
ಚಿತ್ರದುರ್ಗ: ಲಾಕ್‌ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಖಾಸಗಿ ಬಸ್‌ಗಳ ಸಂಚಾರ ಪುನರಾರಂಭ ಯಾವಾಗ ಎಂಬ ಪ್ರಶ್ನೆ ಇದೀಗ ಎದುರಾಗಿದೆ.
ಖಾಸಗಿ ಬಸ್ ಮಾಲಿಕರ ಬಗ್ಗೆ ಸರ್ಕಾರದ ಧೋರಣೆ ಏನಿದೆ ಎಂದು ನೋಡಿಕೊಂಡು ಬಸ್‌ಗಳನ್ನು ಓಡಿಸುವ ನಿರ್ಧಾರ ಕೈಗೊಳ್ಳಲು ಮಾಲೀಕರು ಚಿಂತನೆ ನಡೆಸಿದ್ದಾರೆ.
ಮಾರ್ಚ್ 24ರಿಂದ ರಾಜ್ಯದಲ್ಲಿ ಖಾಸಗಿ ಬಸ್‌ಗಳ ಓಡಾಟ ಸ್ಥಗಿತಗೊಂಡಿದೆ. ಲಾಕ್ ಡೌನ್ ಸಡಿಲಿಕೆ ಬಳಿಕ ಕೆಎಸ್‌ಆರ್‌ಟಿಸಿ ಬಸ್‌ಗಳು ಹಂತ, ಹಂತವಾಗಿ ಓಡಾಟ ಶುರು ಮಾಡಿವೆ.
ಖಾಸಗಿ ಬಸ್ ಮಾಲೀಕರು ಮಾತ್ರ ಈ ಉಸಾಬರಿಯೇ ಬೇಡವೆಂದು ಸಾರಿಗೆ ಇಲಾಖೆಗೆ ಸರಂಡರ್ ಮಾಡಿದ ವಾಹನಗಳನು ಈವರೆಗೆ ಹಿಂಪಡೆದಿಲ್ಲ.
ಜೂನ್ 1ರಿಂದ ಕರಾವಳಿ ಪ್ರದೇಶದಲ್ಲಿ ಸೀಮಿತ ಸಂಖ್ಯೆಯಲ್ಲಿ ಖಾಸಗಿ ಬಸ್‌ಗಳನ್ನು ಓಡಿಸಲು ಸಿದ್ಧತೆ ನಡೆದಿದೆ. ಈ ಮಧ್ಯೆ ಖಾಸಗಿ ಬಸ್‌ಗಳ ಪ್ರಾಬಲ್ಯವಿರುವ ರಾಜ್ಯದ ಇತರ ಜಿಲ್ಲೆಗಳ ಮಾಲೀಕರು ಮುಂದೇನು ಎಂದು ಚರ್ಚಿಸಲು ಜೂನ್ 2ರಂದು ತುಮಕೂರಲ್ಲಿ ಸಭೆ ಸೇರಲಿದ್ದಾರೆ.
ಸರಂಡರ್‌ನಿಂದ ರಸ್ತೆ ತೆರಿಗೆ ಹೊರೆ ತಾತ್ಕಾಲಿಕವಾಗಿ ತಪ್ಪಿದೆ. ವಾಹನಗಳು ರಸ್ತೆಗಳಿಯುತ್ತಿದ್ದಂತೆ ರಸ್ತೆ ತೆರಿಗೆ, ವಿಮೆ, ಸಾಲದ ಕಂತು, ಬಡ್ಡಿ, ಡಿಸೇಲ್, ಸಿಬ್ಬಂದಿ ವೇತನ, ನಿರ್ವಹಣೆ ಇತ್ಯಾದಿ ಖರ್ಚು ಎದುರಾಗುತ್ತವೆ.
ಪರಸ್ಪರ ಅಂತರ ಕಾಪಾಡಿಕೊಳ್ಳಬೇಕಾದ ಕಾರಣ ಪ್ರಯಾಣಿಕರ ಸಂಖ್ಯೆ ಕಡಿತ ಆಗುವುದರಿಂದ ಎಷ್ಟರ ಮಟ್ಟಿಗೆ ವರ್ಕ್‌ಔಟ್ ಆಗಲಿದೆ ಎಂಬುದು ಪ್ರಧಾನವಾಗಿ ಚರ್ಚೆಗೆ ಬರಲಿದೆ.
ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಮಂಡ್ಯ, ಮೈಸೂರು, ತುಮಕೂರು, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿ ನಾನಾ ಜಿಲ್ಲೆಗಳ ಬಸ್‌ಗಳ ಮಾಲೀಕರು ಸಭೆಯಲ್ಲಿ ಭಾ ಗವಹಿಸಲಿದ್ದಾರೆ.
ಸಭೆ ನಡೆಸುತ್ತಿರುವ ವಿಷಯ: 1.ಬಸ್‌ಗಳ ಸಂಚಾರ ಆರಂಭಿಸಬೇಕೇ- ಕೆಲ ತಿಂಗಳು ಕಾಯಬೇಕೇ?. 2. ಬಸ್ ಮಾಲೀಕರ ಬೇಡಿಕೆಗಳ ಕುರಿತು ಸರ್ಕಾರದ ನಿಲುವು. 3. ಪ್ರಯಾಣಿಕರ ಸಂಖ್ಯೆ 30ಕ್ಕೆ ಸೀಮಿತವಿರುವ ಕಾರಣ ಎಷ್ಟು ವಾಹನ ಓಡಿಸಬೇಕು. 4. ಪ್ರಯಾಣ ದರ ಏರಿಕೆ ಕುರಿತು.
ಬೇಡಿಕೆಗಳು: 1. ಡಿಸೆಂಬರ್ 2020ರ ವರೆಗೆ ರಸ್ತೆ ತೆರಿಗೆ ಮನ್ನಾ. 2. ಪ್ರಯಾಣ ದರ ಏರಿಕೆಗೆ ಅನುಮತಿ. 3. ಬಡ್ಡಿ ಸಹಿತ ಸಾಲದ ಕಂತು ಪಾವತಿ ಮುಂದೂಡಿಕೆ.
ಕೆಎಸ್‌ಆರ್‌ಟಿಸಿಯು ಪ್ರಯಾಣಿಕರಿಗೆ ಕೊಡುವ ಹಲವು ರಿಯಾಯಿತಿಗಳನ್ನು ಕೊಡಲು ನಾವೂ ಸಿದ್ಧ. ಈಗಾಗಲೇ ವಿದ್ಯಾರ್ಥಿಗಳಿಗೆ ಪಾಸ್ ಕೊಟ್ಟಿದ್ದೇವೆ. ಸರ್ಕಾರದ ಸ್ಪಂದನೆ ಆಧರಿಸಿ ಬಸ್‌ಗಳನ್ನು ಓಡಿಸುವ ಕುರಿತಂತೆ ಸದ್ಯದಲ್ಲೇ ನಿರ್ಧರಿಸಲಾಗುವುದು.
ಬಿ.ಎ.ಲಿಂಗಾರೆಡ್ಡಿ ಜಿಲ್ಲಾಧ್ಯಕ್ಷರು
ಬಸ್ ಮಾಲೀಕರ ಸಂಘ, ಚಿತ್ರದುರ್ಗ