More

    ಹಳ್ಳಿ ಶಾಲೆ ಮಕ್ಕಳಿಗೆ ಹಿಂದಿ ಕಲಿಸಿ

    ಚಿತ್ರದುರ್ಗ: ಗ್ರಾಮೀಣ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಹಿಂದಿ ಭಾಷೆ ಬೋಧನಾ ಕೌಶಲ್ಯವನ್ನು ರೂಢಿಸಿಕೊಳ್ಳುವಂತೆ ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಅನಂತ್ ಶಿಕ್ಷಕರಿಗೆ ಸಲಹೆ ನೀಡಿದರು.

    ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಹಿಂದಿ ಭಾಷಾ ಶಿಕ್ಷಕರ ಸಂಘದಿಂದ ತರಾಸು ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಹಿಂದಿ ಭಾಷಾ ಶಿಕ್ಷಕರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ದೇಶದ ಅಗ್ರ ಭಾಷೆಗಳಲ್ಲಿ ಹಿಂದಿ ಕೂಡ ಒಂದಾಗಿದೆ. ದೇಶದ 25 ಕೋಟಿ ಜನ ಹಿಂದಿ ಮಾತನಾಡುತ್ತಿದ್ದಾರೆ. ಒಂದು ಕಾಲದಲ್ಲಿ ಶಾಲೆಗಳಲ್ಲಿ ಹಿಂದಿ ಶಿಕ್ಷಕರು ಇರುತ್ತಿರಲಿಲ್ಲ. ಈಗ ಹಿಂದಿಗೆ ಪ್ರತ್ಯೇಕ ಶಿಕ್ಷಕರಿದ್ದು, ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲೆ ಉತ್ತಮ ಸ್ಥಾನ ಗಳಿಸಬೇಕು ಎಂದರು.

    ಅಧ್ಯಕ್ಷತೆ ವಹಿಸಿದ್ದ ಡಿಡಿಪಿಐ ಕೆ.ರವಿಶಂಕರ್‌ರೆಡ್ಡಿ ಮಾತನಾಡಿ, ಮಕ್ಕಳಲ್ಲಿರುವ ಪರೀಕ್ಷೆ ಭಯ ಹೋಗಲಾಡಿಸುವಂತೆ ಶಿಕ್ಷಕರಲ್ಲಿ ಮನವಿ ಮಾಡಿದರು.

    ಸಂಪನ್ಮೂಲ ವ್ಯಕ್ತಿ ಹಾವೇರಿಯ ಗೀತಾ ಸುತ್ತುಕೋಟಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಪ್ಪ ಮಾತನಾಡಿದರು.

    ರಾಜ್ಯಹಿಂದಿ ಭಾಷಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಮಂಜನಾಯ್ಕ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಕಾರ್ಯಾಗಾರದ ನೋಡಲ್ ಅಧಿಕಾರಿ ಮಹಾಲಿಂಗಪ್ಪ, ವಿಷಯ ಪರಿವೀಕ್ಷಕರಾದ ಸವಿತಾ, ಶಿವಣ್ಣ, ಚಂದ್ರಪ್ಪ, ಬಸವರಾಜ್, ಕೆ.ಪಾಪಣ್ಣ, ಕುಬೇರಪ್ಪ, ಗೋವಿಂದರೆಡ್ಡಿ ಇದ್ದರು.

    10ನೇ ತರಗತಿ ವಿದ್ಯಾರ್ಥಿಗಳಿಗೆ ಸಿದ್ದಪಡಿಸಿರುವ ಹಿಂದಿ ಪ್ರಶ್ನೆ ಪತ್ರಿಕೆ ಮಾದರಿಗಳನ್ನು ಈ ವೇಳೆ ಬಿಡುಗಡೆಗೊಳಿಸಲಾಯಿತು. ಶಿಲ್ಪಾ ಪ್ರಾರ್ಥಿಸಿದರು. ಶ್ರೀನಿವಾಸ್ ಸ್ವಾಗತಿಸಿದರು. ಪ್ರಕಾಶ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts