More

    ದೇವರಾಜ ಅರಸು ಸಂಸ್ಥೆಯಲ್ಲಿ ಸಾಂಸ್ಕೃತಿಕ ಸಂಭ್ರಮ

    ಚಿತ್ರದುರ್ಗ: ನಗರದ ದೇವರಾಜ ಅರಸು ಶಿಕ್ಷಣ ಸಂಸ್ಥೆಯ 35ನೇ ವಾರ್ಷಿಕೋತ್ಸವ ಅಂಗವಾಗಿ ಸಂಸ್ಥೆ ಆವರಣದಲ್ಲಿ ಜ. 24-26 ರ ವರೆಗೆ 3 ದಿನಗಳ ಕಾಲ ಡೆಸ್ಟಿನಿ-2020 ಸಾಂಸ್ಕೃತಿಕ ಸಮಾರಂಭ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ, ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಹೇಳಿದರು.

    ಹಿಂದುಳಿದ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡುವ ಉದ್ದೇಶದಿಂದ ಸ್ಥಾಪಿಸಲಾದ ಸಂಸ್ಥೆ ಸಾರ್ಥಕ 35 ವರ್ಷ ಪೂರೈಸಿದೆ. 50 ವಿದ್ಯಾರ್ಥಿಗಳಿಂದ ಆರಂಭವಾಗಿ ಇಂದು 5500 ವಿದ್ಯಾರ್ಥಿಗಳನ್ನು ಹೊಂದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

    ಸಂಸ್ಥೆಯಲ್ಲಿ ಓದಿ ಉನ್ನತ ಸ್ಥಾನಗಳಲ್ಲಿರುವ 35 ಗಣ್ಯರನ್ನು ಇದೇ ವೇಳೆ ಸನ್ಮಾನಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

    ಸಂಸ್ಥೆಯ ಸಿಇಒ ಎಂ.ಸಿ.ರಘುಚಂದನ್ ಮಾತನಾಡಿ, 24ರ ಸಂಜೆ 4ಕ್ಕೆ ಸಮಾರಂಭ ಆರಂಭ ವಾಗಲಿದ್ದು ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಉದ್ಘಾಟಿಸುವರು ಎಂದು ಸಂಸ್ಥೆಯ ಸಿಇಒ ಎಂ.ಸಿ.ರಘುಚಂದನ್‌ತಿಳಿಸಿದರು.

    ಅತಿಥಿಗಳಾಗಿ ನಟಿ ರಾಗಿಣಿ ದ್ವಿವೇದಿ, ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್, ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಎಂಎಲ್‌ಸಿ ಎನ್.ರವಿಕುಮಾರ್, ನಿವೃತ್ತ ಪ್ರಾಂಶುಪಾಲೆ ಪದ್ಮಾವತಿ ಪಾಲಯ್ಯ, ಸಂಸ್ಥೆ ಆಡಳಿತಾಧಿಕಾರಿ ಎಚ್.ಚಂದ್ರಕಲಾ, ಡಿವೈಎಸ್ಪಿ ಪಾಂಡುರಂಗ, ಎಸ್‌ವಿಬಿಇಡಿ ಕಾಲೇಜು ಪ್ರಾಂಶುಪಾಲ ಇ.ರುದ್ರಮುನಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಪ್ರಾಣೇಶ್ ತಂಡದಿಂದ ಹಾಸ್ಯ ಸಂಜೆ ಇರುತ್ತದೆ ಎಂದರು.

    25ರ ಸಂಜೆ 4ಕ್ಕೆ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುವರು. 26ರ ಸಂಜೆ 4ಕ್ಕೆ ನಡೆವ ಕಾರ್ಯಕ್ರಮದಲ್ಲಿ ಗಾಯಕ ರಘುದೀಕ್ಷಿತ್ ಹಾಗೂ ಚಿತ್ರನಿರ್ದೇಶಕ ಯೋಗರಾಜ್ ಭಟ್, ಡಿಸಿ ಆರ್. ವಿನೋತ್‌ಪ್ರಿಯಾ, ಎಸ್ಪಿ ಡಾ.ಕೆ.ಅರುಣ್ ಮೊದಲಾದ ಗಣ್ಯರು ಪಾಲಗೊಳ್ಳುವರು. ಸಂಜೆ ರಘು ದೀಕ್ಷಿತ್ ತಂಡದಿಂದ ಜಾನಪದ, ಸುಗಮ ಸಂಗೀತ ಕಾರ್ಯ ಕ್ರಮ ಇದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts