IPL : ಈ ಬಾರಿಯ 2025 ರ ಇಂಡಿಯನ್ ಪ್ರೀಮಿಯರ್ ಲೀಗ್ ಬಾಲಿವುಡ್ ತಾರಾಬಳಗದೊಂದಿಗೆ ಆರಂಭವಾಗಲಿದ್ದು, ಶಾರುಖ್ ಖಾನ್, ಪ್ರಿಯಾಂಕಾ ಚೋಪ್ರಾ ಮತ್ತು ಸಲ್ಮಾನ್ ಖಾನ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. 18 ನೇ ಐಪಿಎಲ್ ಆರಂಭವನ್ನು ಕಾಣುವ ಈ ಭವ್ಯ ಕಾರ್ಯಕ್ರಮವು ಕ್ರಿಕೆಟ್ ಮತ್ತು ಮನರಂಜನೆಯ ಅದ್ಭುತ ಅನುಭವ ನೀಡುತ್ತದೆ, ಸಲ್ಮಾನ್ ಖಾನ್ ತಮ್ಮ ಮುಂಬರುವ ಚಿತ್ರ ಸಿಕಂದರ್ ಅನ್ನು ಪ್ರಚಾರ ಮಾಡಲು ಸಹ ವೇದಿಕೆಯನ್ನು ವೇದಿಕೆ ಹುಡುಕುತ್ತಿದ್ದು, ಇದೀಗ ಈ ಬಾರಿಯ ಐಪಿಎಲ್ ಸಲ್ಮಾನ್ಗೆ ವರದಾನವಾಗಲಿದೆ.
2025 ರ ಐಪಿಎಲ್ ಉದ್ಘಾಟನಾ ಸಮಾರಂಭ ಯಾವಾಗ.? ಎಲ್ಲಿ.?
2025 ರ ಐಪಿಎಲ್ ಉದ್ಘಾಟನಾ ಸಮಾರಂಭವು 22, ಮಾರ್ಚ್, 2025 ರಂದು ಸಂಜೆ 6:00 ಗಂಟೆಗೆ ನಿಗದಿಯಾಗಿದೆ. ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಋತುವಿನ ಮೊದಲ ಪಂದ್ಯದ ಟಾಸ್‌ಗೆ ಸ್ವಲ್ಪ ಮೊದಲು ಸಮಾರಂಭ ಕಾರ್ಯಕ್ರಮ ನಡೆಯಲಿದೆ. ಕೋಲ್ಕತ್ತಾದ ಐಕಾನಿಕ್ ಈಡನ್ ಗಾರ್ಡನ್ಸ್‌ನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು. ಪ್ರಪಂಚದಾದ್ಯಂತದ ಅಭಿಮಾನಿಗಳು ಜಿಯೋ ಹಾಟ್‌ಸ್ಟಾರ್ ಮತ್ತು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಈ ಬಾರಿಯ ಐಪಿಎಲ್ ನೇರಪ್ರಸಾರವನ್ನು ವೀಕ್ಷಿಸಬಹುದು.
ಸ್ಟೇಡಿಯಂನಲ್ಲಿ ಮಿಂಚಲಿರುವ ಬಾಲಿವುಡ್ ತಾರೆಯರು.!
ಶಾರುಖ್ ಖಾನ್, ಪ್ರಿಯಾಂಕಾ ಚೋಪ್ರಾ ಮತ್ತು ಸಲ್ಮಾನ್ ಖಾನ್ ಅವರ ಉಪಸ್ಥಿತಿಯು ಸಮಾರಂಭವನ್ನು ಇನ್ನಷ್ಟು ಮೆರಗುಗೊಳಿಸಲಿದೆ. ಕೆಕೆಆರ್‌ನ ಸಹ-ಮಾಲೀಕ ಶಾರುಖ್ ಖಾನ್, ತಮ್ಮ ತಂಡವು ಆರಂಭಿಕ ಪಂದ್ಯದಲ್ಲಿ ಆರ್‌ಸಿಬಿಯನ್ನು ಎದುರಿಸುವಾಗ ಹುರಿದುಂಬಿಸುವ ನಿರೀಕ್ಷೆಯಿದೆ. ಶಾರುಖ್ ಅವರ ಹಾಜರಾತಿಯು ಅಭಿಮಾನಿಗಳಿಗೆ ಪ್ರಮುಖ ಆಕರ್ಷಣೆಯಾಗಿದ್ದು, ಕೆಕೆಆರ್‌ಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತಿದೆ.
ಜಾಗತಿಕ ಮಟ್ಟದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಸೂಪರ್‌ಸ್ಟಾರ್ ಪ್ರಿಯಾಂಕಾ ಚೋಪ್ರಾ ಈ ಕಾರ್ಯಕ್ರಮಕ್ಕೆ ಅಂತರರಾಷ್ಟ್ರೀಯ ಮೆರುಗನ್ನು ನೀಡಲಿದ್ದಾರೆ. ಮತ್ತೊಂದೆಡೆ ಸಲ್ಮಾನ್ ಖಾನ್ ತಮ್ಮ ಬಹುನಿರೀಕ್ಷಿತ ಆಕ್ಷನ್ ಚಿತ್ರ ‘ಸಿಕಂದರ್’ ಅನ್ನು ಪ್ರಚಾರ ಮಾಡಲು ಗಮನ ಸೆಳೆಯಲಿದ್ದಾರೆ.
ಈ ಮೂರು ಸೆಲೆಬ್ರೆಟಿಗಳ ಉಪಸ್ಥಿತಿ ಮಾತ್ರವಲ್ಲಿದೆ ಇನ್ನೂ ಅನೇಕರು ಈ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮಾಹಿತಿ ಪ್ರಕಾರ ವಿಕ್ಕಿ ಕೌಶಲ್ ಮತ್ತು ಸಂಜಯ್ ದತ್ ಕೂಡ ಭಾಗವಹಿಸಲಿದ್ದಾರೆ. ಜೊತೆಗೆ ಅರಿಜಿತ್ ಸಿಂಗ್, ಶ್ರದ್ಧಾ ಕಪೂರ್ ಮತ್ತು ವರುಣ್ ಧವನ್ ಕೂಡ ಕಾಣಿಸಿಕೊಳ್ಳಲಿದ್ದಾರೆ.