ನೀರಿನ ಸಮಸ್ಯೆಗೆ ಶೀಘ್ರ ಮುಕ್ತಿ

ಚಿತ್ರದುರ್ಗ: ಮೆದೇಹಳ್ಳಿ, ಮರುಳಪ್ಪ ಬಡಾವಣೆ ಹಾಗೂ ವಿದ್ಯಾನಗರದ ನೀರಿನ ಸಮಸ್ಯೆಯನ್ನು ಶೀಘ್ರ ಬಗೆಹರಿಸಲಾಗುವುದು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಆಶ್ವಾಸನೆ ನೀಡಿದರು.

ನಗರದ ಮರುಳಪ್ಪ ಬಡಾವಣೆಯಲ್ಲಿ ಭಾನುವಾರ ಚೈತನ್ಯ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಹಾಗೂ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ ಉದ್ಯಾನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಅಮೃತ್ ಸಿಟಿ ಯೋಜನೆಯಡಿ ನಗರಕ್ಕೆ 140 ಕೋಟಿ ರೂ. ಅನುದಾನ ಬಂದಿದೆ. ಅದರಲ್ಲಿ 112 ಕೋಟಿ ರೂ. ಕುಡಿವ ನೀರು ಸರಬರಾಜಿಗೆ ಬಳಸಲಾಗಿದೆ. ಈ ಭಾಗದಲ್ಲಿ ಸಮಸ್ಯೆ ಹೆಚ್ಚಾದಲ್ಲಿ ಬೋರ್ ಕೊರೆಸಿ ನೀರು ನೀಡಲಾಗುವುದು ಎಂದರು.

ಹೆಚ್ಚು ಗಿಡ-ಮರ ಬೆಳೆಸುವ ಜವಾಬ್ದಾರಿ ಸಾರ್ವಜನಿಕರ ಮೇಲಿದೆ. ವಾಯುವಿಹಾರ, ವಿಶ್ರಾಂತಿಗೆ ಪಾರ್ಕ್‌ಗಳಿರಬೇಕು. ಬಡಾವಣೆ ನಿವಾಸಿಗಳು ಈ ಪ್ರದೇಶವನ್ನು ಹಸಿರಾಗಿಸಲು ಪ್ರತಿಜ್ಞೆ ಮಾಡಬೇಕು ಎಂದು ಹೇಳಿದರು.

ಸಂಘದ ಅಧ್ಯಕ್ಷ ರಾಜ್‌ಕುಮಾರ್, ಕಾರ್ಯದರ್ಶಿ ರವಿಶ್ವರ್ ಶಿವಪುರ, ಪದಾಧಿಕಾರಿಗಳಾದ ವೆಂಕಟೇಶ್, ಚಂದ್ರು, ಮಂಜುನಾಥ್, ಹೇಮಾ, ಪದ್ಮಜಾ, ರಮ್ಯಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *