More

    ಸಭೆಗೆ ಹಾಜರಾಗಿದ್ದೇ ಸದಸ್ಯರ ಭಾಗ್ಯ

    ಚಿತ್ರದುರ್ಗ: ನಗರಸಭೆಗೆ ಚುನಾವಣೆ ಗೆದ್ದು ಎರಡೂ ವರ್ಷ ಸಮೀಪಿಸಿದರೂ ಇಲ್ಲಿಯವರೆಗೂ ಅಧಿಕೃತವಾಗಿ ಸದಸ್ಯರಾಗಿ ನಗರಸಭೆ ಪ್ರವೇಶಿಸುವ ಭಾಗ್ಯ ದೊರೆತಿಲ್ಲ.

    ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಆಗದೇ ಕೌನ್ಸಿಲ್ ಸಭೆಗಳಲ್ಲಿ ಭಾಗವಹಿಸಲಾಗಿಲ್ಲ. ಸದ್ಯಕ್ಕೆ ಬಜೆಟ್ ಪೂರ್ವಭಾವಿ ಸಭೆಗೆ ಹಾಜರಾಗಿದ್ದೇ ನಗರಸಭೆಯ 35 ಸದಸ್ಯರ ಭಾಗ್ಯ ಎನ್ನುವಂತಾಗಿದೆ.

    2020-21ರ ಬಜೆಟ್ ಪೂರ್ವಭಾವಿ ಸಭೆಗೆ ಶುಕ್ರವಾರ ಬನ್ನಿ ಎಂದು ಅಧಿಕಾರಿಗಳು ಸದಸ್ಯರನ್ನು ಆಹ್ವಾನಿಸಿದ್ದರು. ಈ ಮೂಲಕ ಅಂತೂ ನಗರಸಭೆ ಪ್ರವೇಶಿಸಿದ ಸಂತಸ ಸದಸ್ಯರಲ್ಲಿ ಮನೆ ಮಾಡಿತ್ತು.

    90 ಕೋಟಿ ರೂ.ನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸದಸ್ಯರು ನಗರಾಭಿವೃದ್ಧಿಗೆ ನಾನಾ ಸಲಹೆ ಕೊಡಬೇಕಿತ್ತು. ಆದರಲ್ಲಿ ಕೇಳಿ ಬಂದ ಹೆಚ್ಚಿನ ಸಂಖ್ಯೆಯ ಸಲಹೆಗಳು ಆಯಾ ಸದಸ್ಯರ ವಾರ್ಡ್‌ಗೆ ಸೀಮಿತವಾಗಿದ್ದು ವಿಷಾದನೀಯ.

    ಶಶಿಧರ್, ಶ್ರೀದೇವಿ ಚಕ್ರವರ್ತಿ, ತಿಪ್ಪಮ್ಮ ಸೇರಿ ಹಲವರು ತಮ್ಮ ವಾರ್ಡ್‌ಗಳಲ್ಲಿ ಕಸ ನಿರ್ವಹಣೆ, ಕುಡಿವ ನೀರು, ಬೀದಿ ದೀಪ ಸಮಸ್ಯೆಗಳಿಗೆ ಬಜೆಟ್‌ನಲ್ಲಿ ಹಣ ಮೀಸಲಿಡಲು ಸಲಹೆ ನೀಡಿದರು.

    ಬಜೆಟ್ ಮಂಡನೆಗೆ ಮೊದಲು ಕೌನ್ಸಿಲ್ ಅಸ್ತಿತ್ವಕ್ಕೆ ಬರಲಿದೆಯೇ ಎಂಬ ಪ್ರಶ್ನೆ ನಡುವೆ, ನಗರಸಭೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಅಧ್ಯಕ್ಷತೆಯಲ್ಲಿ ಬಜೆಟ್ ಮಂಡನೆಗೆ ಸಿದ್ಧತೆ ನಡೆದಿದೆ. ಆಯುಕ್ತ ಜಿ.ಟಿ.ಹನುಮಂತರಾಜು ಇದ್ದರು.

    ಪೌರಕಾರ್ಮಿಕರ ನೇಮಕಕ್ಕೆ ಮನವಿ: ನಿವೃತ್ತಿ, ಅಕಾಲಿಕ ಸಾವು ಮತ್ತಿತರ ಕಾರಣಕ್ಕೆ ಪೌರಕಾರ್ಮಿಕರ ಸಂಖ್ಯೆ ಕ್ಷೀಣಿಸಿದ್ದು ಹಾಲಿ ಕಾರ್ಮಿಕರ ಮೇಲೆ ಒತ್ತಡ ಹೆಚ್ಚಿದೆ. ಹೊಸ ನೇಮಕಾತಿಗೆ ಆದ್ಯತೆ ನೀಡಬೇಕು. ಗುತ್ತಿಗೆ ವಾಟರ್ ಮನ್‌ಗಳಿಗೆ ಏಳು ತಿಂಗಳ ಬಾಕಿ ವೇತನ ಪಾವತಿಸಬೆಕು. ಕಸ ಸಾಗಣೆ ಟ್ರಾೃಕ್ಟರ್‌ಗಳ ಸಂಖ್ಯೆ ಹೆಚ್ಚಿಸಬೇಕು. ನಗರಸಭೆ ಸಭಾಂಗಣ ನಿರ್ಮಿಸಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷ ಪೊಲೀಸ್ ಡಿ.ಮಲ್ಲಿಕಾರ್ಜುನ್ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts