ಚಿತ್ರದುರ್ಗ: ನಗರದ ಮಾಳಪ್ಪನ ಹಟ್ಟಿ ತೀಕ್ಷ್ಣಅಂಧ ಮಕ್ಕಳ ವಸತಿಯುತ ಶಾಲೆಯಲ್ಲಿರುವ ಒಬ್ಬ ವಿದ್ಯಾರ್ಥಿಗೆ ಇರುವುದು ಎಂಟು ಶಿಕ್ಷಕರು!
ಆದರೂ ಇಲ್ಲಿ ಎಲ್ಲವೂ ಸರಿ ಇದೆ ಎಂದು ವರದಿಕೊಟ್ಟು ಐದು ಲಕ್ಷ ರೂ.ಅನುದಾನ ಬಿಡುಗಡೆಗೆ ಕಾರಣಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ವಿರುದ್ಧ ಸಚಿವೆ ಶಶಿಕಲಾ ಜೊಲ್ಲೆ ಅಸಮಾಧಾನ ವ್ಯಕ್ತಪಡಿಸಿದರು. ಶಾಲೆ ಕುರಿತಂತೆ ಎರಡು ದಿನಗಳಲ್ಲಿ ವರದಿ ಕೊಡುವಂತೆ ಸಿಇಒಗೆ ಆದೇಶಿಸಿದರು.