ವಿಶ್ವ ಕ್ಯಾನ್ಸರ್ ದಿನದ ನಿಮಿತ್ತ ಚಿತ್ರದುರ್ಗದಲ್ಲಿ ಬಾಯಿ ಕ್ಯಾನ್ಸರ್ ತಪಾಸಣೆ

ಚಿತ್ರದುರ್ಗ : ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ರೋಗ ಜಾಗೃತಿ ಹಾಗೂ ಬಾಯಿ ಕ್ಯಾನ್ಸರ್ ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.

ಎಸ್‌ಜೆಎಂ ದಂತ ವೈದ್ಯಕೀಯ ಮಹಾವಿದ್ಯಾಲಯ, ರೋಟರಿ ಕ್ಲಬ್ ಚಿನ್ಮೂಲಾದ್ರಿ, ಯೂಥ್ ರೆಡ್‌ಕ್ರಾಸ್ ಸೊಸೈಟಿ ಮತ್ತು ಭಾರತೀಯ ದಂತ ವೈದ್ಯಕೀಯ ಪರಿಷತ್ ಶಿಬಿರ ಆಯೋಜಿಸಿದ್ದವು.

ಶಿಬಿರ ಉದ್ಘಾಟಿಸಿದ ಎಸ್‌ಜೆಎಂ ವಿದ್ಯಾಪೀಠದ ಕಾರ್ಯ ನಿರ್ವಾಹಣಾ ನಿರ್ದೇಶಕ ಡಾ.ಈ. ಚಿತ್ರಶೇಖರ್, ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮ, ಕ್ಯಾನ್ಸರ್ ನಿಯಂತ್ರಣ ಕುರಿತು ವಿವರಿಸಿದರು.

ದಂತ ವೈದ್ಯ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಆರ್. ಗೌರಮ್ಮ ಮಾತನಾಡಿದರು. ಶಿಬಿರದಲ್ಲಿ 160ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ಮಾಡಲಾಯಿತು. ದಂತ ವೈದ್ಯಕೀಯ ಮಹಾವಿದ್ಯಾಲಯದ ಡಾ. ನಾಗರಾಜಪ್ಪ, ಡಾ. ಜಯಚಂದ್ರ, ಡಾ. ವಿಶ್ವನಾಥ, ಡಾ.ಟಿ.ಸಿ. ಹರಿಣಿ ಹಾಗೂ ಡಾ.ಆರ್. ದೀಪಾ, ರೆಡ್‌ಕ್ರಾಸ್ ಸೊಸೈಟಿ ಛೇರ್‌ಮನ್ ಮಹೇಂದ್ರನಾಥ, ರೋಟರಿ ಚಿನ್ಮೂಲಾದ್ರಿ ಬಸವರಾಜಪ್ಪ, ಚೆಲುವರಾಜ್, ನಾಗರಾಜ್ ಸಂಗಮ್ ಇದ್ದರು.

ಹೆಚ್ಚಿನ ವಿವರಕ್ಕೆ ವಿಜಯವಾಣಿ ಓದಿ