ಸೂರ್ಯ ನಮಸ್ಕಾರಕ್ಕೆ ಧಾರ್ಮಿಕ ಮನ್ನಣೆ

ಚಿತ್ರದುರ್ಗ: ಸೂರ್ಯ ನಮಸ್ಕಾರದಲ್ಲಿ ಧಾರ್ಮಿಕ ಆಚರಣೆಯಿದೆ ಎಂದು ಪತಂಜಲಿ ಯೋಗ ಪೀಠದ ಯೋಗ ಪ್ರಚಾರಕ ರವಿ ಕೆ.ಅಂಬೇಕರ್ ಹೇಳಿದರು.

ನಗರದ ಗೋನೂರು ರಸ್ತೆಯ ಖಲೀಲಿ ಲೇಔಟ್‌ನಲ್ಲಿ ಚೇತನ ಮಹಿಳಾ ಯೋಗ ಸಮಿತಿಯಿಂದ ಶನಿವಾರ ಆಯೋಜಿಸಿದ್ದ ಯೋಗ ಶಿಬಿರದಲ್ಲಿ ಮಾತನಾಡಿ, ಎಲ್ಲ ಧರ್ಮಿಯರೂ ಸೂರ್ಯನನ್ನು ಆರಾಧಿಸುತ್ತಾರೆ. ಆದರೆ, ಪದ್ಧತಿಗಳು ಬೇರೆ ಬೇರೆಯಾಗಿವೆ ಎಂದರು.

ಆಯುರ್ವೇದದಲ್ಲಿ ಸೂರ್ಯನನ್ನು ಆರೋಗ್ಯ ದೇವತೆ ಎಂದು ಬಣ್ಣಿಸಲಾಗಿದೆ. ಸೂರ್ಯನಮಸ್ಕಾರ ಒಂದು ಸಂಪೂರ್ಣ ವ್ಯಾಯಾಮವಾಗಿದೆ. ಇದರಿಂದ ಮನುಷ್ಯನ ಶರೀರದ ಎಲ್ಲಾ ಅಂಗಗಳು ಬಲಿಷ್ಠಗೊಳ್ಳುತ್ತವೆ ಎಂದು ಹೇಳಿದರು.

ಹೊಟ್ಟೆ, ಕರಳು, ಹೃದಯ ಹಾಗೂ ಶ್ವಾಸಕೋಶಗಳು ಸ್ವಾಸ್ಥವಾಗುತ್ತವೆ. ಬೆನ್ನುಮೂಳೆ, ಸೊಂಟದ ಸಮಸ್ಯೆಗಳು ಕಡಿಮೆಯಾಗಿ ಆರೋಗ್ಯ ಸಮತೋಲನವಾಗುತ್ತದೆ ಎಂದರು.

ಯೋಗ ಸಮಿತಿ ಕಾರ್ಯದರ್ಶಿ ಶಿವರುದ್ರಮ್ಮ, ಶಿಕ್ಷಕಿ ಲಲಿತಾ ಜಗನ್ನಾಥ ಇತರರಿದ್ದರು.

Leave a Reply

Your email address will not be published. Required fields are marked *