ಒಂದು ಸಮಾಜಕ್ಕೆ ಸೀಮಿತರಾಗದೆ ತಮ್ಮ ವಚನಗಳ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಸಾಕಷ್ಟು ಶ್ರಮ ವಹಿಸಿದ್ದಾರೆ ಎಂದು ಪಪಂ ಅಧ್ಯಕ್ಷೆ ನಿರ್ಮಲಾ ಮದಿ ಹೇಳಿದರು.
ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಮಂಗಳವಾರ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಪಂ ಸದಸ್ಯರಾದ ಕುಮಾರ ಐಹೊಳ್ಳಿ, ಪ್ರಮೋದ ಪೂಜಾರ, ಪಪಂ ಮಾಜಿ ಅಧ್ಯಕ್ಷ ಸದಾನಂದ ಮದಿ ಮಾತನಾಡಿದರು.
ಪಪಂ ಉಪಾಧ್ಯಕ್ಷ ಮೋದಿನಸಾಬ ಚಿಕ್ಕೂರ, ಸದಸ್ಯ ಮಲ್ಲಪ್ಪ ಹಡಪದ, ಸಮಾಜದ ಮುಖಂಡರಾದ ಭರಮಪ್ಪ ಸುಣಗಾರ, ಬಸಪ್ಪ ಸುಣಗಾರ, ಮಾಂತೇಶ ಅಂಬಿಗೇರ, ಶಿವಪ್ಪ ಸುಣಗಾರ, ಮಂಜು ಸುಣಗಾರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ ಮಾಡಬಾಳ, ಸಿಬ್ಬಂದಿ ಇದ್ದರು.