ಬೂದಿಹಳ್ಳಿಯಲ್ಲಿ ರೋಗಭೀತಿ

ಚಳ್ಳಕೆರೆ: ತಾಲೂಕಿನ ಬೂದಿಹಳ್ಳಿ ಗ್ರಾಮದಲ್ಲಿ ಸ್ವಚ್ಛತೆ ಕೊರತೆಯಿಂದ ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗಭೀತಿ ಕಾಡುತ್ತಿದೆ.

ಅಂದಾಜು ಒಂದು ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದ ರಸ್ತೆ, ಚರಂಡಿ ಅವ್ಯವಸ್ಥೆಗಳ ಆಗರವಾಗಿದೆ. ತಿಂಗಳಿಂದ ಚರಂಡಿ ಸ್ವಚ್ಛತೆ ಕಾರ್ಯ ಸ್ಥಗಿತಗೊಂಡಿದ್ದು, ಹೂಳು ತುಂಬಿಕೊಂಡು ಗಿಡ-ಗಂಟೆ ಬೆಳೆದಿವೆ. ಮಲಿನ ನೀರು ಹರಿಯದೇ ಮುಡುಗಟ್ಟಿ, ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಾಗಿದೆ.

ಗ್ರಾಮ ಸ್ವಚ್ಛತೆ ಸಿಬ್ಬಂದಿಗೆ 20 ತಿಂಗಳಿಲ್ಲ ವೇತನ ನೀಡದ ಹಿನ್ನೆಲೆಯಲ್ಲಿ ಅವರು ಸ್ವಚ್ಛತೆ ಕಾರ್ಯದ ಬಗ್ಗೆ ನಿರ್ಲಕ್ಷೃ ಮಾಡುತ್ತಿದ್ದಾರೆ. ಗ್ರಾಪಂ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪರಿಣಾಮವಾಗಿಲ್ಲ. ಸೂಕ್ತ ಕ್ರಮಕೈಗೊಳ್ಳದಿದ್ದರೆ, ಪ್ರತಿಭಟನೆ ಮಾಡುವುದಾಗಿ ಗ್ರಾಮಸ್ಥರಾದ ಟಿ.ಗಿರೀಶ್, ಇ.ಈರಣ್ಣ, ಲಂಕೇಶ್, ಪಿ.ಅಶೋಕ್ ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *