ಜಾತ್ಯತೀತವಾಗಿ ಎಲ್ಲ ವರ್ಗದ ಜನರ ಸಮಸ್ಯೆ ಪರಿಹರಿಸುವವರನ್ನು ಆಯ್ಕೆ ಮಾಡಲು ರಂಭಾಪುರಿಶ್ರೀಗಳ ಕರೆ

ಹುಬ್ಬಳ್ಳಿ: ಒಳ್ಳೆಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ. ಜಾತ್ಯತೀತವಾಗಿ ಎಲ್ಲ ವರ್ಗದ ಜನರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವವರನ್ನು ಆಯ್ಕೆ ಮಾಡಿ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಕುಂದಗೋಳ ಮತ್ತು ಚಿಂಚೋಳಿ ಮತದಾರರಿಗೆ ಸಲಹೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದರು. ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಸೂಕ್ತ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಧರ್ಮ ಒಡೆಯಲು ಯತ್ನಿಸಿದವರು ತಕ್ಕ ಪ್ರತಿಫಲ ಪಡೆದಿದ್ದಾರೆ
ವೀರಶೈವ ಲಿಂಗಾಯತತ ಧರ್ಮವನ್ನು ಒಡೆಯಲು ಯತ್ನಿಸಿದವರು ಸೂಕ್ತ ಪ್ರತಿಫಲ ಅನುಭವಿಸಿದ್ದಾರೆ. ಮತ್ತೆ ಯಾರಾದರೂ ಧರ್ಮ ಒಡೆಯಲು ಯತ್ನಿಸಿದರೆ ಜನರೇ ಸೂಕ್ತ ರೀತಿಯಲ್ಲಿ ಪಾಠ ಕಲಿಸುತ್ತಾರೆ ಎಂದು ರಂಭಾಪುರಿಶ್ರೀಗಳು ಎಚ್ಚರಿಸಿದರು.

ಹುಬ್ಬಳ್ಳಿ-ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ವಿನಯ್​ ಕುಲಕರ್ಣಿ ಅವರು ತಲೆಬಾಗಿ ಬಂದು ಆಶೀರ್ವಾದ ಪಡೆದರು ಎಂದು ಹೇಳಿದರು.

ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ. ಇವುಗಳಲ್ಲಿ ಅನ್ಯಭಾವ ಹುಡುಕುವುದು ತರವಲ್ಲ. ರಾಜಕೀಯದಲ್ಲಿ ಧರ್ಮಪೀಠಗಳನ್ನು ಎಳೆದು ತರುವುದು ಸರಿಯಲ್ಲ ಎಂದರು.
ವೀರಶೈವ ಮತ್ತು ಲಿಂಗಾಯತ ಧರ್ಮವನ್ನು ಒಡೆಯಲು ಪ್ರಯತ್ನಿಸಿದವರಲ್ಲಿ ಕೆಲವರು ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇನ್ನು ಕೆಲವರು ತಪ್ಪನ್ನು ಮುಂದುವರಿಸಿದ್ದಾರೆ. ಅಂತವರಿಗೆ ಬೆಲೆ ಕೊಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು
ಜನತೆ ಲೋಕಸಭೆ ಚುನಾವಣೆ ಬರುವವರೆಗೂ ಸಹನೆಯಿಂದ ಇರಬೇಕು. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು.ಇದು ನನ್ನ ಸ್ವಂತ ಅಪೇಕ್ಷೆ ಕೂಡ ಆಗಿದೆ. ನಾನು ಹೋದೆಡೆಯಲೆಲ್ಲಾ ಜನರು ಪ್ರಧಾನಿ ಮೋದಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

Leave a Reply

Your email address will not be published. Required fields are marked *