More

    ಯೋಗಿ ವೇಮನ ನನೆದ ಕೋಟೆ ಜನ

    ಚಿತ್ರದುರ್ಗ: ಅನೇಕ ಅನಿಷ್ಠಗಳ ವಿರುದ್ಧ ಜಾಗೃತಿ, ಹೋರಾಟದ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ಸಾವಿರಾರು ವರ್ಷಗಳ ಹಿಂದೆ ಶ್ರಮಿಸಿದ ಎಲ್ಲ ದಾರ್ಶನಿಕರಲ್ಲಿ ಮಹಾಯೋಗಿ ವೇಮನರು ಅಗ್ರಗಣ್ಯರು ಎಂದು ಶಾಸಕ ಜಿ.ಎಚ್ ತಿಪ್ಪಾರೆಡ್ಡಿ ಹೇಳಿದರು.

    ಜಿಲ್ಲಾಡಳಿತದಿಂದ ತರಾಸು ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತಿ ಉದ್ಘಾಟಿಸಿ ಮಾತನಾಡಿದರು.

    ಮಹನೀಯರ ಸಾಧನೆ, ಸಮಾಜ ಸೇವೆ ಕುರಿತು ಯುವ ಪೀಳಿಗೆಯಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಸರ್ಕಾರ 32ಕ್ಕೂ ಹೆಚ್ಚು ಜಯಂತ್ಯುತ್ಸವಗಳನ್ನು ಆಚರಿಸುತ್ತಿದೆ. ಶ್ರೀಮಂತ ಕುಟುಂಬದ ವೇಮನರು, ಭೋಗ ಜೀವನದಿಂದ ಹೊರಬಂದು ವೈರಾಗ್ಯದೆಡೆ ಹೊರಳಿದರು. ಅವರ ಆದರ್ಶಗಳನ್ನು ನಿತ್ಯಜೀವನದಲ್ಲಿ ನಾವಿಂದು ಅಳವಡಿಸಿಕೊಳ್ಳಬೇಕಿದೆ ಎಂದರು.

    ಉಪನ್ಯಾಸಕ ಎಸ್.ಬಿ ಭೀಮಾರೆಡ್ಡಿ ಮಾತನಾಡಿ, ನಾವಿಂದು 608ನೇ ವೇಮನ ಜಯಂತಿ ಆಚರಿಸುತ್ತಿದ್ದೇವೆ. ಆದರೆ, ವೇಮನರ ಕಾಲದ ಬಗ್ಗೆ ಹಲವು ಜಿಜ್ಞಾಸೆಗಳಿವೆ. ಆದರೂ ಹಲವು ವಿದ್ವಾಂಸರ ಒಪ್ಪಿಗೆಯಂತೆ 1412-1484 ವೇಮನರ ಜೀವಿತಾವಧಿಯಾಗಿತ್ತು ಎಂದು ತಿಳಿಸಿದರು.

    ಆಂಗ್ಲ ವಿದ್ವಾಂಸ ಸಿ.ಪಿ.ಬ್ರೌನ್ ಮೊದಲ ಬಾರಿಗೆ ವೇಮನರ ತತ್ವಗಳನ್ನು ಜಗತ್ತಿಗೆ ಪರಿಚಯಿಸಿದ. 1167 ವಚನಗಳನ್ನು ಸಂಗ್ರಹಿಸಿ ಅವುಗಳ ಪೈಕಿ ಅನೇಕ ವಚನಗಳನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿದ್ದು, ಅತಿ ಹೆಚ್ಚು ಸಂಶೋಧನೆಗೆ ಒಳಗಾದ ದಾರ್ಶನಿಕರಲ್ಲಿ ವೇಮನರು ಒಬ್ಬರು. ಆತ್ಮ ವಿಮರ್ಶೆ ಹಾಗೂ ಆತ್ಮ ಶುದ್ಧಿ ಇದ್ದರೆ ಜಗತ್ತನ್ನೇ ಗೆಲ್ಲಬಹುದೆಂಬ ಸಂದೇಶವನ್ನು ವೇಮನರು ಸಾರಿದ್ದಾರೆ ಎಂದರು.

    ಎಡಿಸಿ ಸಿ.ಸಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಡಿಡಿಪಿಐ ಕೆ.ರವಿಶಂಕರ್‌ರೆಡ್ಡಿ, ನಗರಸಭೆ ಆಯುಕ್ತ ಜಿ.ಟಿ.ಹನುಮಂತರಾಜು, ರೆಡ್ಡಿ ಜನಸಂಘದ ಕಾರ್ಯದರ್ಶಿ ಇಂಟೂರು ಜಯರಾಮರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಡಿ.ಟಿ.ರಾಜೇಂದ್ರರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ ಇತರರಿದ್ದರು.

    ನೀಲಕಂಠೇಶ್ವರ ದೇವಾಲಯದ ಬಳಿಯಿಂದ ವೇಮನರ ಭಾವಚಿತ್ರದ ಮೆರವಣಿಗೆಗೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಿದರು. ಮಾಜಿ ಶಾಸಕ ಎ.ವಿ.ಉಮಾಪತಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts