More

    ದುಶ್ಚಟಗಳನ್ನು ತ್ಯಜಿಸಲು ಗಮನ ಕೊಡಿ,ಜಿಲ್ಲಾಧಿಕಾರಿ

    ಚಿತ್ರದುರ್ಗ: ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಎಚ್ಚರ ವಹಿಸಬೇಕು. ತಂಬಾಕು ಮುಕ್ತ ಜಿಲ್ಲೆಗೆ ಎಲ್ಲ ಸಹಕಾರದ ಅಗತ್ಯ ವಿದೆ ಎಂದು ಡಿಸಿ ಜಿಆರ್‌ಜೆ ದಿವ್ಯಾಪ್ರಭು ಹೇಳಿದರು.

    ಜಿಲ್ಲಾಡಳಿತ,ಜಿಪಂ,ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ,ಜಿಲ್ಲಾಆರೋಗ್ಯ ಇಲಾಖೆ,ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಎ ಸ್‌ಜೆಎಂ ಕಾನೂನು ಮಹಾವಿದ್ಯಾಲಯದ ಆಶ್ರಯದಲ್ಲಿ ನಗರದ ಎಸ್‌ಜೆಎಂ ದಂತ ವೈದ್ಯಕೀಯ ಕಾಲೇಜು ಅವರಣದಲ್ಲಿ ಬುಧವಾರ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಜಾಥಾ ಉದ್ಘಾಟಿಸಿ ಅವರು ಮಾತನಾಡಿದರು.

    ತಂಬಾಕು ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪಾರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು, ವಿಶೇಷವಾಗಿ ಯುವ ಜನರು,ತಂಬಾಕು ಸೇವನೆಯಂಥ ದುಶ್ಚಟಗಳನ್ನು ತ್ಯಜಿಸುವ ಕಡೆಗೆ ಗಮನ ನೀಡಬೇಕು. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳ ಬೇಕು.

    ನಮಗೆ ಆಹಾರ ಬೇಕೆ ಹೊರತು ತಂಬಾಕು ಅಲ್ಲ ಎಂಬುದು ಈ ವರ್ಷದ ಘೋಷ ವಾಕ್ಯ. ಧೂಮಪಾನ ಸೇವಿಸುವವರ ಅಕ್ಕಪಕ್ಕದ ಲ್ಲಿದ್ದರೂ ಆರೋಗ್ಯದ ಮೇಲೆ ದುಷ್ಪಾರಿಣಾಮಗಳಾಗುತ್ತವೆ. ತಂಬಾಕು ವ್ಯಸನದಿಂದ ಕುಟುಂಬ ಹಾಗೂ ಸಮಾಜದ ಸ್ವಾಸ್ಥ್ಯವೂ ಹಾಳಾ ಗುತ್ತದೆ. ದುಶ್ಚಟಗಳನ್ನು ತ್ಯಜಿಲು ವ್ಯಸನ ಮುಕ್ತ ಕೇಂದ್ರಗಳ ನೆರವನ್ನು ಪಡೆಯ ಬಹುದೆಂದರು. ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ವಿಜಯ್ ಮಾತನಾಡಿದರು. ಜಾಥಾದ ವೇಳೆ ನಗರದ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಲಾಯಿತು.

    ಡಿಎಚ್‌ಒ ಡಾ.ಆರ್.ರಂಗನಾಥ್,ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ.ಎನ್.ಕಾಶಿ,ಎಸ್‌ಜೆಎಂ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಪ್ರಾಚಾರ‌್ಯೆ ಡಾ.ಆರ್.ಗೌರಮ್ಮ,ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಿ.ಶಿವುಯಾದವ್,ಉಪಾಧ್ಯಕ್ಷ ಜಿ.ಸಿ.ದಯಾನಂದ,ಡೇ ಟ್ ಚಾರಿಟೇಬಲ್ ಸೊಸೈಟಿ ಮುಖ್ಯಸ್ಥ ಡಾ.ಎಚ್.ಎಸ್.ಶಿವಣ್ಣ,ಎಸ್‌ಜೆಎಂ ಕಾನೂನು ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ಎಸ್.ದಿ ನೇಶ್,ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಜಿಲ್ಲಾ ಸಲಹೆಗಾರ ಬಿ.ಎಂ.ಪ್ರಭುದೇವ್,ಸಮಾಜ ಕಾರ್ಯಕರ್ತ ಕೆ.ಎಂ.ತಿಪ್ಪೇಸ್ವಾಮಿ ಇ ತರರು ಇದ್ದರು.

    ಕೋಟ್..
    ಎನ್‌ಟಿಸಿಪಿ ಮಾಹಿತಿ ಪ್ರಕಾರ ತಂಬಾಕು ಸೇವನೆಯಲ್ಲಿ ರಾಜ್ಯದಲ್ಲಿ ಚಿತ್ರದುರ್ಗ ಜಿಲ್ಲೆ 2ನೇ ಸ್ಥಾನದಲ್ಲಿದೆ. ಹಾಗಾಗಿ ಜಿಲ್ಲೆಯಲ್ಲಿ ತಂ ಬಾಕು ದುಷ್ಪಾರಿಣಾಮಗಳ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
    ಎಂ.ವಿಜಯ್,ಹಿರಿಯ ಸಿವಿಲ್ ನ್ಯಾಯಾಧೀಶ,ಚಿತ್ರದುರ್ಗ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts