More

    ಕೆಎಸ್ಆರ್​ಟಿಸಿ ಸ್ಲೀಪರ್ ಕೋಚ್ ವೋಲ್ವೋ ಬಸ್​ನಲ್ಲಿ ಬೆಂಕಿ: ಪ್ರಯಾಣಿಕರು ಪಾರು

    ಚಿತ್ರದುರ್ಗ: ಕೆಎಸ್ಆರ್​ಟಿಸಿ ಸ್ಲೀಪರ್ ಕೋಚ್ ಹಿರಿಯೂರು ತಾಲೂಕಿನ ಮೇಟಿಕುರ್ಕೆ ಗ್ರಾಮದ ಸಮೀಪ ಅಗ್ನಿಗಾಹುತಿಯಾಗಿದೆ. ಮೇಟಿಕುರ್ಕೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಘಟನೆ ನಡೆದಿದ್ದು, ಬಸ್​ನಲ್ಲಿ ಬೆಂಕಿ ಕಾಣಿಸಿಕೊಂಡ ಕ್ಷಣದಲ್ಲೇ ಸಂಪೂರ್ಣವಾಗಿ ಹೊತ್ತಿ ಉರಿದಿದೆ.

    ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮನವಾಗಿದ್ದು ಅಗ್ನಿ ನಂದಿಸಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಬೆಳಗಾವಿಯಿಂದ ಬೆಂಗಳೂರು ಕಡೆಗೆ ವೋಲ್ವೋ ಬಸ್ ಆಗಮಿಸುತ್ತಿತ್ತು.

    ಅದೃಷ್ಟವಶಾತ್ ವೋಲ್ವೋ ಬಸ್​ನಲ್ಲಿದ್ದ ಪ್ರಯಾಣಿಕರು ಪಾರಾಗಿದ್ದಾರೆ. ಹಿರಿಯೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ದಾಖಲಾಗಿದ್ದು, ಬಸ್​ನಲ್ಲಿ ಎಷ್ಟು ಪ್ರಯಾಣಿಕರು ಇದ್ದರು ಎಂಬ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts