ಮಹಿಳೆ ಕೊಂದ ಇಬ್ಬರ ಬಂಧನ

ಚಿತ್ರದುರ್ಗ: ಹಿರಿಯೂರು ತಾಲೂಕಿನ ಈಶ್ವರಗೆರೆಯ ಎ.ಕೆ.ಕಾಲನಿನಲ್ಲಿ ಮುಂಜಾನೆ ಮಹಿಳೆಯನ್ನು ಕೊಂದ ಪತಿ, ಮಾವನನ್ನು ಬಂಧಿಸಲಾಗಿದೆ ಎಂದು ಎಸ್ಪಿ ಡಾ.ಕೆ.ಅರುಣ್ ತಿಳಿಸಿದರು.

ಕಾಲನಿಯ ರಂಗನಾಥ, ನಾಗರಾಜ ಬಂಧಿತರು. ಆರೇಳು ವರ್ಷದ ಹಿಂದೆ ದುರುಗಮ್ಮ (27) ಎಂಬ ಮಹಿಳೆಯನ್ನು ರಂಗನಾಥ ವಿವಾಹವಾಗಿದ್ದ ಎಂದು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಸಂಸಾರದಲ್ಲಿ ಪದೇ ಪದೆ ಗಲಾಟೆ ಆಗುತ್ತಿತ್ತು. ಶನಿವಾರ ಮಧ್ಯಾಹ್ನ ಪತ್ನಿ ಜತೆ ಜಗಳವಾಡುತ್ತಿದ್ದ, ತಂದೆ ನಾಗರಾಜು ಸಹಾಯದೊಂದಿಗೆ ದುರುಗಮ್ಮನನ್ನು ರಾತ್ರಿ ಕೊಲೆ ಮಾಡಿದ್ದಾನೆ. ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದರು.

ಮಧ್ಯಾಹ್ನವೂ ಬೀಟ್: ನಗರದ ವಿದ್ಯಾನಗರ, ಹನುಮಂತನಗರ ಹಾಗೂ ಜಯಲಕ್ಷ್ಮೀ ಬಡಾವಣೆಯಲ್ಲಿ ಶನಿವಾರ ಮಧ್ಯಾಹ್ನ ನಡೆದ ಕಳವು ಪ್ರಕರಣದ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಇಷ್ಟು ದಿನ ಬೆಳಗ್ಗೆ-ರಾತ್ರಿಯಿದ್ದ ಪೊಲೀಸ್ ಬೀಟ್ ಅನ್ನು ಮಧ್ಯಾಹ್ನ ಸಹ ನಡೆಸಲಾಗುತ್ತದೆ ಎಂದು ತಿಳಿಸಿದರು.

ಮೊಳಕಾಲ್ಮೂರು ತಾಲೂಕು ಕೊನಸಾಗರದಲ್ಲಿ ಒನಕೆಯಿಂದ ಹೊಡೆದು ಪತ್ನಿ ಕೊಂದವನ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *