ಅಗಸ್ಟಾ ವೆಸ್ಟ್​ಲ್ಯಾಂಡ್ ಕೇಸ್​: ಮಧ್ಯವರ್ತಿ ರಾಜೀವ್ ಸಕ್ಸೇನಾಗೆ ಮಧ್ಯಂತರ ಜಾಮೀನು

ನವದೆಹಲಿ: ಅಗಸ್ಟಾವೆಸ್ಟ್​ಲ್ಯಾಂಡ್ ಕಂಪನಿಯಿಂದ 3,600 ಕೋಟಿ ರೂಪಾಯಿಗೆ ವಿವಿಐಪಿ ಹೆಲಿಕಾಪ್ಟರ್​ ಖರೀದಿ ಹಗರಣಕ್ಕೆ ಸಂಬಂಧಿಸಿ ದುಬೈ ಮೂಲದ ವ್ಯಾಪಾರಿ ಮಧ್ಯವರ್ತಿ ರಾಜೀವ್ ಸಕ್ಸೇನಾಗೆ ದೆಹಲಿ ಕೋರ್ಟ್​ ಶುಕ್ರವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಎರಡು ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಒಂದು ಶ್ಯೂರಿಟಿಯನ್ನು ಡಿಸೆಂಬರ್ 11ರೊಳಗೆ ಪೂರೈಸಬೇಕು ಎಂಬ ಷರತ್ತನ್ನೂ ಕೋರ್ಟ್ ವಿಧಿಸಿದೆ. ಜಾಮೀನು ನೀಡುವ ಕೋರ್ಟ್ ತೀರ್ಮಾನಕ್ಕೆ ಸಿಬಿಐ ವಿರೋಧ ವ್ಯಕ್ತಪಡಿಸಿದ್ದು, ಇದಕ್ಕೆ ಉತ್ತರ ನೀಡುವುದಕ್ಕೆ ಸಮಯಾವಕಾಶವನ್ನೂ ಅದು ಕೇಳಿದೆ. … Continue reading ಅಗಸ್ಟಾ ವೆಸ್ಟ್​ಲ್ಯಾಂಡ್ ಕೇಸ್​: ಮಧ್ಯವರ್ತಿ ರಾಜೀವ್ ಸಕ್ಸೇನಾಗೆ ಮಧ್ಯಂತರ ಜಾಮೀನು