ಪೌಷ್ಟಿಕ ಆಹಾರದಿಂದ ಕ್ಷಯ ದೂರ

ಚಿತ್ರದುರ್ಗ: ನಗರದ ಕುಂಬಾರಬೀದಿಯ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಸಕ್ರಿಯ ಕ್ಷಯ ರೋಗ ಪತ್ತೆ ಕಾರ್ಯಕ್ರಮದ ಪ್ರಯುಕ್ತ ತಾಯಂದಿರ ಸಭೆ ನಡೆಯಿತು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಕ್ಷಯರೋಗವನ್ನು ಶತ್ರುವನ್ನಾಗಿಸಿ ರೋಗಿಯನ್ನು ನಿಮ್ಮ ಮಿತ್ರರಂತೆ ಕಾಣಬೇಕು. ಸೂಕ್ತ ಚಿಕಿತ್ಸೆಯೊಂದಿಗೆ ಪೌಷ್ಟಿಕ ಆಹಾರ ನೀಡಿದರೆ ರೋಗಿ ಶೀಘ್ರ ಗುಣಮುಖನಾಗುತ್ತಾನೆ ಎಂದರು.

ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮುಗಪ್ಪ ಗರ್ಭಿಣಿ, ಬಾಣಂತಿ ಆರೈಕೆ ಬಗ್ಗೆ ತಿಳಿಸಿದರು. ಅಂಗನವಾಡಿ ಮೇಲ್ವಿಚಾರಕಿ ಕೆ.ಪ್ರತಿಭಾ, ಕಿರಿಯ ಆರೋಗ್ಯ ಸಹಾಯಕಿ ಬಿ.ಮೀನಾಕ್ಷಿ, ಜಿಲ್ಲಾ ಮೇಲ್ವಿಚಾರಕ ರಂಗನಾಥ ರೆಡ್ಡಿ, ಅಂಗನವಾಡಿ ಕಾರ್ಯಕರ್ತರಾದ ಪಿ.ಕೆ.ವಿಮಲಾ, ಕೆ.ಇ. ಜಯಲಕ್ಷ್ಮೀ, ಎಸ್.ಎಚ್.ಮಮತಾ, ಮೀನಾಕ್ಷಿ, ಕವಿತಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *